ದಲಿತರ ಬೇಡಿಕೆಗಳ ಬಗ್ಗೆ ಡಿಎಚ್ ಎಸ್ ಹಕ್ಕೊತ್ತಾಯ
ಉಡುಪಿ : ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸಮಿತಿಯು ನೀಡಿದ ಕರೆಯ ಮೇರೆಗೆ ದಲಿತರ ವಸತಿ ಸಹಿತ ಇತರೆ ಹಕ್ಕುಗಳನ್ನು ಆಗ್ರಹಿಸಿ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗಳ ಮುಂದೆ ಬೇಡಿಕೆಗಳನ್ನು ಸಲ್ಲಿಸುವ ಕಾರ್ಯಕ್ರಮದ ಅಂಗವಾಗಿ ದಲಿತ ಹಕ್ಕುಗಳ ಸಮಿತಿ ಕಟ್ಬೆಲ್ತೂರು ಘಟಕದ ಸಂಚಾಲಕಿ ಸಹಾನ ಮತ್ತು ದಲಿತ ಚಿಂತಕ ಶುಭಕರ ಇವರ ನಾಯಕತ್ವದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈಶಾಲಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ ಇವರಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.






































