ಗರಿಕೆ ಹುಲ್ಲು
ತುಳಿದಷ್ಟು ಮತ್ತೆ ಮತ್ತೆ ಚಿಗುರುವ,ಗರಿಕೆಯ ಹುಲ್ಲಾಗಬೇಕು.
ಜರಿದಷ್ಟು ಜಗಮಗಿಸುವ, ದೀಪದ ಬೆಳಕಾಗಬೇಕು.
ತೂರಿದಷ್ಟು ಎತ್ತರಕ್ಕೆ ಹಾರಾಡುವ ಗಾಳಿಪಟವಾಗಬೇಕು.
ಕೈ ಬಿಟ್ಟಷ್ಟು ಮತ್ತೆಂದು,ಕೈಗೆ ಸಿಗದ ಪಾದರಸವಾಗಿರಬೇಕು.
ಇವೆಲ್ಲವೂ ಮೀರಿ,ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ,ಬೆಳಗಬೇಕು ಬೆಳಕು ಚೆಲ್ಲಬೇಕು.

ಚನ್ನಬಸಪ್ಪ ಬಳಗಾರ (ಮಾಜಿ ಸೈನಿಕ) ಪೊಲೀಸ ಇಲಾಖೆ ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ





































