ಶ್ರೀ ಮುಜಿಲ್ನಾಯ ದೈವ ಮತ್ತು ಬ್ರಹ್ಮ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Picture of RB NEWS

RB NEWS

Bureau Report


ಭಕ್ತರಿಗೆ ವಿನಂತಿ
ನಮ್ಮ ಜೀವಮಾನದಲ್ಲಿ ಒಮ್ಮೆ ನಡೆಯುವ ಈ ಅಭೂತಪೂರ್ವ ಸುಲಗ್ನಕ್ಕೆ ಎಲ್ಲ ಭಕ್ತಾದಿಗಳು ತ್ರಿಕರಣಪೂರ್ವಕವಾಗಿ ಸಹಕರಿಸಿ, 2026ರ ಹರಕೆ ಜಾತ್ರೆಯೊಳಗೆ ನಡೆಯಲಿರುವ ಭವ್ಯ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಿ, ಶ್ರೀದೈವಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಮ್ರ ವಿನಂತಿ
.

ಶ್ರೀ ಮುಜಿಲ್ನಾಯ ದೈವ ಮತ್ತು ಬ್ರಹ್ಮ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ


ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರ
ಮಕರ ಮಾಸ ದಿನ ೨೪, ಸಲುವ ಮಾಘ ಬಹುಳ ಷಷ್ಠಿ
ತಾ. 07-02-2026 (ಶನಿವಾರ) ರಿಂದ
ಮಕರ ಮಾಸ ದಿನ ೨೫, ಸಲುವ ಮಾಘ ಬಹುಳ ಸಪ್ತಮಿ
ತಾ. 08-02-2026 (ಆದಿತ್ಯವಾರ) ರವರೆಗೆ
ಕಾರ್ಕಳ ತಾಲೂಕು, ಈದು ಬೊಳ್ಕೊಟ್ಟು ಗ್ರಾಮದ ನವೀಕೃತಗೊಂಡ ಶ್ರೀ ಮುಜಿಲ್ನಾಯ ದೈವಸ್ಥಾನದಲ್ಲಿ
ಶ್ರೀ ಮುಜಿಲ್ನಾಯ ದೈವ ಮತ್ತು ಬ್ರಹ್ಮ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಭಕ್ತಿಪೂರ್ವಕವಾಗಿ ಜರುಗಲಿರುತ್ತದೆ.
ದಿನಾಂಕ: 08-02-2026, ಆದಿತ್ಯವಾರ
ಸಮಯ: ಬೆಳಿಗ್ಗೆ ಗಂಟೆ 8.30ಕ್ಕೆ
ಲಗ್ನ: ಕುಂಭ ಲಗ್ನ
ಶ್ರೀ ಕ್ಷೇತ್ರ ಆಸ್ರಣ್ಣರಾದ ಶ್ರೀ ವಿ. ಕೃಷ್ಣ ತಂತ್ರಿಯವರ ನೇತೃತ್ವದಲ್ಲಿ, ಶಾಸ್ತ್ರೋಕ್ತ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಈ ಮಹಾ ಪುಣ್ಯಪ್ರದ ಕಾರ್ಯಕ್ರಮ ನಡೆಯಲಿದೆ.
ಈ ಅತಿ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರಾದ ತಾವೆಲ್ಲರೂ ಬಂಧು–ಮಿತ್ರರೊಡಗೂಡಿ ಭಾಗವಹಿಸಿ ಶ್ರೀ ದೈವಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಮ್ರವಾಗಿ ಅಪೇಕ್ಷಿಸುತ್ತೇವೆ.
ಆಹ್ವಾನಕರು
ಡಾ. ಎಂ. ಎನ್. ರಾಜೇಂದ್ರ ಕುಮಾರ್
ಅಧ್ಯಕ್ಷರು, ಎಸ್.ಡಿ.ಸಿ.ಸಿ. ಬ್ಯಾಂಕ್, ಮಂಗಳೂರು
ಗೌರವಾಧ್ಯಕ್ಷರು – ಬ್ರಹ್ಮಕಲಶೋತ್ಸವ ಸಮಿತಿ
ಭಾಸ್ಕರ ಎಸ್. ಕೋಟ್ಯಾನ್, ಕೊಳಕೆ ಇರ್ವತ್ತೂರು
ಅಧ್ಯಕ್ಷರು – ಬ್ರಹ್ಮಕಲಶೋತ್ಸವ ಸಮಿತಿ
ವಸಂತ್ ಭಟ್
ಶ್ರೀ ಸರಸ್ವತಿ ನಾರಾವಿ
ಅಧ್ಯಕ್ಷರು – ಜೀರ್ಣೋದ್ಧಾರ ಸಮಿತಿ
ಶ್ರೀ ವಿ. ಕೃಷ್ಣ ತಂತ್ರಿ
ಪ್ರಧಾನ ಅರ್ಚಕರು, ಶ್ರೀ ಮುಜಿಲ್ನಾಯ ದೈವಸ್ಥಾನ, ಈದು
ಅಶೋಕ ಕುಮಾರ್ ಜೈನ್
ಪಡ್ಯಾರ ಮನೆ, ಈದು
ಆಡಳಿತ ಮೊಕ್ತಸರರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top