ವಾರಭವಿಷ್ಯ ದಿನಾಂಕ 07.12.2025 ರಿಂದ 13.12.2025ರ ತನಕ
ಮೇಷ : ಅಷ್ಟಮದಲ್ಲಿ ರವಿ, ಕುಜ, ಬುಧ ಶುಕ್ರ ಒತ್ತಾಗಿರುವುದು ಸಾಡೇ ಸಾತ್ ಶನಿಯ ಪ್ರಭಾವವಿರುವುದರಿಂದ ಎಲ್ಲಾ ರೀತಿಯಿಂದ ತಾವು ಎಚ್ಚರವಾಗಿರುವುದು ಅವಶ್ಯವಾಗಿರುತ್ತದೆ. ಧೈರ್ಯವಾಗಿರಿ, ಆರ್ಥಿಕವಾಗಿ ದೈಹಿಕವಾಗಿ ಎಚ್ಚರವಾಗಿರಬೇಕು, ಕಾರ್ಯದ ಒತ್ತಡದಿಂದ ಆಯಾಸಗೊಂಡಿರುತ್ತೀರಿ. ಸಣ್ಣ ಸಣ್ಣ ವಿಷಯಕ್ಕೂ ತಾಳ್ಮೆಯನ್ನು ಕಳೆದುಕೊಳ್ಳುವಿರಿ, ವಿದ್ಯಾರ್ಥಿಗಳು ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿರಿ.
ವೃಷಭ : ಗಜ ಕೇಸರಿ ಯೋಗ ನಿಮ್ಮ ಜೀವನವನ್ನೇ ಬದಲಾಯಿಸಲಿದೆ. ಶನಿ ಆದಾಯದ ಮೂಲಗಳನ್ನು ನಿಮ್ಮ ಗಮನಕ್ಕೆ ತರುತ್ತಲಿರುತ್ತಾನೆ. ನೀವು ಪ್ರತಿ ವರ್ಷ ಕೊಡುತ್ತಿದ್ದ ದೇವಿಯ ಸೇವೆಯನ್ನು ಮರೆತು ಬಿಟ್ಟಿರಾ ?ಸಪ್ತಮದಲ್ಲಿ ರವಿ,ಕುಜ,ಬುಧಶುಕ್ರ ಜೊತೆಯಾಗಿ ಸಂಸಾರದಲ್ಲಿ ವಿರಸ ವೈರಾಗ್ಯವನ್ನು, ಅಪವಾದವನ್ನು ತರಲಿದ್ದಾರೆ. ಮನಸ್ಸು ದೃಢವಾಗಿರಲಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿ. ಮನೆಯಲ್ಲಿ ಶುಭ ಮಂಗಳ ಕೆಲಸ ನಡೆಯಲಿದೆ ಸಂಭ್ರಮಿಸಿರಿ,
ಮಿಥುನ : ನಾನಾ ರೀತಿಯ ಉದ್ಯೋಗದ ಅವಕಾಶಗಳಿಂದ ಉದ್ಯೋಗದ ಬದಲಾವಣೆ ನಿಮಗೆ ಸಂತೋಷವನ್ನು ತರಲಿದೆ. ಷಷ್ಟದಲ್ಲಿ ಇರುವ ರವಿ,ಕುಜ, ಬುಧ, ಶುಕ್ರ ನಿಮಗೆ ಉದ್ವೇಗ ಸಿಟ್ಟನ್ನು ಕೊಟ್ಟರೂ ಲಾಭವನ್ನೂ ಕೊಡಲಿದ್ದಾರೆ. ಭೂಮಿ ಖರೀದಿಗೆ ಒಳ್ಳೆಯ ಸಮಯವಾಗಿದೆ. ಅನ್ಯ ಮಹಿಳೆಯರಿಂದ ಎಚ್ಚರವಾಗಿರಿ, ಮಹಿಳೆಯರು ಲಲಿತಾ ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ.
ಕರ್ಕಾಟಕ : ಪ್ರತಿಯೊಂದು ಗ್ರಹರೂ ಪ್ರತಿಕೂಲ ಸ್ಥಿತಿಯಲ್ಲಿ ಇರುವಾಗ ಎಚ್ಚರದಿಂದ ಇರುವುದೇ ಪರಿಹಾರವಾಗಿದೆ.ಕುಲ ದೇವರ ಆರಾಧನೆ ಅಗತ್ಯವಾಗಿದೆ. ನಿಮ್ಮ ಉದಾಸೀನತೆಯ ವಿಳಂಬ ನೀತಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದೀತು ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬಾರದೇ ನಿರಾಸೆ ತಂದೇಟು, ಸಂಗಾತಿಗೆ ಮಕ್ಕಳ ವಿಷಯವಾಗಿ ಅನಾವಶ್ಯಕ ಉದ್ವೇಗ ಕೋಪ ತಾಪಗಳು ಹೆಚ್ಚಾಗಲಿವೆ ಆರೋಗ್ಯದ ಕಡೆಗೆ, ಆಹಾರ, ನಿದ್ರೆಯ ವಿಷಯದಲ್ಲಿ ಎಚ್ಚರವಿರಲಿ.
