31 ನೇ ವರ್ಷದ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ
ಮಕ್ಕಳ ಧ್ವನಿ-2024
ಫೋಟೋ: ನೀತು ಸುರತ್ಕಲ್
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮಂಗಳೂರು : ದ.ಕ., ಉಡುಪಿ, ಕಾಸರಗೋಡು ಸಹಿತ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ, ಸಹಯೋಗದಲ್ಲಿ ಸುರತ್ಕಲ್ ವಿದ್ಯಾದಾಹಿನಿ ಸಂಘದ ಅನುದಾನಿತ ಪ್ರೌಢಶಾಲೆಯಲ್ಲಿ ಸಪ್ಟೆಂಬರ್ 14ರಂದು ಮಕ್ಕಳ ಧ್ವನಿ 2024 ಕಾರ್ಯಕ್ರಮವನ್ನು ಡಾ. ವಾಗೀಶ್ವರಿ ಶಿವರಾಂ ಉದ್ಘಾಟಿಸಿದರು.
ಮಕ್ಕಳೇ ಎಲ್ಲವನ್ನು ನಿರ್ವಹಿಸಿ ನಡೆಸಿಕೊಂಡು ಹೋಗುವ ಇಂತಹ ಕಾರ್ಯಕ್ರಮ ಮಕ್ಕಳಿಗೆ ಹೆಚ್ಚು ಪ್ರೇರಕ ಪೂರಕ ಎಂದು ಸಂತಸ ಪಟ್ಟರು. ಮಕ್ಕಳ ಸಾಹಿತ್ಯ ಸಂಗಮದಿಂದ ಮೂಡಿಬರುತ್ತಿರುವ ಇಂತಹ ಕಾರ್ಯಕ್ರಮ ಪ್ರತಿ ಶಾಲೆಗಳಲ್ಲೂ ನಡೆಯುವಂತಾಗಿ ವಿದ್ಯಾರ್ಥಿಗಳು ಹೆಚ್ಚಿನ ಅವಕಾಶಗಳನ್ನು ಪಡೆಯುವಂತಾಗಬೇಕೆಂದು ಹಾರೈಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರದಾದ ಮೂರ್ತಿ ಕಡಂದಲೆ ವಹಿಸಿದ್ದರು.
ವೇದಿಕೆಯಲ್ಲಿ ಹಿಂದೂ ವಿದ್ಯಾದಾಯಿನಿ ಸಂಘದ ಜಯಚಂದ್ರ ಹತ್ವಾರ್, ಸಂಗಮದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಕೇರಳ ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆ ತೋಡಿ, ಸಂಘದ ಕೋಶಾಧಿಕಾರಿ ಎಚ್ ಎಲ್ ರಾವ್, ಸಂಗಮ ದ ಅಧ್ಯಕ್ಷ ರಾಮಕೃಷ್ಣ ಭಟ್ ಚೊಕ್ಕಾಡಿ, ಕಾರ್ಯದರ್ಶಿ ರಮೇಶ್ ಭಟ್ ಎಸ್ ಜಿ, ಪ್ರೌಢಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ, ಮುಖ್ಯ ಶಿಕ್ಷಕ ಬಾಲಚಂದ್ರ ಟಿ ಹಾಜರಿದ್ದರು.
ನಿಹಾರಿಕಾ ಪ್ರಾರ್ಥಿಸಿದರು. ರೀತಿಕಾ ಸ್ವಾಗತಿಸಿದರು. ರಮ್ಯಾ ಜಿ ಹಾಗೂ ಸರೋಜಾ ಕಾರ್ಯಕ್ರಮ ನಿರ್ವಹಿಸಿದರು. ಕೀರ್ತನ ಬಂಗೇರ ವಂದಿಸಿದರು.
ತರುವಾಯ ನಡೆದ ಅಭಿನಯ ಗೀತಗೋಷ್ಠಿಯಲ್ಲಿ ಸುರತ್ಕಲ್ ಸಂಜನಾ, ನೀರ್ಚಾಲು ಸ್ವರಾಧ್ಯ ಕೆ, ಪೂರ್ವದ ನಿಶಾಂತ್ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮವನ್ನು ಸುನಿಲ್ ಸ್ವಾಗತಿಸಿ, ಅಕ್ಷಯ್ ನಿರ್ವಹಿಸಿ, ಯಮುನವ್ವ ಧನ್ಯವಾದ ಸಲ್ಲಿಸಿದರು.

ನಂತರದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೋಟ ವಿವೇಕ ಪ್ರೌಢಶಾಲೆಯ ಮಾನಸ ಜಿ ವಹಿಸಿದ್ದರು. ಕವಿಗಳಾಗಿ ಹೆಮ್ಮಾಡಿಯ ಶ್ರುತಿಕಾ ಶೆಟ್ಟಿ, ವರ್ಷಿತ್ ಶೆಟ್ಟಿ, ಕುಡ್ಲಮೊಗರಿನ ರಿಫಾನ, ಉರ್ವದ ಶ್ರೇಯ, ಬೆಳ್ತಂಗಡಿಯ ಶ್ರದ್ಧಾ ನಾಯಕ್, ಆಶಾ, ಪುಣ್ಯಶ್ರೀ, ತ್ರಿಶಾ ಜೈನ್, ಸಾಕ್ಷಿ, ರಕ್ಷಾ ಎನ್, ಸುರತ್ಕಲ್ ನ ಗಂಗಾ, ರಿತಿಕಾ, ಸುಮಿತ್ರ, ಸಂಪೂರ್ಣ, ನಿಹಾರಿಕಾ, ಕೋಟದ ಶರ್ಮಿಳಾ ಕೆಎಸ್, ಭೂಮಿ, ಶ್ರೇಯ, ಸಜನಿ, ಧನ್ಯಶ್ರೀ ಜೋಗಿ, ಬಿಳಿ ನೆಲೆಯ ಶ್ರೇಯ, ಕೊಂಡೆ ಊರಿನ ಸುಧನ್ವ ಹೊಳ್ಳ, ಮಂಜೇಶ್ವರದ ಆತ್ಮಿಕಾ ರೈ, ಪಯಸ್ವಿನಿ, ಉಜಿರೆಯ ಅಕ್ಷರ ಹಳೆಮನೆ, ಶೃತಿ, ಕನ್ಯಾನದ ಪಾವನ ಜಿ,ಫಾತಿಮಾತ್ ಜಸಿಲಾ, ಪೈವಳಿಕೆಯ ಕೆ ಶಿವಾನಿ, ಬಿಳಿ ನೆಲೆಯ ನವ್ಯ ಎಸ್, ರವರು ತಮ್ಮ ಕವನಗಳನ್ನು ವಾಚಿಸಿದರು. ಈ ಕಾರ್ಯಕ್ರಮವನ್ನು ಶೌರ್ಯ ಎಸ್ವಿ ಸ್ವಾಗತಿಸಿ, ಸುಜಾತ ಹಾಗೂ ದೀಪಿಕಾ ನಿರ್ವಹಿಸಿ, ಅನುಷಾ ಚಲವಾದಿ ಧನ್ಯವಾದ ಸಲ್ಲಿಸಿದರು.














