
ನಲ್ಲೂರು ಗ್ರಾಮ ಪಂಚಾಯತ್ ಎತ್ತಸಾಗುತ್ತಿದೆ?

ವರದಿ: ಆರ್.ಬಿ.ಜಗದೀಶ್
ಕಾರ್ಕಳ: ಮಲಮಿಶ್ರಿತ ತ್ಯಾಜ್ಯ ನೀರು ಸಾರ್ವಜನಿಕ ಸಂಚಾರ ರಸ್ತೆಯಲ್ಲಿ ಹರಿಯುತ್ತಿದ್ದರೂ, 50 ಮೀಟರ್ ನ ಅಂಚಿನಲ್ಲಿ ಇರುವ ನಲ್ಲೂರು ಗ್ರಾಮಪಂಚಾಯತ್ ಆಡಳಿತ ವರ್ಗವು ಕಣ್ಣಿದ್ದು ಕುರುಡತನ ಪ್ರದರ್ಶಿಸುತ್ತಿರುವ ಕ್ರಮಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಜಗೋಳಿಯಿಂದ ಹೊಸ್ಮಾರು ಕಡೆಗೆ ಹೋಗುವಾಗ ಬಲಭಾಗದಲ್ಲಿ ನಲ್ಲೂರು ಗ್ರಾಮ ಪಂಚಾಯತ್ ಕಚೇರಿ ಕಾಣಸಿಗುತ್ತದೆ. ಇಲ್ಲಿಂದ ಸುಮಾರು 50 ಮೀಟರ್ ದೂರದಲ್ಲಿ ಈ ಸಮಸ್ಸೆ ಎದುರಾಗಿದೆ.
ವಾಣಿಜ್ಯ ಸಂಕೀರ್ಣವೆಂದು ಸ್ಥಳೀಯಾಡಳಿತವು ಆರಂಭದಲ್ಲಿ ಈ ಕಟ್ಟಡಕ್ಕೆ ಪರವಾನಿಗೆ ನೀಡಿದೆ. ನಾನಾ ಕಾರಣಗಳಿಂದ ಪ್ರಸಕ್ತ ದಿನಗಳಲ್ಲಿ ಒಂದಷ್ಟು ಪರಿವರ್ತನೆಯೊಂದಿಗೆ ಜನವಸತಿ ಕೇಂದ್ರವನ್ನಾಗಿ ಮಾರ್ಪಡು ಮಾಡಿರುವ ಅಂಶ ಬಯಲಾಗಿದೆ.
ಈ ಬೆಳವಣಿಗೆಯ ಬಳಿಕ ಸುಮಾರು 30 ರಷ್ಟು ಮಂದಿ ಇದೇ ಕಟ್ಟಡದಲ್ಲಿ ವಾಸವಾಗಿದ್ದಾರೆ. ಅವರೆಲ್ಲರೂ ಉತ್ತರ ಭಾರತದ ಕಾರ್ಮಿಕರಾಗಿದ್ದು, ಸೆಲ್ಯೂನ್, ಹೋಟೆಲ್ ಸಹಿತ ಇತರ ರಂಗಗಳಲ್ಲಿ ದುಡಿಯುತ್ತಿದ್ದಾರೆ. ಇವರೆಲ್ಲರೂ ಇಲ್ಲಿ ತಂಗಿದ್ದ ಬಳಿಕ ಸ್ಥಳೀಯವಾಗಿ ನಾನಾ ಸಮಸ್ಸೆ ಎದುರುಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ವಾಣಿಜ್ಯ ಸಂಕೀರ್ಣಕ್ಕೆಂದು ಕಿರಿದಾದ ತ್ಯಾಜ್ಯ ಗುಂಡಿಯು ಈ ಕಟ್ಟಡದ ಸನ್ನಿಹದಲ್ಲಿ ಇದೆ. ತ್ಯಾಜ್ಯ ಪಿಟ್ ಸಾರ್ವನಿಕ ರಸ್ತೆ ಸನ್ನಿಹದಲ್ಲಿ ರಚಿಸಲಾಗಿದ್ದು, ಪರಿಣಾಮವಾಗಿ ಕಳೆದ ಕೆಲ ತಿಂಗಳುಗಳಿಂದ ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಗಬ್ಬುವಾಸನೆ ಬೀರುತ್ತಿದೆ.