ಸಿಂಹ : ಚಂದ್ರ ಮತ್ತು ಗುರು ಲಾಭ ಕ್ಷೇತ್ರದಲ್ಲಿ ಇರುವ ಈ ಸಮಯ ನೀವು ಅದೃಷ್ಟವಂತರೆಂದು ಹೇಳಬೇಕಾಗಿದೆ. ಸುಖ ಸ್ಥಾನದಲ್ಲಿ ರವಿ,ಕುಜ ಬುಧ ಶುಕ್ರ ಇರುವ ಈ ಸಮಯದಲ್ಲಿ ಬೆಂಕಿ,ಆಯುಧ,ವಾಹನಗಳಿಂದ ಎಚ್ಚರವಾಗಿರಬೇಕು.ಮನೆ ವಾಹನ ಭೂಮಿ ಕೊಳ್ಳುವ ಯೋಗವಿದ್ದರೂ ಧಾಖಲೆ ಪತ್ರಗಳನ್ನು ಸರಿಯಾಗಿ ಪರಿಶೀಲಿಸಬೇಕು, ಸಂಗಾತಿಯೊಂದಿಗೆ ತಾಳ್ಮೆಯೊಂದಿಗೆ ವ್ಯವಹರಿಸಬೇಕು.
ಕನ್ಯಾ : ಬಹಳ ಒಳ್ಳೆಯ ಅದೃಷ್ಟವಂತರೆಂದು ಹೇಳಬೇಕಾಗಿದೆ. ಉದ್ಯೋಗವಿಲ್ಲದವರಿಗೆ ಉದ್ಯೋಗ ನಿಶ್ಚಿತವಾಗಿಯೂ ಸಿಗಲಿದೆ. ವಿದೇಶಕ್ಕೆ ಹೋಗುವ ಯೋಗವಿದೆ. ಸಹೋದರ ವರ್ಗದವರ ಜೊತೆಗೆ ಭೂಯಿ ಸಂಬಂಧ ಕಲಹ ಬಾರದಂತೆ ಎಚ್ಚರ ವಹಿಸಿರಿ, ಮರ್ಕಟ ಮನಸ್ಸು ಚಂಚಲಕ್ಕೆ ಒಳಗಾಗಲಿದೆ. ಕೆಲವೊಂದು ಬದಲಾವಣೆಗಳು ನಿರೀಕ್ಷಿತವಾಗಿದೆ. ಅಷ್ಟಮದಲ್ಲಿ ಮಾಂದಿ ಇರುವುದರಿಂದ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಸಂಬಂಧಿಕರೊಂದಿಗೆ ಅತಿಯಾದ ವಿಶ್ವಾಸ ಸದ್ಯಕ್ಕೆ ಬೇಡ.
ತುಲಾ : ಗುರು ಚಂದ್ರ ಭಾಗ್ಯದಲ್ಲಿ ಇರುವುದು ನಿಮ್ಮ ಭಾಗೋದಯದ ಕಾಲವನ್ನು ಸೂಚಿಸುತ್ತಿದೆ.ಶುಭ ಸಮಾರಂಭಗಳನ್ನು ನಡೆಸಲು ಇದು ಸಕಾಲವಾಗಿದೆ. ಕಂಕಣ ಬಲ ಕೂಡಿ ಬಂದಿದೆ. ಹಣದ ಮೇಲೆ ಮಾತಿನ ಮೇಲೆ ಹಿಡಿತವಿರಲಿ, ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ, ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿ, ಆದಾಯದ ಮೂಲಗಳು ಹೆಚ್ಚಾಗಲಿವೆ.
ವೃಶ್ಚಿಕ : ಹೆಚ್ಚಿನ ಗ್ರಹರು ಪ್ರತಿಕೂಲ ಸ್ಥಿತಿಯಲ್ಲಿ ಇರುವುದರಿಂದ ಮೌನವಾಗಿರುವುದೇ ಒಳ್ಳೆಯದು. ನಷ್ಟ, ಕಷ್ಟದ ಸಮಯ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದೇ ಪರಿಹಾರವಾಗಿದೆ. ಸಿಟ್ಟು ಉದ್ವೇಗದಲ್ಲಿಯೇ ದಿನದ ಹೆಚ್ಚು ಸಮಯ ಇರುತ್ತೀರಿ, ಬಿಪಿ ಷುಗರ್ ಇರುವವರು ಹತೋಟಿಯಲ್ಲಿ ಇರಬೇಕು, ಹೃದಯ ಸಂಬಂಧಿ ಸಮಸ್ಯೆ ಇರುವವರು ವೈದ್ಯರ ಬಳಿ ಅಗತ್ಯವಿದ್ದಲ್ಲಿ ತೆರಳಬೇಕು. ಧನು ರಾಶಿಗೆ ಕುಜ ಪ್ರಯಾಣ ಮಾಡಲಿದ್ದಾನೆ.
