
ವಾರಭವಿಷ್ಯ
ದಿನಾಂಕ 04.012026 ರಿಂದ 10.01.2026ರ ತನಕ
ಮೇಷ : ದೈವಾನುಗ್ರಹದ ಕೊರತೆ ಇದೆ ಸಾಡೇ ಸಾತ್ ಶನಿಯ ಪ್ರಭಾವ ಇದೆ. ಕರ್ಮ ಕ್ಷೇತ್ರದಲ್ಲಿ ಶತ್ರುಗಳಂತಿರುವ 4 ಗ್ರಹರು ಜೊತೆಯಾಗಲಿದ್ದಾರೆ. ನೀವು ಎಲ್ಲಾ ವಿಷಯದಲ್ಲಿಯೂ ಎಚ್ಚರವಾಗಿರಬೇಕು, ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ನಿಮ್ಮಲ್ಲಿರುವ ಸಂಪತ್ತನ್ನು ಜೋಪಾನವಾಗಿ ತೆಗೆದಿಡಿರಿ, ಯಾರನ್ನೂ ಹತ್ತಿರಕ್ಕೆ ಸೇರಿಸಿಕೊಳ್ಳದಿರಿ. ನಿಮ್ಮಲ್ಲಿರುವ ಧೈರ್ಯ ನಿಮ್ಮ ನೆರವಿಗೆ ಬರಲಿದೆ. ಹಿರಿಯರನ್ನು ಕಡೆಗಣಿಸುವುದು ಉತ್ತಮವಲ್ಲ.
ವೃಷಭ : ಶನಿ ಮತ್ತು ಗುರು ನಿಮಗೆ ಸಂಪೂರ್ಣ ಅನುಗ್ರಹ ಕೊಡುತ್ತಿರುವುದರಿಂದ ಆರ್ಥಿಕವಾಗಿ ಬಲಾಡ್ಯರಾಗುವಿರಿ, ಒಂದು ಕಾಲದಲ್ಲಿ ನಷ್ಟ ಉಂಟುಮಾಡಿದ ಯೋಜನೆಗಳೇ ನಿಮಗೆ ಲಾಭತರಲಿದೆ. ಸಾಮಾನ್ಯ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಬೇಡಿರಿ. ಹೊಸ ಉದ್ಯಮವನ್ನು ಆರಂಭಿಸುವ ಸಾಧ್ಯತೆ ಇರುತ್ತದೆ. ನೃತ್ಯ ಕ್ಷೇತ್ರದಲ್ಲಿ ಇರುವವರಿಗೆ ಶುಭವಾಗಲಿದೆ. ಉನ್ನತ ಸ್ಥಾನಕ್ಕೆ ಬೇಕಾದ ಅರ್ಹತೆಯನ್ನು ಪಡೆಯುವಿರಿ.
ಮಿಥುನ ಅಷ್ಟಮದಲ್ಲಿ ರವಿ ಬುಧ ಕುಜ, ಶುಕ್ರ ಪರಸ್ಪರ ವೈರಿಗಳು ಜೊತೆಯಾಗುವುದರಿಂದ ಮಾನಸಿಕವಾಗಿ ಶಾರೀರಿಕವಾಗಿ ನೀವು ಎಚ್ಚರವಾಗಿರಬೇಕು. ದೇವಿ ಲಲಿತಾ ಸಹಸ್ರನಾಮ ಪಾರಾಯಣ ಅಗತ್ಯವಿದೆ. ಹಣ ಕಾಸಿನ ವ್ಯವಹಾರಗಳಲ್ಲಿ ನಷ್ಟ ಬರುವ ಸೂಚನೆ ಇದೆ ಪಿತ್ತ ಸಂಬಂಧಿ ಅನಾರೋಗ್ಯಗಳು ಕಾಡ ಬಹುದುನಿಮ್ಮನ್ನು ಬಿಟ್ಟು ಹೋದ ಪ್ರೀತಿಪಾತ್ರರು ಮತ್ತೆ ಜೊತೆಯಾಗಲಿದ್ದಾರೆ.
ಕರ್ಕಾಟಕ ರಾಹು ಶನಿ,ಗುರು, ರವಿ ಬುಧ, ಕುಜಶುಕ್ರ ಇವರೆಲ್ಲರೂ ಪ್ರತಿಕೂಲ ಪರಿ ಸ್ಥಿತಿಯಲ್ಲಿ ಇರುವಾಗ ಒಳ್ಳೆಯವರು ಯಾರು ಎಂಬ ಪ್ರಶ್ನೆಗೆ ಯಾರೂ ಇಲ್ಲ ಎಂಬ ಉತ್ತರ ಬರುತ್ತದೆ. ನಿದ್ದೆಯಿಲ್ಲದ ರಾತ್ರಿಗಳು ತಲೆ ತುಂಬಾ ಯೋಚನೆಗಳು, ದಾಂಪತ್ಯದಲ್ಲಿ ಕಿರಿಕಿರಿ ಸಂಶಯ ಕಾಡಲಿದೆ. ದೇವಿಯ ಆರಾಧನೆ ಅತೀ ಅಗತ್ಯವಿದೆ. ಸಿಟ್ಟು ಬರಲೇ ಬಾರದು. ಪ್ರೀತಿ ಪ್ರೇಮಕ್ಕೆ ವಿದ್ಯಾರ್ಥಿಗಳು ಬೀಳುವ ಸಾಧ್ಯತೆ ಇರುತ್ತವೆ.
