94 ಸಿ ಅರ್ಜಿಯನ್ನು ಏಕಾಏಕಿ ತಿರಸ್ಕರಿಸಬಾರದು : ಶಾಸಕ ಸುನಿಲ್ ಕುಮಾರ್ ಖಡಕ್ ಸಲಹೆ
ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ 94ಸಿ ಅರ್ಜಿಯನ್ನು ಒಟ್ಟು ವಿಲೇವಾರಿ ಮಾಡಿ ಮುಗಿಸುವ ಉದ್ದೇಶವಿಟ್ಚುಕೊಂಡು ಯಾವುದೇ ಅರ್ಜಿಯನ್ನು ಕೂಡ ವಜಾ ಮಾಡದೆ ಎಲ್ಲವನ್ನೂ ಪುರಸ್ಕರಿಸಬೇಕೆಂದು ಶಾಸಕ ಸುಮಿಲ್ ಕುಮಾರ್ ಅವರು ತಾಲೂಕಿನ ಅಧಿಕಾರಿಗಳಿಗೆ ಖಡಕ್ ಸಲಹೆ ನೀಡಿದ್ದಾರೆ.
ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳ ಸಭೆ ನಡೆಸಿ, ಕಾರ್ಕಳ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಮಾತನ್ನಾಡಿದ ಶಾಸಕ ಸುನಿಲ್ ಕುಮಾರ್, ಅಕ್ರಮ ಸಕ್ರಮ ಮತ್ತು ಅರಣ್ಯ ಪಕ್ಕದಲ್ಲಿ ವಾಸಿಸುವವರು , ಮುಂತಾದವರು ನೀಡಿರುವ ವಿವಿಧ ನಮೂನೆಗಳ ಅರ್ಜಿಯನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಕೂಡುದು. ಕಂದಾಯ ಹಾಗೂ ಅರಣ್ಯ ಇಲಾಖೆಯವರ ಜಂಟಿ ಅಳತೆಯಾಗುವುದಕ್ಕೆ ಮುನ್ನವೇ ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಮುಂದೆ ಆ ಜಾಗವನ್ನು ಪುರಸ್ಕರಿಸಲು ಅರ್ಹವಾದರೂ ಅದಕ್ಕೆ ಪುನಃ ಅರ್ಜಿ ಕೊಡುವುದಕ್ಕೆ ಅವಕಾಶವೇ ಇರುವುದಿಲ್ಲ. ಹಾಗಿರುವಾಗ ಇಲಾಖೆಗಳ ಜಂಟಿ ತನಿಖೆಯಾಗುವವರೆಗೆ ಯಾರದೇ ಅರ್ಜಿಯನ್ನು ಯಾವುದೇ ಕಾರಣಕ್ಕೂ ವಜಾಮಾಡಕೂಡದು ಎಂದು ತಹಶೀಲ್ದಾರರುಗಳಿಬ್ಬರಿಗೂ ಸಲಹೆ ನೀಡಿದ್ದಾರೆ.



