ಧನು : ಜನ್ಮ ರಾಶಿಯಲ್ಲಿ ಕುಜ, ವ್ಯಯದಲ್ಲಿ ರವಿ ಬುಧ ಶುಕ್ರ ಇದ್ದಾರೆ. ಸುಖ ಸ್ಥಾನದಲ್ಲಿ ಶನಿ ಇದ್ದಾನೆ. ಆದರೂ ಸಪ್ತಮದಲ್ಲಿ ಗುರು ಮತ್ತು ಚಂದ್ರ ಇರುವುದರಿಂದ ಹೆಚ್ಚಿನ ಕಷ್ಟ ನಷ್ಟಗ ನಿಮಗೆ ಅನುಭವಿಸಲು ಸಿಗಲಾರದು, ಗುರಿ ಸಾಧನೆಗಾಗಿ ನಡೆಸುವ ಪ್ರಯತ್ನದಿಂದ ವಿಮುಖರಾಗದೆ ಮುಂದುವರಿಯಿರಿ, ವಾದ-ವಿವಾದಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು, ಹೊಸಬರ ಬಗ್ಗೆ ಎಚ್ಚರವಾಗಿರಿ.
ಮಕರ : ಸುಖಾಧಿಪತಿ ಕುಜ ವ್ಯಯಕ್ಕೆ ಬಂದಾಗ ಇನ್ನೂ ಒಂದೂವರೆ ತಿಂಗಳು ಸುಖವೆನ್ನುವುದು ಮರೀಚಿಕೆಯಾಗಲಿದೆ, ತಾಯಿಯವರಿಗೆ ಅಸೌಖ್ಯದ ಮುನ್ಸೂಚನೆ ರೆ ಇರುತ್ತದೆ. ಇರುತ್ತದೆ. ವಾಹನವನ್ನು ಕಳೆದುಕೊಳ್ಳುವ ಸೂಚನೆ ಇರುತ್ತದೆ, ದೈವಾನುಗ್ರಹದ ಕೊರತೆ ಇರುತ್ತದೆ. ವಿಷ್ಣು ಸಹಸ್ರನಾಮದ ಕೊರತೆ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ಸ್ಥಾನ ಮಾನ ಸಿಗಲಿದೆ, ಸದ್ಯದಲ್ಲಿಯೇ ನೀವು ಹೊಂದಿರುವ ದೂರ ದೃಷ್ಟಿ ನಿಮ್ಮ ನೆರವಿಗೆ ಬರಲಿದೆ. ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ಕುಂಭ : ಕಾರ್ಯರಂಗದಲ್ಲಿ ನಿಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಬೇಕಾದೀತು ಚಂದ್ರ ಗುರು ಪಂಚಮದಲ್ಲಿ ಇರುವುದರಿಂದ ಮಕ್ಕಳಿಂದ ಸಂತೋಷವನ್ನು ಹೊಂದಲಿದ್ದೀರಿ. ನಿಮ್ಮ ಹೆಚ್ಚಿನ ಸಮಸ್ಯೆಗಳು ದೂರವಾಗಲಿದೆ. ರಾಹು,ಶನಿ ತಿಳಿಸುವಂತೆ ಯಾರಲ್ಲಿಯೂ ಕುಟುಂಬದ ಸದಸ್ಯರಲ್ಲಿಯೂ ವಾದ ವಿವಾದ ಬೇಡ. ಸಂಗಾತಿಯ ಜೊತೆಗೆ ಮಾತಾಡುವಾಗ ನಿಮ್ಮ ಉತ್ತರ “ಹೌದು, ನೀವು ಹೇಳಿದ್ದು ಸರಿಯಾಗಿದೆ “ಇಷ್ಟೇ ಇರಲಿ.
ಮೀನ : ಶನಿಯು ಜನ್ಮ ರಾಶಿಯಲ್ಲಿ ಇರುವ ಸಮಯ ಪಂಚಮದಲ್ಲಿ ಚಂದ್ರ ಇರುವುದರಿಂದ ಮಕ್ಕಳಿಗೆ ಶೀತ ಭಾಧೆ ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಉಂಟಾಗಲಿದೆ, ಎಲ್ಲರೂ ಒಂದು …ನೀವು ಮಾತ್ರಾ ಒಂದು ಎಂಬ ಸಮಸ್ಯೆಗೆ ಗುರಿಯಾಗಲಿದ್ದೀರಿ. ಒಂದು ವ್ಯವಸ್ಥೆಯಲ್ಲಿ ಎಲ್ಲರೂ ಯಜಮಾನರೇ ಆದರೆ ಯಾರ ಮಾತನ್ನು ಕೇಳಬೇಕು ಎಂಬ ಸಮಸ್ಯೆ ಉಂಟಾಗಲಿದೆ. ಮಕ್ಕಳು ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ನಾಗ ದೇವರ ಯಥಾ ಶಕ್ತಿ ಸೇವೆಯನ್ನು ಮಾಡಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು, ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.







































