ವಾರಭವಿಷ್ಯ
ದಿನಾಂಕ 16.11.2025 ರಿಂದ 22.11.2025ರ ತನಕ
ವಿಶೇಷ ದಿನಗಳು :
16.11.2025 ವೃಶ್ಚಿಕ ಸಂಕ್ರಮಣ 19.11.2025 ಬಂಟ್ವಾಳ, ಪುತ್ತೂರು …ಧರ್ಮಸ್ಥಳ ಲಕ್ಷ ದೀಪೋತ್ಸವ
ಮೇಷ : ಬಹುತೇಕ ವಿಚಾರಗಳು ನಿಮ್ಮ ಮನಸ್ಸಿನ ಇಚ್ಚೆಯ ಪ್ರಕಾರವೇ ನಡೆಯುತ್ತಿರುವ ಸಾರ್ಥಕತೆ ನಿಮಗೆ ಆನಂದದ ಸಂಗತಿಯಾಗಿದೆ. ದುಡ್ಡಿನ ವಿಷಯ ಬಂದಾಗ ಎಚ್ಚರವಿರುವುದು ಅಗತ್ಯ. ಮಾತಿನಿಂದ ಚುಚ್ಚಿ ನೋಯಿಸುವವರು ಇದ್ದಾರೆ. ನಿಮ್ಮ ವಯಕ್ತಿಕ ವರ್ಚಸ್ಸನ್ನು ಕಾಪಾಡಿ ಕೊಳ್ಳಿರಿ, ಸಮಾಧಾನದ ಮಾತುಗಳಿಂದ ಎಲ್ಲರಿಗೂ ಸಂತೋಷವಾಗಲಿದೆ. ಸಾಡೇ ಸಾತ್ ಶನಿಯ ಪ್ರಭಾವವಿರುವುದರಿಂದ ಗುರು ರಾಘವೇಂದ್ರ ಸ್ವಾಮಿಯವರನ್ನು ಪೂಜಿಸಿರಿ.
ವೃಷಭ : ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಕಾಮದ ವಿಚಾರ ಬಲವಾದ ಬಿರುಗಾಳಿ ತಂದಿಡುವ ಕಾಲವಿದಾಗಿದೆ.ಸ್ವಯಂ ನಿಗ್ರಹ ಸಂಯಮವಿರಲಿ,ಕುಜ, ಬುಧರ ತಾಕಲಾಟದಿಂದಾಗಿ ನೀಚ ವ್ಯಕ್ತಿಗಳು ದಾರಿ ತಪ್ಪಿಸಬಹುದು ಕ್ಷಣ ಹೊತ್ತಿನ ಬೆಂಕಿ ಮಹಾ ಜ್ವಾಲೆಯಾಗಿ ಉರಿದು ಕೊಳ್ಳಬಹುದು, ತಾಯಿ ಮಾರಿಕಾಂಬೆಯನ್ನು ಪ್ರಾರ್ಥಿಸಿರಿ. ಶನಿ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಬರುವ ಆದಾಯಕ್ಕೆ ಯಾವುದೇ ಅದೇ ತಡೆ ಇರುವುದಿಲ್ಲ.
ಮಿಥುನ : ಗುರುವಿನ ಅನುಗ್ರಹ ಉತ್ತಮವಾಗಿ ಇರುವುದರಿಂದ ಧೈರ್ಯ ಇದೆಯಾದರೂ ಕಾಲಾಗ್ನಿ ಮಿಂಚು ಗುಡುಗುಗಳ ಆರ್ಭಟವನ್ನು ನಿಯಂತ್ರಿಸಲು ಚಂದ್ರ ಅಸಹಾಯಕನಾಗಿದ್ದಾನೆ. ಮನಸ್ಸನ್ನು ಧೈರ್ಯದಿಂದ ಗಟ್ಟಿಯಾಗಿರಿಸಿಕೊಳ್ಳಿರಿ. ದೇವಿಯ ಪೂಜೆ ಕಡಿಮೆಯಾಗಿದೆ. ನಿಮ್ಮವರೇ ನಿಮಗೆ ಶತ್ರುಗಳಾಗಿದ್ದಾರೆ. ಉದ್ಯೋಗದಲ್ಲಿ ಕೂಡಾ ಆಸಕ್ತಿ ಕಡಿಮೆಯಾಗಿದೆ. ದುಡ್ಡಿನ ವಿಷಯದಲ್ಲಿ ಪ್ರಾಮಾಣೀಕತೆ ಮರೆಯಬೇಡಿರಿ.
