ದಲಿತರ ಬೇಡಿಕೆಗಳ ಬಗ್ಗೆ ಡಿಎಚ್ ಎಸ್ ಹಕ್ಕೊತ್ತಾಯ

Picture of RB NEWS

RB NEWS

Bureau Report

ಉಡುಪಿ : ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸಮಿತಿಯು ನೀಡಿದ ಕರೆಯ ಮೇರೆಗೆ ದಲಿತರ ವಸತಿ ಸಹಿತ ಇತರೆ ಹಕ್ಕುಗಳನ್ನು ಆಗ್ರಹಿಸಿ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗಳ ಮುಂದೆ ಬೇಡಿಕೆಗಳನ್ನು ಸಲ್ಲಿಸುವ ಕಾರ್ಯಕ್ರಮದ ಅಂಗವಾಗಿ ದಲಿತ ಹಕ್ಕುಗಳ ಸಮಿತಿ ಕಟ್‌ಬೆಲ್ತೂರು ಘಟಕದ ಸಂಚಾಲಕಿ ಸಹಾನ ಮತ್ತು ದಲಿತ ಚಿಂತಕ ಶುಭಕರ ಇವರ ನಾಯಕತ್ವದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈಶಾಲಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ ಇವರಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.

ದಲಿತರ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಸಾಮಾಜಿಕ ಹೋರಾಟವನ್ನು ಡಿಎಚ್ ಎಸ್ ಮೂಲಕ ಸಂಘಟಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮ ಶೆಟ್ಟಿ ಹಾಗೂ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ವಿಮಲಾ ಅಶೋಕ ಬಳೆಗಾರ ಶಾರದಾ ಮುಂತಾದವರು ಉಪಸ್ಥಿತರಿದ್ದು ನಮ್ಮ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸ್ಪಂದಿಸುವುದಾಗಿ ತಿಳಿಸಿದರು

ಜಿಲ್ಲಾ ಕಾರ್ಯದರ್ಶಿ ರವಿ ವಿ ಎಂ, ಹಿರಿಯ ದಲಿತ ಮುಖಂಡರಾದ ಬಾಬು ಬಳ್ಕೂರ್ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top