ಡಾಕ್ಟರೇಟ್ ಪದವಿಗೆ ಭಾಜನರಾದ ಉಪನ್ಯಾಸಕಿ ರುಚಿಕಾ ರೋಶನ್‌

Picture of RB NEWS

RB NEWS

Bureau Report

ಮೂಡುಬಿದಿರೆ : ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ರುಚಿಕಾ ರೋಶನ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.

ಆಳ್ವಾಸ್ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ರಾಮ್ ಭಟ್ ಅವರ ಮಾರ್ಗದರ್ಶನದಲ್ಲಿ `ಪಶ್ಚಿಮ ಘಟ್ಟ ಪ್ರದೇಶಗಳ ಕಾಡು ಮಾವಿನ ಪ್ರಭೇದಗಳ ಆನುವಂಶಿಕ ವ್ಯತ್ಯಾಸದ ಮೌಲ್ಯಮಾಪನ’ ಮಹಾಪ್ರಂಧ ಮ೦ಡಿಸಿದ್ದರು.

ರುಚಿಕಾ ಅವರು ಬಂಟ್ವಾಳ ತಾಲೂಕಿನ ವಾಮದಪದವು ಪಿಲಿಮೊಗರು ಗ್ರಾಮದ ಜಿನ್ನಪ್ಪ ಪೂಜಾರಿ-ಲೀಲಾವತಿ ದಂಪತಿಯ ಪುತ್ರಿ. ಕಾರ್ಕಳ ಪತ್ತೊಂಜಿಕಟ್ಟೆಯ ವಿಠಲ್ ಎಂ. ಸಾಲ್ಯಾನ್- ವಸಂತಿ ವಿ. ಅವರ ಸೊಸೆ ಹಾಗೂ ರೋಶನ್ ಸಾಲ್ಯಾನ್ ಅವರ ಪತ್ನಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top