ಕರ್ಕಾಟಕ : ಹೊಂದಾಣಿಕೆಗೆ ಬಾರದ ಜನಗಳ ನಡುವೆ ವರ್ತಮಾನವನ್ನು ಎಳೆದೊಯ್ಯುವ ಭಾರ ನಿಮ್ಮ ಮೇಲಿರುತ್ತದೆ. ರಾಹು ಮತ್ತು ಶನಿ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಪಂಚಮದಲ್ಲಿ ರವಿ ಬುಧ ಕುಜ ಇರುವುದರಿಂದ ಮಕ್ಕಳ ವಿಷಯವಾಗಿ ವಿಚಿತ್ರ ಸಮಸ್ಯೆಯನ್ನು ಎದುರಿಸುವಿರಿ. ಗಣಪತಿ,ಶಿವನ ಭಾವ ಪೂಜೆ ಅಗತ್ಯವಿದೆ, ಚಡಪಡಿಕೆ ಪರಿಹಾರವಾಗಲಿದೆ. ಎಲ್ಲಾ ವ್ಯವಹಾರದಲ್ಲಿ ತಾಳ್ಮೆ ಅಗತ್ಯವಿದೆ, ಫಿಟ್ಸ್, ತಲೆಗೆ ಸಂಬಂಧಿಸಿದ ತಲೆ ತಿರುಗುವ ಸಮಸ್ಯೆ ಇದ್ದಲ್ಲಿ ತಕ್ಷಣ ನರ ತಜ್ಞರಲ್ಲಿ ಭೇಟಿಯಾಗುವುದು ಒಳ್ಳೆಯದು, ಸರ್ಪ ಸುತ್ತು ಬರುವ ಸಾಧ್ಯತೆ ಇರುತ್ತದೆ. ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.
ಸಿಂಹ : ನಿಮ್ಮ ರಾಶ್ಯಾಧಿಪತಿ ರವಿ ವೃಶ್ಚಿಕ ರಾಶಿಯಲ್ಲಿ ಬಂದಿರುವುದರಿಂದ ಸೂರ್ಯನ ಆರಾಧನೆ ಅಗತ್ಯವಿದೆ. ಆದರೆ ಮೂರ್ಖರ ವಿಷಯಕ್ಕೆ ಮೂಗು ತೂರಿಸಲು ಹೋಗದಿರಿ. ವ್ಯಾಜ್ಯ ವ್ಯವಹಾರದಲ್ಲಿ ದಾಖಲೆ ಪಾತ್ರಗಳ ಬಗ್ಗೆ ಗಮನವಿರಲಿ,ಗುರುವಿನ ಅನುಗ್ರಹ ಪ್ರಸ್ತುತ ಇರುವುದಿಲ್ಲ.ತಾಳ್ಮೆಯಿಂದ ವರ್ತಿಸುವುದು ಅತೀ ಅಗತ್ಯವಾಗಿದೆ. ಮಕ್ಕಳ ಬಗ್ಗೆ ನಿಮಗೆ ಸರಿಯಾದ ತಿಳುವಳಿಕೆ ಇರದಿರುವ ಕಾರಣ ಬಹಳ ಎಚ್ಚರವಾಗಿರಬೇಕು, ನಿಮಗೆ ನೈತಿಕ ಬೆಂಬಲದ ಅವಶ್ಯಕತೆ ಇರುತ್ತದೆ, ಸಣ್ಣ ವಿಷಯಗಳನ್ನು ದೊಡ್ಡದಾಗಿಸಲು ಹೋಗಬೇಡಿರಿ,
ಕನ್ಯಾ : ಅದೃಷ್ಟ ಒಳಿದು ಬಂದಿದೆ. ಹಲವಾರು ದಾರಿಗಳಿಗಳಿವೆ ಆದಾಯ ಗಳಿಸಲು, ಆದರೆ ಎಲ್ಲಾ ಸೌಲಭ್ಯಗಳು ಇದ್ದಾಗಲೂ ದಾಂಪತ್ಯದಲ್ಲಿ ಪ್ರೀತಿ ಪ್ರೇಮದಲ್ಲಿ ಏನೋ ಗೊಂದಲಗಳು ನೆಮ್ಮದಿಯನ್ನು ಹಾಳು ಮಾಡಲಿದೆ. ಪ್ರಾಕೃತಿಕ ಏರುಪೇರುಗಳು ನಿಮ್ಮದೇ ಕೆಲವೊಂದು ಯೋಜನೆಗಳನ್ನು ಕೈ ಬಿಡುವಂತೆ ಮಾಡಲಿದೆ, ಹೊಸ ಉದ್ಯೋಗ ಪ್ರಾಪ್ತಿ ಯೋಗವಿದೆ, ಅನ್ಯ ಮಹಿಳೆಯರ ವಿಷಯದಲ್ಲಿ ಎಚ್ಚರದಲ್ಲಿದ್ದು ಹಣ ಹೂಡಿಕೆ ಬೇಡ. ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುವಿರಿ.
