ವಾರಭವಿಷ್ಯ
ದಿನಾಂಕ 09. 11.2025 ರಿಂದ 15.11.2025ರ ತನಕ
-ಕೆ.ಸುಬ್ರಹ್ಮಣ್ಯ ಆಚಾರ್ಯ
ಮೇಷ : ಸಾಡೇ ಸಾತ್ ಶನಿಯ ವಿಷಯ ಗಮನದಲ್ಲಿ ಇಟ್ಟುಕೊಂಡು, ನೀವು ತೆಗೆದು ಕೊಳ್ಳುವ ಯೋಜನೆ ಸರಿಯಾಗಿದ್ದಲ್ಲಿ ಆರ್ಥಿಕ ಆದಾಯ ಹೆಚ್ಚಾಗಲಿದೆ. ದೈವಾನುಕೂಲತೆ ಪೂರ್ಣತೆಯಾಗಿಲ್ಲ, ಮಕ್ಕಳ ವಿಷಯದಲ್ಲಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ದಾಂಪತ್ಯದಲ್ಲಿ ಕಿರಿಕಿರಿ ಹೆಚ್ಚಾಗಿರುತ್ತದೆ. ರವಿ ಬುಧ ಕುಜ ಚಂದ್ರ ಜೊತೆಯಾದಾಗ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಮಿತ್ರರೇ ಶತ್ರುಗಳಾಗುವ ಸಂಭವವಿದೆ ಎಚ್ಚರವಿರಲಿ. ದೇವೀ ಸಪ್ತಶತೀ ಪಾರಾಯಣ ಅಗತ್ಯವಿದೆ.
ವೃಷಭ : ವೃತ್ತಿ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಚೇತರಿಕೆಯ ದಿನಗಳು ಬರಲಿವೆ 2028 ರ ವರೆಗೆ ಶನಿ ದೇವರು ಉತ್ತಮ ಆದಾಯವನ್ನು ಕೊಡುತ್ತಾರೆ. ಜೊತೆಗೆ ನಿಮ್ಮ ಸಹೋದರ ವರ್ಗದವರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಮನಸ್ಸಿನ ನೆಮ್ಮದಿಗೆ ಭದ್ರಕಾಳಿ ಅಮ್ಮನವರ ಶ್ಲೋಕ ಪಾರಾಯಣ ಅಗತ್ಯವಿದೆ. ಬೆಲೆಬಾಳುವ ವಸ್ತುಗಳ ಖರೀಧಿ ಮಾಡಲಿದ್ದೀರಿ. ಮಹಿಳೆಯೊಬ್ಬರಿಂದ ಅವಮಾನಗೊಳ್ಳುವ ಪ್ರಸಂಗವಿದೆ, ಮನಸ್ಸು ಚಾಂಚಲ್ಯಗೊಳ್ಳಲಿದೆ.
ಮಿಥುನ : ಪತ್ನಿಯ ಕಡೆಯವರಿಂದ ಆರ್ಥಿಕ ಸಹಾಯ ದೊರೆಯಲಿದೆ. ನಿಮ್ಮ ಸಹೋದರರಿಗೂ ಶುಭ ಸಮಯವಿದಾಗಿದೆ. ಆದಾಯದ ಮೂಲಗಳು ಅನೇಕ ರೀತಿಯಲ್ಲಿ ಗೋಚರಕ್ಕೆ ಬರಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರವಿರುವುದು ಒಳ್ಳೆಯದು. ವಾಹನ ಚಾಲನೆಯಲ್ಲಿ ಎಚ್ಚರವಿರುವುದು ಒಳ್ಳೆಯದು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಒತ್ತಡದ ಜೀವನದಲ್ಲಿ ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ, ಹಿರಿಯರ ಆರೋಗ್ಯದ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.
