





ವಾರಭವಿಷ್ಯ
ದಿನಾಂಕ : 25-01-2026 ರಿಂದ 31-01-2026 ರವರೆಗೆ
ವಿಶೇಷ ದಿನಗಳು
25-01-2026 : ರಥ ಸಪ್ತಮೀ
27-01-2026 : ಮಧ್ಯ ನವಮೀ
ಮೇಷ
ನಿಮ್ಮ ಉತ್ತಮ ಕಾರ್ಯಗಳಿಗೆ ತಡವಾಗಿಯಾದರೂ ಗೌರವ ಸಿಗಲಿದೆ. ಸಾಡೇ ಸಾತ್ ಶನಿಯ ಪ್ರಭಾವದಿಂದ ಎಲ್ಲವೂ ನೀವು ಯೋಚಿಸಿದಂತೆ ನಡೆಯದಿರಬಹುದು. ಪ್ರೀತಿಪಾತ್ರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಶೀತ, ಕಫ, ಜ್ವರದಿಂದ ಬಳಲುವ ಸಾಧ್ಯತೆ ಇದೆ. ನಿಂದಕರಿಗೆ ಪ್ರತಿಕ್ರಿಯಿಸದೇ ಇರುವುದೇ ಉತ್ತಮ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ದೊರೆಯಲಿದೆ. ಆಲಸ್ಯವನ್ನು ತೊರೆದು ಚುರುಕಾಗಿರಿ. ರವಿ, ಬುಧ, ಕುಜ, ಶುಕ್ರರ ಸೂಚನೆಯಂತೆ ಉದ್ಯೋಗದಲ್ಲಿ ಎಚ್ಚರಿಕೆ ಅಗತ್ಯ.
ವೃಷಭ
ಹೊಸ ಹೂಡಿಕೆಗಳಲ್ಲಿ ಎಚ್ಚರಿಕೆ ಅಗತ್ಯ. ಆಸ್ತಿ ಸಂಬಂಧಿತವಾಗಿ ಕೋರ್ಟ್–ಕಚೇರಿ ಅಲೆದಾಟ ಸಂಭವಿಸಬಹುದು. ಯೋಜಿತ ಕಾರ್ಯಗಳಲ್ಲಿ ದಾರಿ ತಪ್ಪದಂತೆ ಗಮನವಿರಲಿ. ಮುಂಗೋಪದಿಂದ ಸ್ನೇಹಿತರು ಶತ್ರುಗಳಾಗುವ ಸಾಧ್ಯತೆ ಇದೆ. ಕೈಯಲ್ಲಿ ಇರುವ ಹಣಕ್ಕೆ ಅನುಗುಣವಾಗಿ ವ್ಯವಹರಿಸಿ. ಶನಿ–ಗುರುಗಳ ಅನುಗ್ರಹದಿಂದ ಆದಾಯದಲ್ಲಿ ಕೊರತೆ ಇರುವುದಿಲ್ಲ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಗುರುತಿಸಲ್ಪಡಲಿದೆ.
ಮಿಥುನ
ಗುರುವಿನ ಅನುಗ್ರಹದ ಕೊರತೆಯಿಂದ ವ್ಯಾಪಾರ ವ್ಯವಹಾರಗಳು ಮಂದಗತಿಯಲ್ಲಿ ಸಾಗಬಹುದು. ಜನ್ಮ ರಾಶಿಯಲ್ಲಿ ಇರುವ ನಾಲ್ಕು ಗ್ರಹಗಳು ಅಡಚಣೆಗಳನ್ನುಂಟುಮಾಡುವ ಸಾಧ್ಯತೆ ಇದೆ. ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು. ನಿಮ್ಮ ಆಸಕ್ತಿಯ ಹವ್ಯಾಸಗಳಿಗೆ ಗಮನಕೊಡಿ. ಉನ್ನತ ವಿದ್ಯಾಭ್ಯಾಸದ ಪ್ರಯತ್ನಗಳಿಗೆ ಅಡೆತಡೆ ಎದುರಾಗಬಹುದು. ತಾಳ್ಮೆ ಮತ್ತು ಸಂಯಮದಿಂದ ಮುಂದುವರಿದರೆ ಯಶಸ್ಸು ಸಾಧ್ಯ. ದಾಂಪತ್ಯ ಜೀವನದಲ್ಲಿ ಸಹನಶೀಲತೆ ಅಗತ್ಯ.