ತುಲಾ : ಹಣ ಕಾಸಿನ ವಿಚಾರ ರಾಜಕೀಯ ಸಿದ್ದಿ, ಅಧಿಕಾರ ಹೊಸದೇ ಆದ ಜವಾಬ್ದಾರಿ ತಾನಾಗಿಯೇ ನಿಮಗೆ ಒಲಿದು ಬರಲಿದೆ. ದೇವಿಯ ಅನುಗ್ರಹದಿಂದ ಎಲ್ಲವೂ ನಿಮಗೆ ಪ್ರಾಪ್ತಿಯಾಗುತ್ತಿದೆ ಅನ್ನುವುದು ಗೊತ್ತಿರಲಿ, ಸಂತಸದ ಸಮಯ, ಕ್ಷಣ ಬಂದಾಗ ಹಿರಿಯರನ್ನು ಕೃತಜ್ಞತೆಯಿಂದ ಸ್ಮರಿಸುವುದನ್ನು ಮರೆಯಬೇಡಿರಿ. ಸಂಗಾತಿಯನ್ನು ಕಡೆಗಣಿಸುವ ಕೆಲಸ ನಿಮ್ಮಿಂದ ಆಗಬಾರದು, ವಿದೇಶಕ್ಕೆ ಹೋಗವ ಭಾಗ್ಯ ಬರಲಿದೆ, ವಿದ್ಯಾರ್ಥಿಗಳು ಓದುವುದರ ಬಗ್ಗೆ ಗಮನ ಹರಿಸುವುದು ಅತೀ ಮುಖ್ಯವಾಗಿದೆ.
ವೃಶ್ಚಿಕ : ಸಮೃದ್ಧಿಗಾಗಿ ನಿಮ್ಮ ಪ್ರಯತ್ನ ಮುಂದುವರಿಯುತ್ತಿರುತ್ತದೆ, ಪಂಚಮದ ಶನಿಯ ಅಡೆ ತಡೆ ಇರುವುದರಿಂದ ರಾಹುವಿನ ಸುಖ ಸ್ಥಾನದ ಪ್ರಭಾವದಿಂದ ನೀವು ಎಣಿಸಿದ ಮಟ್ಟಕ್ಕೆ ಹೋಗಲು ಕಷ್ಟ ಸಾಧ್ಯವಾಗಿದೆ. ಪ್ರತ್ಯಂಗಿರಾ ದೇವಿಯ ಮಂತ್ರದಿಂದ ನಿಮ್ಮ ಎಲ್ಲಾ ವೈರಿಗಳು ನಿಮ್ಮ ಹೆಸರನ್ನೂ ತೆಗೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿಯ ಬೆಂಬಲ ಪೂರ್ಣವಾಗಿ ನಿಮಗೆ ಸಿಗಲಿದೆ. ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಖಾಲಿಯಾಗಿರಲಿ, ಒಣ ಜಂಬ ಅಹಂ ಬೇಡ. ಅನಾವಶ್ಯಕ ಸವಾಲು ಹಾಕುವ ನೀಚರು ಇರುತ್ತಾರೆ. ನಿಮ್ಮ ಉತ್ತರ “ಓಂ ನಮ: ಶಿವಾಯ “ಅಷ್ಟೇ ಇರಲಿ,
ಧನು : ಮಾನಸಿಕ ಕಿರಿಕಿರಿಗಳು ಅನುಭವಿಸುವ ಕಾಲವಿದು. ಇದರಿಂದ ಹೊರಬರಲು ನಾಗ ದೇವರ ಆರಾಧನೆ ಅಗತ್ಯವಿದೆ, ರವಿ,ಕುಜ, ಬುಧ ವ್ಯಯದಲ್ಲಿ ಇದ್ದಾರೆ. ನಿಮ್ಮ ಬಾಳ ಸಂಗಾತಿಯ ಜೊತೆಗೆ ಎಲ್ಲವನ್ನೂ ಹಂಚಿಕೊಳ್ಳಿರಿ. ಅವರ ಆರೋಗ್ಯದ ಬಗ್ಗೆಯೂ ನಿಮ್ಮಲ್ಲಿ ಕಾಳಜಿ ಇರಲಿ. ಸಾಲದ ವಿಚಾರದಲ್ಲಿ ಬಿಗಿಯಾದ ನಿಲುವು ನಿಮ್ಮಲ್ಲಿರಲಿ. ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಅಭ್ಯಾಸ ಬೆಳೆಸಿಕೊಳ್ಳಿರಿ. ನಿಮಗೆ ನೀವೇ ಸೂಕ್ತ ಸಲಹೆಗಾರರಾಗಿ. ನರಸಿಂಹ ದೇವರ ಜಪ ನಿಮಗೆ ಅತೀ ಅವಶ್ಯವಾಗಿದೆ.