ಸಿಂಹ: ಗುರುವಿನ ಅನುಗ್ರಹ ಉತ್ತಮವಾಗಿರುವುದರಿಂದ ರಾಹು ಶನಿಯ ಬಗ್ಗೆ ಹೆಚ್ಚು ತಲೆ ಕೆಡಿಸುವ ಪ್ರಶ್ನೆಯೇ ಇರುವುದಿಲ್ಲ, ಸತಿ ಪತಿಯರಿಬ್ಬರೂ ಇಬ್ಬರೂ ಪರಸ್ಪರ ಗೌರವಿಸಿಕೊಳ್ಳಬೇಕು. ಹೊಸ ಮನೆನಿರ್ಮಾಣದ ಅಥವಾ ಜಾಗ ಖರೀದಿಸುವ ಯೋಗವಿದೆ. ದಾಂಪತ್ಯ ಜೀವನದಲ್ಲಿ ಸದಾ ಸಣ್ಣ ಪುಟ್ಟಜಗಳ ನಡೆಯುತ್ತಲೇ ಇರುತ್ತದೆ ಬೆಂಕಿ ಬಿಸಿನೀರು ವಿದ್ಯುತ್ ಬಗ್ಗೆ ಎಚ್ಚರವಿರಲಿ,ಇತ್ತೀಚೆಗೆ ಮರೆವುತನ ಹೆಚ್ಚುತ್ತಿದೆ.
ಕನ್ಯಾ : ಪಂಚಮದಲ್ಲಿ ನಾಲ್ಕು ಮಂದಿ ಶತ್ರುಗಳು ಇರುವಾಗ ಮಕ್ಕಳ ವಿಷಯದಲ್ಲಿ ಮನಸ್ಸಿಗೆ ಬೇಸರವಿರುತ್ತದೆ. ಕಲಹ ವಿರಸ ಇದ್ದು ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಶನಿ ತಿಳಿಸುವಂತೆ ಸಂಗಾತಿಯೊಂದಿಗೆ ವೃಥಾ ಕಲಹ ಬೇಡ, ಹಿರಿಯರ ಸಲಹೆ ಪಾಲಿಸಿ. ಅದುವೇ ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ ಉದ್ಯೋಗದಲ್ಲಿ ಅಪವಾದ ಬರುವ ಸೂಚನೆ ಇರುತ್ತದೆ. ನೀಚ ಮಹಿಳೆಯ ಸಹವಾಸ ನಿಮ್ಮ ಗೌರವವನ್ನು ಹಾಲು ಮಾಡಲಿದೆ.

ತುಲಾ : ಗುರುವಿನ ಅನುಗ್ರಹ ನಿಮಗಿರುವುದರಿಂದ ಸುಖ ಸ್ಥಾನದ ನಾಲ್ಕು ಗ್ರಹರು ನಿಮ್ಮವರೇ ನಿಮ್ಮನ್ನು ಶತ್ರುವನ್ನಾಗಿ ಮಾಡಿದರೂ ದೊಡ್ಡ ಸಮಸ್ಯೆ ಆಗಲಾರದು. ಬೆಲೆಬಾಳುವ ವಸ್ತುಗಳ ಖರೀಧಿಯಲ್ಲಿ ಅತಿಯಾದ ಜಾಗ್ರತೆ ಬೇಕು ಬರುತ್ತಿರುವ ಧನ ಲಾಭಕ್ಕೆ ಯಾವುದೇ ಕೊರತೆ ಇರಲಾರದು, ಮಕ್ಕಳ ವಿಷಯದಲ್ಲಿ ಎಚ್ಚರವಿರಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಇರುವವರು ಅಧಿಕಾರ ಪಡೆಯುತ್ತೀರಿ.
ವೃಶ್ಚಿಕ : ತೃತೀಯಾದಲ್ಲಿ ಇರುವ ನಾಲ್ಕು ಗ್ರಹರು ನಿಮ್ಮ ಆದಾಯವನ್ನು ಹೆಚ್ಚು ಮಾಡಲಿದ್ದಾರೆ. ಸಂಗಾತಿಯ ಸಹಕಾರ ನಿಮಗೆ ಸಿಗಲಿದೆ, ಉದ್ಯೋಗ ಪ್ರಾಪ್ತಿ ಯೋಗವಿದೆ. ಹಿರಿಯರ ಜೊತೆಗೆ ಕಲಹ ಬರಲಿದೆ. ಭೂಮಿ ಖರೀಧಿ ಯೋಗವಿದೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ ಮಕ್ಕಳ ಬಗ್ಗೆ ಅನ್ನೋನ್ಯತೆಯ ಕೊರತೆ ಇರುತ್ತದೆ, ಸಹವಾಸ ದೋಷದಿಂದ ಕೆಟ್ಟ ಅಭ್ಯಾಸಗಳ ದಾಸರಾಗಬೇಡಿರಿ.