ಕರ್ಕಾಟಕ
ನವಗ್ರಹಗಳ ಪ್ರತಿಕೂಲ ಸ್ಥಿತಿಯಿರುವುದರಿಂದ ವಿಷ್ಣು ಸಹಸ್ರನಾಮ ಪಠಣ ಹಾಗೂ ನಾಗದೇವರ ಪ್ರಾರ್ಥನೆ ಲಾಭಕಾರಿ. ಸಿಗದ ವಿಷಯಗಳ ಬಗ್ಗೆ ಅತಿಯಾದ ಚಿಂತೆಯಿಂದ ಪ್ರಯೋಜನವಿಲ್ಲ. ಹೊಸ ಹೂಡಿಕೆಗಳಲ್ಲಿ ಎಚ್ಚರಿಕೆ ವಹಿಸಿ. ದೂರ ಪ್ರಯಾಣದ ಯೋಗವಿದೆ. ಕಷ್ಟದ ನಂತರ ಸುಖ ದೊರೆಯಲಿದೆ. ಅನಗತ್ಯ ಟೀಕೆಗಳಿಂದ ದೂರವಿರಿ. ಆರ್ಥಿಕವಾಗಿ ಜಾಗರೂಕತೆಯ ಸಮಯ.
ಸಿಂಹ
ಆಭರಣ ಅಥವಾ ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆಹಾರದಲ್ಲಿ ಮಿತಿಯಿರಲಿ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಅತ್ಯಗತ್ಯ. ಕುಟುಂಬದಲ್ಲಿ ವಿವಾಹ ಸಮಾರಂಭಗಳು ನಡೆಯಬಹುದು. ದೈವಾನುಗ್ರಹ ಉತ್ತಮವಾಗಿದೆ. ಅನಾವಶ್ಯಕ ಮಾತುಗಳಿಂದ ಮನಸ್ತಾಪ ಉಂಟಾಗಬಹುದು. ಹಿತಶತ್ರುಗಳ ಕಾಟ ಹೆಚ್ಚಾಗುವ ಸಾಧ್ಯತೆ ಇದೆ. ನಂಬಿಕಸ್ತರಿಂದಲೇ ಮೋಸವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ಕನ್ಯಾ
ದೈವಾನುಗ್ರಹದಿಂದ ಹೊಸ ವಾಹನ ಖರೀದಿ ಅಥವಾ ಮನೆ ನಿರ್ಮಾಣದ ಯೋಗವಿದೆ. ವ್ಯಾಪಾರ ಕ್ಷೇತ್ರದಲ್ಲಿ ಲಾಭವಿದೆ. ಕಷ್ಟಕಾಲದಲ್ಲಿ ಸಹೋದರರಿಂದ ಸಹಾಯ ದೊರೆಯಲಿದೆ. ನಿಮ್ಮ ನಡೆ–ನುಡಿಗಳು ಇತರರಿಗೆ ಮಾದರಿಯಾಗಿರಲಿ. ನಯವಂಚಕರಿಂದ ಹಣ ನಷ್ಟವಾಗದಂತೆ ಎಚ್ಚರಿಕೆ ವಹಿಸಿ. ಮಕ್ಕಳ ವರ್ತನೆಯಿಂದ ಬೇಸರವಾಗಬಹುದು. ಪತ್ನಿಯ ಸಹಕಾರದಲ್ಲಿ ಕೊರತೆ ಕಾಣಿಸಬಹುದು.
ತುಲಾ
ಆರ್ಥಿಕ ಸಮಸ್ಯೆಗಳು ಕ್ರಮೇಣ ದೂರವಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ದೊರೆಯಲಿವೆ. ಆರೋಗ್ಯ ಸುಧಾರಣೆಯಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಖರ್ಚಿನ ಮೇಲೆ ನಿಯಂತ್ರಣ ಅಗತ್ಯ. ಮಕ್ಕಳ ಉನ್ನತ ಶಿಕ್ಷಣಕ್ಕೆ ಅಡೆತಡೆಗಳು ಎದುರಾಗಬಹುದು. ಶತ್ರುಗ್ರಹಗಳ ಪ್ರಭಾವದಿಂದ ನಿಮ್ಮವರೇ ವಿರೋಧಿಗಳಂತೆ ಕಾಣಬಹುದು. ತಾಳ್ಮೆ ಮತ್ತು ಸಹನೆಯಿಂದ ಮುಂದುವರಿಯಿರಿ.
ವೃಶ್ಚಿಕ
ಗುರು ಅಷ್ಟಮದಲ್ಲಿದ್ದರೂ ತೃತೀಯದಲ್ಲಿರುವ ನಾಲ್ಕು ಗ್ರಹಗಳು ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿವೆ. ರಾಹು–ಶನಿಗೆ ಪರಿಹಾರ ಅಗತ್ಯ. ಮಕ್ಕಳ ವಿರೋಧಾತ್ಮಕ ವರ್ತನೆ ಮನಸ್ತಾಪಕ್ಕೆ ಕಾರಣವಾಗಬಹುದು. ಉದ್ಯಮದಲ್ಲಿ ಬದಲಾವಣೆಗಳು ಸಂಭವಿಸಬಹುದು. ತಾರತಮ್ಯದಿಂದ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಅಸಮರ್ಪಕ ಜೀವನಶೈಲಿಯಿಂದ ಆರೋಗ್ಯ ಹಾನಿಯಾಗಬಹುದು. ಜೂನ್ 2ರಿಂದ ಗುರುಬಲ ಆರಂಭವಾಗಲಿದೆ.