ಮಕರ : ರವಿ, ಕುಜ, ಬುಧ ಬಾಧಕ ಸ್ಥಾನದಲ್ಲಿ ಇರುವುದರಿಂದ ಶಂಕರ ನಾರಾಯಣ ದೇವರ ಆರಾಧನೆ ಅವಶ್ಯವಾಗಿದೆ. ಆದಾಯ ಬರುತ್ತದೆ, ಬರುವ ಮೊದಲೇ ಖರ್ಚಿಗೆ ದಾರಿ ತಯಾರಾಗಿರುತ್ತದೆ. ವ್ಯವಹಾರದ ಆಯ್ಕೆ ಮಾಡುವಾಗ ಅನುಭವಿಗಳ ಸಲಹೆ ಪಡೆಯಿರಿ. ಸ್ಪರ್ಧೆಗಳಲ್ಲಿ ಗೆಲ್ಲುವುದು ನಿಮಗೆ ಕಷ್ಟವಾಗಲಿದೆ. ಗುರುವಿನ ಅನುಗ್ರಹ ನಿಮಗಿರುವುದರಿಂದ ಹೆಚ್ಚಿನ ಒತ್ತಡ ಇರಲಾರದು. ಐಷಾರಾಮಿ ವಸ್ತುಗಳ ಖರೀಧಿಗೆ ಕೈಹಾಕಬೇಡಿರಿ. ಅನ್ಯ ಅಪರಿಚಿತ ಮಹಿಳೆಯರಲ್ಲಿ ಯಾವುದೇ ರೀತಿಯ ವ್ಯವಹಾರ ಬೇಡ.
ಕುಂಭ : ದೈವಾನುಗ್ರಹದ ಕೊರತೆಯ ಈ ದಿನಗಳಲ್ಲಿ ವ್ಯಾಜ್ಯಗಳು ನಿಮ್ಮೆದುರು ಬರಲಿದೆ. ನಿಮ್ಮನ್ನು ನೀವೇ ವರ್ಣಿಸಿಕೊಳ್ಳಲು ಹೋಗಬೇಡಿರಿ, ಹಣದ ಲೆಕ್ಕಾಚಾರ ತಪ್ಪಿಹೋಗಲಿದೆ. ಸಾಲ ಮಾಡುವ ಜಾಮೀನು ಸಹಿ ಹಾಕುವ ಸಾಲ ಕೊಡುವ ಕಾಲ ಇದಾಗಿರುವುದಿಲ್ಲ.ಕ್ರೀಡಾ
ಪಟುಗಳಿಗೆ ಉತ್ತಮ ಸಮಯವಾಗಿದೆ. ಶಿವನ ಆರಾಧನೆ ಅತೀ ಅಗತ್ಯವಾಗಿದೆ. ನಿಮ್ಮ ವ್ಯವಹಾರದ ದಾಖಲೆ ಪತ್ರಗಳು ನಿಮ್ಮಲ್ಲಿ ಸದಾ ಸರಿಯಾದ ರೀತಿಯಲ್ಲಿರಲಿ ಮೇಲಧಿಕಾರಿಗಳು ತನಿಖೆ ಮಾಡುವ ಸಾಧ್ಯತೆ ಇರುತ್ತದೆ.
ಮೀನ : ಬಿರುಗಾಳಿ ಬೀಸುವ ವಾತಾವರಣ ನಿಮ್ಮೆದುರು ಬರಲಿದೆ. ಆದರೆ ಅದರಿಂದ ಹೊರಬರುವ ವಿಶೇಷ ವಿದ್ಯೆ ನಿಮಗೆ ತಿಳಿದಿದೆ. ಆಹಾರದ ವಿಷಯದಲ್ಲಿ ಜಾಗ್ರತೆ ಇರಲಿ. ನೀವು ಇನ್ನೂ ಎತ್ತರಕ್ಕೆ ಏರುವ ಸಮಯವಿದು, ನಿಮ್ಮ ನಷ್ಟದಲ್ಲಿರುವ ದಾರಿಯನ್ನು ಬದಲಾಯಿಸಿರಿ. ಭದ್ರಕಾಳಿ ಜಪವನ್ನು ಪಾರಾಯಣ ಮಾಡುತ್ತಾ ಬನ್ನಿರಿ. ಒಳ್ಳೆಯವರನ್ನು ನೋಡುವ ಮನಸ್ಸು ಹಲವಾರು ಮಂದಿಗೆ ಇರುವುದಿಲ್ಲ. ಅದಕ್ಕಾಗಿ ದೈವಿಕ ಶಕ್ತಿಯನ್ನು ಹೊಂದುವುದು ಅವಶ್ಯವಾಗಿದೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು, ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.
Post Views: 294



























