ಆಯತಪ್ಪಿ ಬಾವಿಗೆ ಬಿದ್ದ ಯುವಕ

Picture of RB NEWS

RB NEWS

Bureau Report

ಕಾರ್ಕಳ : ಬಾವಿಗೆ ಅಡ್ಡವಾಗಿ ಅಳವಡಿಸಲಾಗಿದ್ದ ಕಂಬ ಮುರಿದುಬಿದ್ದ ಪರಿಣಾಮವಾಗಿ ನೀರುಸೇದುತ್ತಿದ್ದ ವ್ಯಕ್ತಿ ಬಾವಿಯೊಳಗೆ ಬಿದ್ದ ಘಟನೆ ಸಾಣೂರಿನ ಮಠದಕೆರೆ‌ ಎದುರುಭಾಗದ ಕೆಂಚಬೆಟ್ಟು ಎಂಬಲ್ಲಿ ಸಂಭವಿಸಿದೆ.

ಪ್ರಶಾಂತ್‌ ಭಂಡಾರಿ (40) ಘಟನೆಯಲ್ಲಿ ಜೀವಾಪಾಯದಿಂದ ಪಾರಾದವರು. ನ.24ರ೦ದು ಮನೆ ಸಮೀಪದ ಈ ಘಟನೆ ಸಂಭವಿಸಿದ್ದು, ಮನೆ ಮಂದಿ ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳದ ಸಿಬ್ಬಂದಿಯರು ಕಾರ್ಯಚರಣೆ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್‌ ಮೋನಿಸ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖ‌ರ್, ಸಿಬ್ಬಂದಿಗಳಾದ ಅಚ್ಚುತ ಕರ್ಕೇರ, ಹರಿಪ್ರಸಾದ್‌ ಶೆಟ್ಟಿಗಾ‌ರ್, ಮುಝಾಮಿಲ್, ದಿನೇಶ್ ಮತ್ತು ಗಣೇಶ್ ಪಾಲ್ಗೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top