ಆಸ್ತಿ ವಿಚಾರ : ಯುವಕನಿಗೆ ಮಾರಣಾಂತಿಕ ಹಲ್ಲೆ

Picture of RB NEWS

RB NEWS

Bureau Report

ಕಾರ್ಕಳ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂಡವೊಂದು ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆಯು ನ. 15ರಂದು ಕಣಜಾರಿನಲ್ಲಿ ನಡೆದಿದೆ.

ಶಿವರಾಜ್ ಶೆಟ್ಟಿ ಹಲ್ಲೆಗೊಳಗಾದ ಯುವಕ. ಕಣಜಾರು ಗ್ರಾಮದ ಅಂಗಡಿ ಬೆಟ್ಟುಮನೆ ಎಂಬಲ್ಲಿ ವಾಸವಾಗಿದ್ದು ಅವರ ಮನೆ ಪಕ್ಕದಲ್ಲಿ ಮಾವ ಬಾಲಕೃಷ್ಣ ಎಂಬವರ ಮನೆ ಇದೆ.

ಬಾಲಕೃಷ್ಣ ಅವರಿಗೆ ಹಾಗೂ ಅವರ ಮನೆಯ ಪಕ್ಕದ ಮನೆಯವರಾದ ಮಂಜುನಂದ ಹೆಗ್ಡೆ ಅವರಿಗೆ ಹಿಂದಿನಿಂದಲೂ ಜಾಗದ ವಿಷದ ಬಗ್ಗೆ ತಕರಾರು ಇದ್ದು ಆಗಾಗ ಗಲಾಟೆಗಳು ನಡೆಯುತ್ತಲೇ ಇತ್ತೆಂದು ತಿಳಿದುಬಂದಿದೆ.

ನ. 15ರಂದು ರಾತ್ರಿ ಬಾಲಕೃಷ್ಣ ಅವರ ಮನೆ ಬಳಿ ಶಿವರಾಜ್ ಅವರ ಬೈಕ್‌ನ್ನು ಮಂಜುನಂದ ಹೆಗ್ಡೆ ಅಡ್ಡಗಟ್ಟಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಿವರಾಜ್‌ ತಪ್ಪಿಸಿಕೊಂಡು ಬಾಲಕೃಷ್ಣ ಅವರ ಮನೆಗೆ ಹೋಗಿದ್ದು ತಕ್ಷಣವೇ ಗಾಯಾಳುವನ್ನು ಬಾಲಕೃಷ್ಣ ಮತ್ತು ಇತರರು ಉಡುಪಿಯ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಜುನಂದ ಹೆಗ್ಡೆ, ಜಯಾನಂದ ಹೆಗ್ಡೆ, ಚಂದ್ರಹಾಸ ಹೆಗ್ಡೆ ಸೇರಿದಂತೆ ಇತರರು ಆರೋಪಿಗಳಾಗಿದ್ದಾರೆ.

ಶಿವರಾಜ್ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top