ಕಾರ್ಕಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ

Picture of RB NEWS

RB NEWS

Bureau Report

ಆರ್.ಬಿ. ನ್ಯೂಸ್ ವರದಿ

ಕಾರ್ಕಳ : ಅಬಿಭಜಿತ ಕಾರ್ಕಳ ತಾಲೂಕಿನಲ್ಲಿ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ತಲೆಎತ್ತಿಕೊಂಡಿದ್ದು, ಇನ್ನಷ್ಟು ಶಿಕ್ಷಣ ಸಂಸ್ಥೆಗಳು ಆರಂಭಗೊಳ್ಳುತ್ತಿರುವುದು ಕಾರ್ಕಳ‌ ಅಭಿವೃದ್ಧಿ ಗೆ ಪೂರಕವಾಗಿದೆ ಎಂದು ರಾಜಕೀಯ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ‌‌ ಅಭಿಮತ ವ್ಯಕ್ತಪಡಿಸಿದರು.

ಜೋಡುರಸ್ತೆಯಲ್ಲಿ ಮಾನಸ ವಾಣಿಜ್ಯ ಸಂಕೀರ್ಣ ‌ಉದ್ಘಾಟನೆ ಸಭಾಕಾರ್ಯಕ್ರಮದಲ್ಲಿ ಮುಖ್ಯಾತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಕಾರ್ಕಳದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿದ್ದು ಇಲ್ಲಿಯ ಕಲಿಯುವ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಅನುಕೂಲವಾಗುವಂತ ಕಟ್ಟಡಗಳು ಅಗತ್ಯವಾಗಿ ಬೇಕಾಗಿವೆ.

ಅವುಗಳನ್ನು ನಿರ್ಮಾಣ ಮಾಡುವಂತ ಕೆಲಸಗಳು ಆಗುತ್ತಿವೆ. ಶಿಕ್ಷಣ ಸಂಸ್ಥೆ ಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾರ್ಕಳದ ಸುತ್ತಮುತ್ತ 10,000 ಕ್ಕಿಂತಲೂ ಹೆಚ್ಚು ಜನರು ಓಡಾಡುತ್ತಿದ್ದಾರೆ.
ಹಿರ್ಗಾನದ ಮೂಜೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿದ್ಯಾ ಸಂಸ್ಥೆ ಬರಲಿದೆ ಎಂದರು.‌

ಶಿಕ್ಷಣ ಕ್ರಾಂತಿಕಾರಿ ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಕೇಂದ್ರದ ಸಚಿವರಾಗಿ ದುಡಿದವರು. ಅವರು ಉಳುವವನೇ ಹೊಲದೊಡೆಯ ಯೋಜನೆಯಡಿ ಗೇಣಿ ದಾರರ ಪರವಾಗಿ ಹೋರಾಟ ಮಾಡಿರುವುದು, ಅವರು ಹುಟ್ಟು ಹಾಕಿದ ಕಿಸಾನ್ ಸಭಾಭವನವನ್ನು ಕಟ್ಟಿ ಬೆಳೆಸಿದವರು.
ವೀರಪ್ಪ ಮೊಯ್ಲಿ ಅವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ತಂದಂತಹ ಸಿಇಟಿ ಪ್ರಯೋಜನ ಪಡೆದು ನಾನು ಇಂಜಿನಿಯನ್ ಆಗಿ ಯಶಸ್ಸು ಪಡೆದೆ. ಅದರ ಪ್ರಯೋಜನ ಪಡೆದು ಇಂಜಿನಿಯರ್ ಆಗಿದ್ದೇನೆ. ಇಂದು ನನಗೂ ಧ್ವನಿ ಬಂದಿದೆ ಸಿಇಟಿ ಕ್ರಾಂತಿ ಯೋಜನೆಯಾಗಿದೆ
ಈಗ ಸರಕಾರಕ್ಕೂ ಅವರು ಸಲಹೆ ನೀಡುತ್ತಿದ್ದಾರೆ

ಕಾರ್ಕಳ, ಫೆಬ್ರವರಿ 27:
ವರ್ಷ ಕಾರ್ಕಳದಲ್ಲಿ ನಡೆಯಲಿರುವ ಮಹಾ ಮಸ್ತಕಾಭಿಷೇಕ ಮಹೋತ್ಸವದ ಸಿದ್ಧತೆಗಳ ಹಿನ್ನೆಲೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಅವರು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮಹೋತ್ಸವದ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ, ನಗರದಲ್ಲಿ ರಸ್ತೆ ಸುಧಾರಣೆ, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ಕಾಮಗಾರಿ, ಸ್ವಚ್ಛತೆ, ತಾತ್ಕಾಲಿಕ ವಸತಿ ವ್ಯವಸ್ಥೆ ಹಾಗೂ ಸಮರ್ಪಕ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಕೈಗೊಳ್ಳುವುದು ಅತ್ಯಗತ್ಯ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಕಳ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಉದಯ್ ಶೆಟ್ಟಿ ಮುನಿಯಾಲು ಅವರು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top