ಧನು : ಹಣ ಹೂಡಿಕೆಗೆ ತಕ್ಕ ಸಮಯವಲ್ಲ, ಮೋಸ ಹೋಗುವ ಸಾಧ್ಯತೆ ಇರುತ್ತದೆ. ದ್ವಿತೀಯಾದಲ್ಲಿ ಇರುವ ನಾಲ್ಕು ಗ್ರಹರು ನಿಮ್ಮ ನರಸಿಂಹ ಅವತಾರವನ್ನಾಗಿ ಮಾಡಲಿದ್ದಾರೆ ಮನೆಯ ವಾತಾವರಣವನ್ನು ಹಾಳು ಮಾಡಲಿದ್ದಾರೆ. ತಾಯಿಯವರ ಆರೋಗ್ಯ ಹದಗೆಡಲಿದೆ.ಮೃತ್ಯುಂಜಯ ಜಪವನ್ನು ಮಾಡಬೇಕು. ಕ್ರೀಡಾ ಕ್ಷೇತ್ರದಲ್ಲಿ ಇರುವವರು ಸ್ಥಿರವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಿರಿ
ಮಕರ : ಜನ್ಮರಾಶಿಯಲ್ಲಿ ನಾಲ್ಕು ಪರಸ್ಪರ ಶತ್ರು ಗ್ರಹರು ಸಂಚಾರ ಮಾಡುತ್ತಿರುವ ಈ ಕ್ಷಣದಲ್ಲಿ ಎಚ್ಚರವಾಗಿರುವಂತೆ ತಿಳಿಸಲಾಗುತ್ತಿದೆ. ಆರ್ಥಿಕ ಲಾಭವಿದ್ದರೂ ನಿಮ್ಮವರೇ ನಿಮಗೆ ಶತ್ರುಗಳಾಗಿ ವರ್ತಿಸಲಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ದೂರ ಪ್ರಯಾಣದ ಯೋಗವಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿ, ಭೂಮಿಯ ವ್ಯವಹಾರದಲ್ಲಿ ಅಧಿಕ ಲಾಭ ಗಳಿಸಬಹುದು ಕೃಷಿಕರಿಗೂ ಅಧಿಕ ಲಾಭ ಬರುವ ಸಮಯವಾಗಿದೆ.
ಕುಂಭ:ವ್ಯಯದಲ್ಲಿ ನಾಲ್ಕು ಗ್ರಹರು ಸಂಚಾರ ಮಾಡುತ್ತಿದ್ದು ಸಾಡೇ ಸಾತ್ ಶನಿಯ ದೋಷವೂ ಇರುವುದರಿಂದ ಬಹಳ ಎಚ್ಚರವಾಗಿರಬೇಕು ನಿಮ್ಮ ಉದಾಸೀನತೆಯಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಹೆಚ್ಚಿನ ಅಧಿಕಾರಗಳು ವಿಶೇಷ ಸ್ಥಾನ ಮಾನ ಲಭಿಸುವ ಸಂಭವವಿದೆ.ತಾಯಿಯವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಹಣದ ವಿಷಯದಲ್ಲಿ ಮೋಸ ಹೋಗಬೇಡಿರಿ, ತಲೆಗೆ ಸಂಬಂಧಿಸಿದ ಅಥವಾ ಕಣ್ಣಿನ ಆನಾರೋಗ್ಯಗಳು ಕಾಡಾ ಬಹುದು.
ಮೀನ : ಲಾಭ ಕ್ಷೇತ್ರದಲ್ಲಿ ನಾಲ್ಕು ಗ್ರಹರು ಸಂಚಾರ ಮಾಡುತ್ತಿರುವುದರಿಂದ ಲಾಭದ ಹರಿವು ಉತ್ತಮವಾಗಿದೆ. ಗುರುವಿಯ ಅನುಗ್ರಹವು ತಕ್ಕಮಟ್ಟಿಗೆ ಉತ್ತಮವಾಗಿದೆ.ಶನಿ ಜನ್ಮರಾಶಿಯಲ್ಲಿ ಇರುವುದು ನೀವು ಎಚ್ಚರವಾಗಿರಬೇಕು ಎನ್ನುವುದನ್ನು ಸೂಚಿಸುತ್ತಿದೆ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡ ಬೇಕು. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕುಡಿಯುವ ನೀರಿನ ಬಗ್ಗೆ ಎಚ್ಚರವಿರಲಿ ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗಲಿದೆ.



























