ಕಾರ್ಕಳ ಕಾಂಗ್ರೆಸ್ ಹಾಗೂ ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಬ್ಲಾಕ್ ಕಾಂಗ್ರೆಸ್ ಕಾರ್ಕಳ ಮಾರ್ಗದರ್ಶನದಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ಆಯುರ್ವೇದ ಆಸ್ಪತ್ರೆ, ಆಳ್ವಾಸ್ ಪಿಸಿಯೋಥೆರಪಿ ಕಾಲೇಜು, ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಹಾಗೂ ಪ್ರಸಾದ್ ನೇತ್ರಾಲಯದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ದಿನಾಂಕ ಡಿಸೆಂಬರ್ 13 ಶನಿವಾರ ಬೆಳಿಗ್ಗೆ 9 ರಿಂದ1:30 ವರಗೆ ಕಾರ್ಕಳ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಗರ್ಭಕೋಶದ ಅರ್ಬುದ ಕಾಯಿಲೆ ತಪಾಸಣೆ, ಬಂಜೆತನ ತಪಾಸಣೆ, ವಿಶೇಷ ಫಿಜಿಯೋಥೆರಪಿ ಚಿಕಿತ್ಸೆ, ನೇತ್ರ ತಪಾಸಣೆ, ಇಸಿಜಿ, ರಕ್ತದಾನ, ರಕ್ತದಲ್ಲಿ ಸಕ್ಕರೆ ಅಂಶ ತಪಾಸಣೆ ಹಾಗೂ ಎಲ್ಲಾ ಸ್ರೀರೋಗ ಮತ್ತು ಪ್ರಸೂತಿ ಸಂಬಂಧಿಸಿದ ಸಮಸ್ಯೆಗಳಿಗೆ ಸಮಾಲೋಚನೆ ಮೊದಲಾದ ಸೇವೆಯನ್ನು ಉಚಿತವಾಗಿ ನಡೆಸಲಾಗುವುದು.






