ಧನು
ಉತ್ತಮ ಕಾರ್ಯಗಳಿಂದ ಕೀರ್ತಿ ಮತ್ತು ಯಶಸ್ಸು ದೊರೆಯಲಿದೆ. ಅನಾವಶ್ಯಕ ಖರ್ಚಿನಿಂದ ಆರ್ಥಿಕ ಒತ್ತಡ ಉಂಟಾಗಬಹುದು. ಅವಿವಾಹಿತರಿಗೆ ವಿವಾಹ ಯೋಗವಿದೆ. ವ್ಯಾಪಾರ ವಿಸ್ತರಣೆಗೆ ಅನುಕೂಲಕರ ಸಮಯ. ಮನೆ ಅಥವಾ ವಾಹನ ಖರೀದಿ ಸಾಧ್ಯತೆ ಇದೆ. ಶನಿಗೆ ಪರಿಹಾರ ಅಗತ್ಯ. ಪ್ರಗತಿಗೆ ಸಂಬಂಧಿಸಿದಂತೆ ಹಲವು ಅವಕಾಶಗಳು ದೊರೆಯಲಿವೆ. ಮಾತಿನಲ್ಲಿ ಕಠೋರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಆರೋಗ್ಯದ ಕಡೆ ಗಮನ ಅಗತ್ಯ.
ಮಕರ
ದೈವಾನುಗ್ರಹದ ಕೊರತೆ ಮತ್ತು ಜನ್ಮರಾಶಿಯಲ್ಲಿ ನಾಲ್ಕು ಗ್ರಹಗಳಿರುವುದರಿಂದ ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆ ಅಗತ್ಯ. ಮನೆ ನಿರ್ಮಾಣದ ಕನಸು ನನಸಾಗಲಿದೆ. ಮಕ್ಕಳ ವಿವಾಹ ಪ್ರಯತ್ನಗಳು ಸುಗಮವಾಗಲಿವೆ. ಹಿರಿಯರಿಗೆ ಗೌರವ ನೀಡಿ. ಉಚ್ಚ ಕುಜ ಭೂಮಿ ವ್ಯವಹಾರದಲ್ಲಿ ಲಾಭ ನೀಡಲಿದ್ದಾನೆ. ಶನಿಯ ಪ್ರಭಾವದಿಂದ ಉತ್ತಮ ಲಾಭ ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸ್ಥಾನಮಾನ ಹೆಚ್ಚಾಗಲಿದೆ.
ಕುಂಭ
ತ್ವರಿತ ನಿರ್ಧಾರಗಳಿಂದ ಯಶಸ್ಸು ಸಿಗಲಿದೆ. ನಿಕಟ ಬಂಧುಗಳೊಂದಿಗೆ ವಿರಸ ಉಂಟಾಗಬಹುದು. ದೈನಂದಿನ ಬಳಕೆಯ ವಸ್ತುಗಳ ವ್ಯಾಪಾರದಿಂದ ಉತ್ತಮ ಲಾಭ. ದಾಂಪತ್ಯ ಜೀವನದಲ್ಲಿ ವಿರಸ ತಪ್ಪಿಸಲು ಎಚ್ಚರಿಕೆ ಅಗತ್ಯವೆಂದು ಕೇತು ಸೂಚಿಸುತ್ತಾನೆ. ಉಪವ್ಯವಹಾರಗಳಿಂದ ಲಾಭ ಹೆಚ್ಚಾಗಲಿದೆ. ನಿಮ್ಮ ಸಾತ್ವಿಕ ಗುಣಗಳಿಗೆ ಪ್ರಶಂಸೆ ದೊರೆಯಲಿದೆ. ಸಾಡೇ ಸಾತ್ ಶನಿ ಹಾಗೂ ಜನ್ಮರಾಶಿಯಲ್ಲಿರುವ ರಾಹುವಿಗೆ ಪರಿಹಾರ ಅಗತ್ಯ.
ಮೀನ
ಕೃಷಿ ಚಟುವಟಿಕೆಗಳಲ್ಲಿ ತೊಡಗಿದರೆ ಲಾಭ ಹೆಚ್ಚಾಗಲಿದೆ. ಕಲಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಮಯ. ಮಕ್ಕಳ ವಿಷಯದಲ್ಲಿ ಹೆಚ್ಚಿನ ಗಮನ ಅಗತ್ಯ. ಸರಿಯಾದ ಹೂಡಿಕೆಯಿಂದ ಲಾಭ ಸಾಧ್ಯ. ಅತಿಯಾದ ಆತ್ಮವಿಶ್ವಾಸವೇ ಅಡ್ಡಿಯಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುವುವು. ಲಾಭ ಸ್ಥಾನದಲ್ಲಿರುವ ನಾಲ್ಕು ಗ್ರಹಗಳು ಎಲ್ಲಾ ರೀತಿಯಿಂದ ಸಹಕಾರ ನೀಡಲಿವೆ.






