ಕರ್ಕಾಟಕ : ನಿಮ್ಮ ಜಾತಕದ ವಿಮರ್ಶೆ ಮಾಡಿಸುವುದು ಅಗತ್ಯವಿದೆ. ರಾಹು ಶನಿಯ ವಿಷಯವಾಗಿ ತಿಳಿದುಕೊಳ್ಳಿರಿ. ಆಹಾರದ ವಿಷಯವಾಗಿ, ಅಲೆರ್ಜಿಯ ವಿಷಯವಾಗಿ ಗಮನವಿರಲಿ.ನೀರಿನ ಬದಿಗೆ ಹೋಗುವ ಸಂದರ್ಭ ಬಂದಾಗ ಎಚ್ಚರವಿರಲಿ.ರಾತ್ರಿ ಸಂಚಾರ 2026 ರ ವರೆಗೆ ಬೇಡ, ವಿಷ ಜಂತುಗಳ, ನಾಲ್ಕು ಕಾಲಿನ ಪ್ರಾಣಿಗಳ ಬಗ್ಗೆ ಎಚ್ಚರವಿರಲಿ.ಚೇಳು ಕಚ್ಚುವ ಸಾಧ್ಯತೆ ಇರುತ್ತದೆ. ತಂದೆಯವರ ಆರೋಗ್ಯದ ಬಗ್ಗೆ ಗಮನವಿರಲಿ.
ಸಿಂಹ :ನಿಮಗೆ ಪ್ರಸ್ತುತ ದೈವಾನುಗ್ರಹ ಇರುವುದಿಲ್ಲ. ಕಾಲು ಅಥವಾ ಉದರ ಸಂಬಂಧಿ ಸಮಸ್ಯೆ ನಿಮ್ಮನ್ನು ಕಾಡಲಿದೆ. ನೀವು ಕಿರುಚುವುದನ್ನು ಆದಷ್ಟು ಕಡಿಮೆ ಮಾಡಿರಿ, ಸಂಗಾತಿಗೆ ಉಸಿರಾಡಲು ಬಿಡಿ, ಆರ್ಥಿಕ ಆದಾಯ ಹೆಚ್ಚಿದ್ದರೂ ಸಮಾನ ಖರ್ಚನ್ನು ಭರಿಸಬೇಕಾಗಿದೆ. ರಾಜಕೀಯ ವ್ಯಕ್ತಿಗಳಿಂದ ನೆರವು ದೊರೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಹೂಡಿಕೆ ಮಾಡಲು ಡಿಸೆಂಬರ್ 5 ದಾಟಬೇಕು. ಮನೆಯಲ್ಲಿ ಭೂಮಿ ಸಂಬಂಧ ಕಲಹ ಬರುವ ಸಾಧ್ಯತೆ ಇರುತ್ತದೆ.
ಕನ್ಯಾ : ನೀವು ಎಷ್ಟೇ ಬುದ್ಧಿವಂತರಾದರೂ ಅನುಭವಿಗಳ ಮಾರ್ಗದರ್ಶನ ಅಗತ್ಯವಿದೆ. ಮಹಿಳೆಯೊಬ್ಬಳಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಅನುಪಯುಕ್ತ ವ್ಯಕ್ತಿ ಎಂದು ನೀವು ತಿಳಿದಿರುವ ವ್ಯಕ್ತಿಯಿಂದಲೇ ನಿಮಗೆ ಸಹಾಯವಾಗಲಿದೆ, ಬರುವ ಆದಾಯದಲ್ಲಿ ಉತ್ತಮ ಚೇತರಿಕೆಯನ್ನು ಕಾಣುವಿರಿ, ಬಂಧುಗಳ ಜೊತೆಗೆ ಕಲಹ ನಿರೀಕ್ಷಿತ, ಗುರುವಿನ ಅನುಗ್ರಹ ಅತ್ಯುತ್ತಮವಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಪಡೆಯಲಿದ್ದೀರಿ.
