ಕ್ರೀಡಾಪಟು ಧನಲಕ್ಷ್ಮೀ ಅವರನ್ನು ಸನ್ಮಾನಿಸಿ ಗೌರವಿಸಿದ ಶಾಸಕ ವಿ.ಸುನೀಲ್ ಕುಮಾರ್
ಕಾರ್ಕಳ : ಬಾಂಗ್ಲಾದೇಶದಲ್ಲಿ ನಡೆದ 2ನೇ ಮಹಿಳಾ ಕಬ್ಬಡಿ ವಿಶ್ವಕಪ್- ಪಂದ್ಯಾಟದಲ್ಲಿ ಚಾಂಪಿಯನ್ ಆದ ಭಾರತ ತಂಡವನ್ನು ಪ್ರತಿನಿಧಿಸಿ ವಿಜಯಗಳಿಸಿ ದೇಶಕ್ಕೆ ಹೆಮ್ಮೆ ತಂದ ನಮ್ಮ ನಾಡಿನ ಹೆಮ್ಮೆಯ ಪ್ರತಿಭೆ ಮೂಲತಃ ಕಾರ್ಕಳ ಮಿಯ್ಯಾರು ಗ್ರಾಮದವರಾಗಿದ್ದು, ಪ್ರಸ್ತುತ ಸುರತ್ಕಲ್ ಗುಡ್ಡೆಕೊಪ್ಪದ ನಿವಾಸಿಯಾಗಿರುವ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಗಳ ಪುತ್ರಿ ಧನಲಕ್ಷ್ಮೀ ಯವರನ್ನು ವಿಕಾಸ ಜನಸೇವಾ ಕಛೇರಿಯಲ್ಲಿ ಬಿಜೆಪಿ ಪ್ರಮುಖರೊಂದಿಗೆ ಶಾಸಕ ವಿ. ಸುನಿಲ್ ಕುಮಾರ್ ರವರು ಅಭಿನಂದಿಸಿದರು.

ಶಾಸಕ ವಿ.ಸುನೀಲ್ ಕುಮಾರ್ ಅದೇ ಸಂದರ್ಭದಲ್ಲಿ ಮಾತನಾಡಿ, ಇನ್ನಷ್ಟು ಸಾಧನೆ ಮಾಡುವ ಮೂಲಕ ಕಾರ್ಕಳಕ್ಕೆ ರಾಜ್ಯಕ್ಕೆ, ದೇಶಕ್ಕೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.





































