ರಜತ ಮಹೋತ್ಸವ ಸಂಭ್ರಮಾಚರಣೆಯಲ್ಲಿ ಕಾರ್ಕಳ ಭುವನೇಂದ್ರ ವಸತಿ ಶಾಲೆ
RB NEWS
Bureau Report
ರಜತ ಮಹೋತ್ಸವ ಸಂಭ್ರಮಾಚರಣೆಯಲ್ಲಿ ಕಾರ್ಕಳ ಭುವನೇಂದ್ರ ವಸತಿ ಶಾಲೆ
ಮಣಿಪಾಲದ ಆಕಾಡೆಮಿ ಆಫ್ ಜನರಲ್ ಎಜುಕೇಷನ್(ಪ್ರಾರಂಭ 1942)ನ ನೇತೃತ್ವ ದಲ್ಲಿ 1960ರಲ್ಲಿ ಸ್ಥಾಪನೆಗೊಂಡ ಕಾರ್ಕಳದ ಭುವನೇಂದ್ರ ಕಾಲೇಜು ತನ್ನ ವಜ್ರ ಮಹೋತ್ಸವ ವನ್ನು ಪೂರೈಸಿ ಅಮೃತ ಮಹೋತ್ಸವದ ಕಡೆ ದಾಪುಗಾಲು ಹಾಕುತ್ತಿದೆ. ಇದೀಗ ಈ ಕಾಲೇಜಿನ ಅಂಗ ಸಂಸ್ಥೆಯಾದ ಶ್ರೀ ಭುವ ನೇಂದ್ರ ವಸತಿ ಶಾಲೆ ರಜತ ಮಹೋತ್ಸವವನ್ನು ನ.27, 28 ಮತ್ತು 29ರಂದು ಒಟ್ಟು ಮೂರು ದಿನಗಳ ಕಾಲ ಆಚರಿಸುತ್ತಿದೆ.
ಕೋಟಿ ಚೆನ್ನಯ ಥೀಂ ಪಾರ್ಕ್ ಮತ್ತು ತಾಲೂಕು ಕ್ರೀಡಾಂಗಣಕ್ಕೆ ಸಮೀಪದಲ್ಲೇ ಸುಮಾರು ಹನ್ನೆರಡು ಎಕರೆಗಳಷ್ಟು ವಿಸ್ತಾರ ವಾದ ಭೂ ಪ್ರದೇಶದಲ್ಲಿ ನಿತ್ಯ ಹರಿದ್ವರ್ಣ ಪರಿಸರದಲ್ಲಿ ತನ್ನ ಬಾಹುಗಳನ್ನು ಚಾಚಿಕೊಂಡು ಬೆಳೆಯುತ್ತಿರುವ ವಿದ್ಯಾಸಂಸ್ಥೆ ಗಮನ ಸೆಳೆಯುತ್ತಿದೆ.
ಶಾಲಾ ಪತ್ಯೇತರ ಚಟುವಟಿಕೆಗಳಗೂ ಸಮಾನವಾದ ಮಹತ್ವ ನೀಡುತ್ತಿರುವುದಕ್ಕೆ ಸಭಾಂಗಣದಲ್ಲಿ ನಡೆಯುತ್ತಿರುವ ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರ, ನಾಯಕತ್ವ ತರಬೇತಿ ಶಿಬಿರ, ಅಂತರ್ ಶಾಲಾ ಸ್ಪರ್ಧೆಗಳು ಇನ್ನಿತರ ಹಲವು ಕಾರ್ಯಕ್ರಮಗಳೇ ಸಾಕ್ಷಿ.
ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಯಕ್ಷಗಾನ, ಕರಾಟೆ, ಸೌಟ್ಸ್- ಗೈಡ್ಸ್, ಕಬ್-ಬುಲ್ ಬುಲ್, ಚಿತ್ರಕಲೆ, ಕ್ರಾಫ್ಟ್ ಭರತನಾಟ್ಯ, ಸಂಗೀತ, ನೃತ್ಯ, ಒಳಾಂಗಣ ಹಾಗೂ ಹೋರಾಂ ಗಣ ಕ್ರೀಡೆ, ಯೋಗ, ಬಿಲ್ಲುಗಾರಿಕೆ, ವಿಜ್ಞಾನ ಮಾದು ತರಬೇತಿ ಹೀಗೆ ಹತ್ತು ಹಲವು ಶಿಕ್ಷಣ ವನ್ನು ಏಕಕಾಲದಲ್ಲಿ ಒಂದೇ ಸೂರಿನಡಿ ಒದಗಿ ಸುವ ಕೀರ್ತಿ ಈ ಸಂಸ್ಥೆಗಿದೆ.
21 ವರ್ಷಗಳಿಂದ ನಿರಂತರ ಶೇ.100 ಫಲಿತಾಂಶ ದಾಖಲಿಸಿಕೊಂಡು ಮುನ್ನುಗ್ಗುತ್ತಿರುವಲ್ಲಿ ಶಿಕ್ಷಕ ವೃಂದದ ನಿರಂತರ ಪರಿಶ್ರಮ ಅರ್ವಣನೀಯ. ಇವುಗಳೆಲ್ಲದರ ಫಲವೇ ರಾಜ್ಯದ ಮೂಲೆಮೂಲೆಗಳಿಂದ ಮಾತ್ರವಲ್ಲ ಅಂತಾರಾಜ್ಯದಿಂದ ಬರು ತ್ತಿರುವ ವಿದ್ಯಾರ್ಥಿ ವೃಂದದಿಂದಾಗಿ ಎರಡೂ ವಿದ್ಯಾರ್ಥಿ ನಿಲಯ ಗಳೂ ತುಂಬಿವೆ. ಅನುಭವಿ ಆಡಳಿತ ಮಂಡಳಿಯ ನೇತೃತ್ವದಲ್ಲಿ ಈ ವರ್ಷ ಆರಂಭವಾದ ಹಳೆ ವಿದ್ಯಾರ್ಥಿ ಸಂಘದ ಜತೆಯಲ್ಲಿ ಈ ಸಂಸ್ಥೆಯು ಬಾನೆತ್ತರಕ್ಕೆ ಬೆಳೆದು ನಿಂತ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. –ಮಂಜುನಾಥ ಎ, ಕೋಟ್ಯಾನ್, ಕಾವ್ಯದರ್ಶಿ, ಶ್ರೀ ಭುವನೇಂದ್ರ ಕಾಲೇಜ್ ಟ್ರಸ್ಟ್