ತುಲಾ : ಉತ್ತಮ ನಿರೀಕ್ಷಿತ ಉದ್ಯೋಗ ಪ್ರಾಪ್ತಿಯಾಗಲಿದೆ. ಕ್ರಿಯಾ ಶೀಲ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ವಿವಾಹ ಸಂಬಂಧಿ ಮಾತುಕತೆಗಳು ನಡೆಯಲಿವೆ. ನೀವು ಎಲ್ಲರನ್ನೂ ತಿರಸ್ಕರಿಸಲು ಕಾರಣವೇನಿರಬಹುದು. ಪಾರ್ವತೀ ಸ್ವಯಂವರ ಪೂಜೆಯನ್ನು ಮಾಡಿಸಿರಿ, ಜೀವನವೆಂಬ ಪ್ರಯಾಣದಲ್ಲಿ ಹೊಂಡಗಳು ಅನೇಕವಿವೆ ಎಲ್ಲವನ್ನು ತಪ್ಪಿಸಿಕೊಂಡು ಹೋಗಬೇಕಾಗಿದೆ.
ವೃಶ್ಚಿಕ : ನಿಶ್ಚಿತವಾದ ಗುರಿ ತಲುಪಲು ರಾಹು,ಶನಿ ಬಿಡುತ್ತಿಲ್ಲ. ನಿಮ್ಮ ಸಾಮರ್ಥ್ಯವೊಂದೇ ಇಲ್ಲಿ ಸಹಾಯ ಮಾಡಲಿದೆ ನರಸಿಂಹ ದೇವರ ಪಾರಾಯಣ ಅಗತ್ಯವಿದೆ, ಗುರುವಿನ ಅನುಗ್ರಹ ಉತ್ತಮವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಬಹಳ ಉತ್ತಮವಾದ ಸಮಯವಾಗಿದೆ. ಕೌಟುಂಬಿಕ ವ್ಯವಹಾರಗಳಲ್ಲಿ ತಾಳ್ಮೆ ಸಂಯಮವಿರಲಿ. ಸಕಾರಾತ್ಮಕ ಚಿಂತನೆ ನಿಮ್ಮ ಜೀವನವನ್ನು ಬದಲಾಯಿಸಲಿದೆ. ನಿಮ್ಮ ಸುತ್ತಲೂ ವೈರಿಗಳೇ ತುಂಬಿದ್ದಾರೆ, ಅನ್ಯ ಮಹಿಳೆಯೊಬ್ಬಳಿಂದ ಅವಮಾನವಾಗುವ ಸೂಚನೆಯಿರುತ್ತದೆ.
ಧನು : ಗುರುವಿನ ಶನಿಯ ಅನುಗ್ರಹ ಪ್ರಸ್ತುತ ಇರುವುದಿಲ್ಲ. ವೃತ್ತಿ ಅಥವಾ ವ್ಯವಹಾರ ಕ್ಷೇತ್ರದಲ್ಲಿ 2028 ರ ವರೆಗೆ ಹೊಸ ಹೂಡಿಕೆ ಬೇಡ. ಅವಿವಾಹಿತರು ಡಿಸೆಂಬರ್ 5 ರ ನಂತರ ಗುರು ಬಲವನ್ನು ಪಡೆಯಲಿದ್ದಾರೆ. ಆರ್ಥಿಕ ಲೆಕ್ಕಾಚಾರ ಸರಿಯಾಗಿಲ್ಲವಾದರೆ ಸಾಲದ ಹೊರೆ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ಅಗತ್ಯವಿರುತ್ತದೆ.
