ಅಪಾಯಕಾರಿ ಸರ್ವಿಸ್ ರೋಡ್ ದಿವೈಡರ್ ಗೆ ಮಣ್ಣಿನ ಚೀಲಗಳಿಟ್ಟು ಸುರಕ್ಷತಾ ಕ್ರಮ
RB NEWS
Bureau Report
ಅಪಾಯಕಾರಿ ಸರ್ವಿಸ್ ರೋಡ್ ದಿವೈಡರ್ ಗೆ ಮಣ್ಣಿನ ಚೀಲಗಳಿಟ್ಟು ಸುರಕ್ಷತಾ ಕ್ರಮ
ಕಾರ್ಕಳ : ಸಾಣೂರು ಮುರತ್ತಂಗಡಿ ಪರಿಸರದಲ್ಲಿ ಹಾದೂ ಹೋಗಿರುವ ರಾ.ಹೆ-169 ಅವೈಜ್ಞಾನಿಕದಿಂದ ಕೂಡಿದ್ದು, ಅಪಾಯಕಾರಿ ವಲಯವಾಗಿ ಮಾರ್ಪಟ್ಟಿದ್ದರೂ ಇಲಾಖೆ ಇದುವರೆಗೆ ರಕ್ಷಣಾತ್ಮಕ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಮುರತ್ತಂಗಡಿ ಪರಿಸರದ ಡೇಂಜರಸ್ ಸ್ಪಾಟ್, ಶ್ರೀ ಬಾಲಾಂಜನೇಯ ಯುವಕ ಸಂಘದ ಕಟ್ಟಡದ ಎದುರಿನ ಸರ್ವಿಸ್ ರಸ್ತೆ ಡಿವೈಡರ್ ಈಗಾಗಲೇ ಹಲವಾರು ಅಪಘಾತ ಗಳಿಗೆ ಕಾರಣವಾಗಿದ್ದು , ಇತ್ತೀಚೆಗೆ ಒಂದು ರಿಕ್ಷಾ ಮತ್ತು ಬೈಕ್ ರಾತ್ರಿ ಹೊತ್ತು ಡಿವೈಡರಿಗೆ ಡಿಕ್ಕಿ ಹೊಡೆದು ಚಾಲಕರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು.
ಈ ಬಗ್ಗೆ ಸ್ಥಳೀಯರು ದಿಲೀಪ್ ಬಿಲ್ಡ್ ಕಾಲ್ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಶ್ರೀ ಬಾಲಾಜಿಯವರಿಗೆ ಹಲವಾರು ಬಾರಿ ತಿಳಿಸಿದರೂ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅಸಡ್ಡೆ ತೋರುತ್ತಿದ್ದರು.
ಈ ಬಗ್ಗೆ ಬೇಸತ್ತ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಮಾಧವ್ ಭಂಡಾರ್ಕರ್ , ಶಿವಾನಂದ ಕೋಟ್ಯಾನ್ ರವರ ಜೊತೆ ಸೇರಿ ಆದಿತ್ಯವಾರ ( ನಂಬರ್ 23) ರಾತ್ರಿ 9: 00 ಗಂಟೆಗೆ ಸರ್ವಿಸ್ ರೋಡ್ ದಿವೈಡರ್ ನ ಎದುರು ಪ್ಲಾಸ್ಟಿಕ್ ಚೀಲಗಳಲ್ಲಿ ಮಣ್ಣನ್ನು ತುಂಬಿ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುತ್ತಾರೆ.
ಈ ಹಿಂದೆ ಒಂದು ವರ್ಷದ ಹಿಂದೆ ಸಾಣೂರಿನಲ್ಲಿಯೂ ಕೂಡ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಒಟ್ಟು ಸೇರಿ ತಾತ್ಕಾಲಿಕ ಬಸ್ಸು ನಿಲ್ದಾಣವನ್ನು ಕೂಡ ನಿರ್ಮಿಸಿರುವುದನ್ನು ಸ್ಮರಿಸಬಹುದು .
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬೇಜವಾಬ್ದಾರಿ ವರ್ತನೆಯ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿ, ಪ್ರಯಾಣಿಕರ ಸುರಕ್ಷತೆಗಾಗಿ ಸ್ವತಹ ತಾತ್ಕಾಲಿಕ ಕ್ರಮ ಕೈಗೊಂಡ ಸಾಮಾಜಿಕ ಕಾರ್ಯಕರ್ತರ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.