ಜೀವನದಲ್ಲಿ ಕಷ್ಟಗಳು ಬಂದರೆ…..
ಜೀವನದಲ್ಲಿ ಕಷ್ಟಗಳು ಬಂದರೆ ದುಃಖಿಸಬೇಡಿ,
ಏಕೆಂದರೆ ಕಠಿಣ ಪಾತ್ರಗಳನ್ನು ಒಳ್ಳೆಯ ನಟರಿಗೆ ಮಾತ್ರ ನೀಡಲಾಗುತ್ತಿದೆ.
ಜೀವನದಲ್ಲಿ ಎದುರಾಗೋ ಕಷ್ಟಗಳು ನಮ್ಮನ್ನ “ಘಾಸಿ”ಗೊಳಿಸೋದಷ್ಟೇ ಅಲ್ಲ ಬದಲಿಗೆ “ಗಟ್ಟಿ”ಯು ಮಾಡುತ್ತವೆ.
ತಾರುಣ್ಯ ಎಂಬುದು ನೀವು ಎಷ್ಟು ಜೀವಕಳೆಯಿಂದ ತುಂಬಿದ್ದೀರಿ ಎಂಬುದರ ಬಗ್ಗೆಯಾಗಿದೆ, ನೀವು ಯಾವಾಗ ಹುಟ್ಟಿದಿರಿ ಎಂಬ ಬಗ್ಗೆಯಲ್ಲ.
ಮೌನ ಕಲಿಸುವಷ್ಟು ಪಾಠ ಮೌನ ಕೊಡುವಷ್ಟು ನೆಮ್ಮದಿ, ಮೌನದಿಂದ ಬರುವಷ್ಟು ತಾಳ್ಮೆ ಯಾವುದರಲ್ಲೂ ಬರುವುದಿಲ್ಲ…!
ನೀವು ಸಂತೋಷಭರಿತರಾಗಿ ಮಾಡುವುದೆಲ್ಲವೂ ಅನಾಯಾಸಕರವಾಗಿರುತ್ತದೆ.
ನೆನಪುಗಳು ನಾವಿಕನಿಲ್ಲದ ಹಡಗಿನಂತೆ, ಎತ್ತಲೆತ್ತಲೂ ಸಾಗುತ್ತ ಹೋಗುತ್ತಲೇ ಇರುತ್ತವೆ, ಬದುಕೆಂಬ ಹಡಗು ಮುಳುಗುವವರೆಗೂ.
ಶರೀರವು ನೀವು ಬಳಸಿದಷ್ಟೂ ಉತ್ತಮಗೊಳ್ಳುವ ಒಂದು ಯಂತ್ರ.
ಯಾರಿಗೆ ಅಗತ್ಯಗಳೇ ಇರುವುದಿಲ್ಲವೋ ಅವರು ಮಾತ್ರ ಶ್ರೀಮಂತರಾಗಿರುತ್ತಾರೆ.
ದೃಶ್ಯ ವಸ್ತುಗಳನ್ನು ನೆನೆಯುವುದೇ ಬಂಧನ,ಮರೆಯುವುದೇ ಮುಕ್ತಿ.
ಮಸಸ್ಸಿನಲ್ಲಿ ಆಗುವ ಕಂಪನಗಳು ಭೂ-ಕಂಪನಗಳಿಗಿಂತಲೂ ಭಯಾನಕವಾಗಿರುತ್ತವೆ.
ಕಷ್ಣಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುವುದಿಲ್ಲ.
ದೇವರನ್ನು ನಿಮ್ಮ ಹತ್ತಿರದ ಸ್ನೇಹಿತನನ್ನಾಗಿ ಮಾಡಿಕೊಳ್ಳಿ, ಏಕೆಂದರೆ ಇಡೀ ಜಗತ್ತು ನಿಮ್ಮನ್ನು ತೊರೆದರೂ ಸಹ…
ನಿಮ್ಮನ್ನು ಬೆಂಬಲಿಸುವುದು ಆ ದೇವರು ಮಾತ್ರ…
✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರು.
Post Views: 219





