ಮಕರ : ಹಿರಿಯರನ್ನು ಕಡೆಗಣಿಸಿ ಯಾವುದೇ ಕೆಲಸವನ್ನು ಮಾಡಲು ಪ್ರಯತ್ನಿಸದಿರಿ, ಸಂಗಾತಿಯ ಸಹಾಯ ನಿಮಗಿರುತ್ತದೆ. ಪ್ರೇಮ ವಿವಾಹಕ್ಕೆ ಇದು ಸಕಾಲವಾಗಿದೆ, ಬರುತ್ತಿರುವ ಆದಾಯದಲ್ಲಿ ಹೆಚ್ಚುವರಿಯಾಗಲಿದೆ. ಸರಕಾರಿ ಕೆಲಸಗಳಲ್ಲಿ ತೊಂದರೆಗಳಾಗುವ ಸಾಧ್ಯತೆ ಇರುತ್ತದೆ. ಈಶ್ವರ ದೇವರ ಪ್ರಾರ್ಥನೆ ಅಗತ್ಯವಿದೆ ಅಷ್ಟಮದ ಕೇತುವಿನ ದೋಷ ಪರಿಹಾರಕ್ಕಾಗಿ ಗಣಪತಿ ಅಥರ್ವ ಶೀರ್ಷ ಪಾರಾಯಣ ಮಾಡಿರಿ. ನಕಾರಾತ್ಮಕ ಚಿಂತನೆಯಿಂದ ಹೊರಗೆ ಬನ್ನಿರಿ,
ಕುಂಭ : ಎಲ್ಲವನ್ನೂ ಕಾಲದ ಮಹಿಮೆಗೆ ಬಿಡುವುದು ಒಳ್ಳೆಯದು,ಡಿಸೆಂಬರ್ 5 ರ ನಂತರ ದೈವಾನುಗ್ರಹ ಪ್ರಾಪ್ತಿಯಾಗಲಿದೆ. ಸಾಡೇ ಸಾತ್ ಶನಿ ನಿಮ್ಮಲ್ಲಿ ವ್ಯರ್ಥ ಖರ್ಚನ್ನು ಮಾಡಿಸಲಿದ್ದಾನೆ. ಸಿಟ್ಟನ್ನು ತರಿಸಲಿದ್ದಾನೆ. ಅವುಗಳ ದೃಢತೆಗೆ ಆಧ್ಯಾತ್ಮದ ಕಡೆಗೆ ಹೋಗುವುದು ಒಳ್ಳೆಯದು. ವಾಹನ ಅಥವಾ ಭೂ ಖರೀಧಿ ಮಾಡುವ ಯೋಗವಿದೆ, ಹೊಸ ಸಾಲಕ್ಕೆ ಪ್ರಯತ್ನ ಮಾಡುವುದು ಬೇಡ, ನಿಮ್ಮ ವ್ಯಕ್ತಿತ್ವದ ಪರಿವರ್ತನೆ ಮಾಡಿಕೊಳ್ಳುವುದು ಒಳ್ಳೆಯದು,
ಮೀನ : ಸಾಡೇ ಸಾತ್ ಶನಿಯ ಪ್ರಭಾವ ನಿಮ್ಮ ಗಮನಕ್ಕೆ ಮಹಿಳೆಯೊಬ್ಬರಿಂದ ಅವಮಾನಕ್ಕೆ ಒಳಗಾಗುವ ಮೂಲಕ ತಿಳಿದು ಬರಲಿದೆ. ಚಾಮುಂಡಿ ದೇವಿಯ ಪಾರಾಯಣ ಅಗತ್ಯವಿದೆ. ಮಾನಸಿಕ ಚಾಂಚಲ್ಯದಿಂದ ಹೊರಗೆ ಬನ್ನಿರಿ, ಅನಾವಶ್ಯಕ ವಿಳಂಬದಿಂದ ಮಾಡಬೇಕಾದ ಕೆಲಸ ಕೆಡಬಹುದು ನಿಮ್ಮಲ್ಲಿ ತಾಳ್ಮೆ ಇರಲಿ. ಕಾರ್ಯ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಿದೆ. ಕೃಷಿಕರು ಉತ್ತಮ ಆದಾಯವನ್ನು ಹೊಂದಲಿದ್ದಾರೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುತ್ತದೆ. ಜಾತಕವಿಲ್ಲದವರಿಗೆ ಕವಡೆಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.



































