ಹಿರಿಯಡ್ಕ : ಮಾರಣಾಂತಿಕ ಹಲ್ಲೆ ಪ್ರಕರಣ ; ಆರೋಪಿತರಿಗೆ ಜಾಮೀನು ಮಂಜೂರು
RB NEWS
Bureau Report
ಹಿರಿಯಡ್ಕ : ಮಾರಣಾಂತಿಕ ಹಲ್ಲೆ ಪ್ರಕರಣ ; ಆರೋಪಿತರಿಗೆ ಜಾಮೀನು ಮಂಜೂರು
ಉಡುಪಿ : ಕಾರ್ಕಳ ತಾಲೂಕು, ಕಂಜಾರು ಅಂಚೆ ಮತ್ತು ಗ್ರಾಮದ, ಪರಾರಿ ಮನೆಯ ನಿವಾಸಿ, ದಯಾನಂದ ಹೆಗ್ಡೆಯವರ ಮಕ್ಕಳಾದ, ಜಯನಂದ ಹೆಗ್ಡೆ ಮತ್ತು ಪಿ ಮಂಜುನಂದ ಹೆಗ್ಡೆ ಹಾಗೂ ಶೇಖರ್ ಹೆಗ್ಡೆಯವರ ಮಗ, ಚಂದ್ರಹಾಸ ಹೆಗ್ಡೆಯವರ ವಿರುದ್ದ ಶಿವರಾಜ್ ಶೆಟ್ಟಿಯವರಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಬಗ್ಗೆ ಆರೋಪಿಸಿ ಹಿರಿಯಡ್ಕ ಪೋಲೀಸ್ ಠಾಣಾ ಅಪರಾಧ ಕ್ರಮಾಂಕ 83/2025 ರಂತೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಜೆ ಸಂಬಂಧಿಸಿದಂತೆ ಜಯನಂದ ಹೆಗ್ಡೆ, ಪಿ ಮಂಜುನಂದ ಹೆಗ್ಡೆ ಮತ್ತು ಚಂದ್ರಹಾಸ ಹೆಗ್ಡೆಯವರ ಪರ ಮೂಡಬಿದ್ರೆಯ ನ್ಯಾಯವಾದಿ ಶರತ್ ಶೆಟ್ಟಿ ಡಿ ಇವರು 2ನೇ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಉಡುಪಿ ಇಲ್ಲಿ ಜಾಮೀನು ಅರ್ಜಿಯನ್ನು ದಾಖಲು ಮಾಡಿದ್ದು, ಸದ್ರಿ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿತರಿಗೆ ಜಾಮೀನು ಮಂಜೂರು ಮಾಡಿರುತ್ತಾರೆ.