ಅಪಾಯಕಾರಿ ಪ್ರದೇಶ : ವಿದ್ಯಾರ್ಥಿನಿಗೆ ಗಾಯ

Picture of RB NEWS

RB NEWS

Bureau Report

ಕಾರ್ಕಳ : ನ.25ರ ಸಂಜೆ ಸುಮಾರು 5:30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ -169 ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಣ ಸಂಸ್ಥೆಯ ಬಸ್ಸೊಂದು ತಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

ಮುರತ್ತಂಗಡಿಯ ಯು ಟರ್ನ್ ನಲ್ಲಿ ಶಾಲಾ ವಿದ್ಯಾರ್ಥಿ ಒಬ್ಬಳು ಖಾಸಗಿ ಬಸ್ಸಿನಲ್ಲಿ ಇಳಿದು ರಸ್ತೆ ದಾಟುತ್ತಿದ್ದಳು.‌ ಅದೇ ವೇಳೆ Yenopoya institute of technology ಕಾಲೇಜು ಬಸ್ ಮೂಡಬಿದ್ರೆ ಆ ಕಡೆಯಿಂದ ವೇಗವಾಗಿ ಬಂದು ವಿದ್ಯಾರ್ಥಿನಿಗೆ ತಾಗಿತು. ಪರಿಣಾಮವಾಗಿ ವಿದ್ಯಾರ್ಥಿನಿಯ ತಲೆಗೆ ಗಾಯವಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುರತಂಗಡಿಯ ಯು ಟರ್ನ್ ಬಹಳ ಅಪಾಯಕಾರಿ ಪ್ರದೇಶವಾಗಿದ್ದು, ಈ ಕುರಿತು ಹಲವು ಬಾರೀ ಸಮಗ್ರ ವರದಿ ಪ್ರಕಟಗೊಂಡಿದ್ದರೂ, ಉಡುಪಿ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳದೇ ಇರುವ ಕುರಿತು ನಾಗರಿಕರು ಅಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top