ವಾರಭವಿಷ್ಯ ದಿನಾಂಕ 02.11.2025 ರಿಂದ 08.11.2025 ರ ತನಕ
ವಿಶೇಷ ದಿನಗಳು : 02.11.2025 ……ಉತ್ಥಾನ ದ್ವಾದಶಿ ತುಲಸೀ ಪೂಜೆ ತುಲಾ ರಾಶಿಗೆ ಶುಕ್ರನ ಪ್ರವೇಶ ;
05.11.2025.. .ಪೂರ್ಣಿಮಾ
ಮೇಷ : ಆತ್ಮ ವಿಶ್ವಾಸದಿಂದ, ಆಗಬೇಕಾದ ಕೆಲಸಗಳನ್ನು ಸಾಧಿಸಿಕೊಳ್ಳಿರಿ. ಹಳೆಯ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದರೆ, ಯಶಸ್ಸು ಸಿದ್ದ. ಕೆಲವೊಂದು ಸಂದರ್ಭಗಳಲ್ಲಿ ನಿಷ್ಟುರವಾಗಿ ವರ್ತಿಸಬೇಕಾಗುತ್ತದೆ. ಬಂಧುಗಳ ಜೊತೆಗೆ ಭಿನ್ನಾಭಿಪ್ರಾಯಗಳು ಬಾರದಂತೆ ಎಚ್ಚರವಹಿಸಿರಿ, ಆರ್ಥಿಕವಾಗಿ ನಷ್ಟಗಳು ಉಂಟಾಗದಂತೆ ಎಚ್ಚರವಹಿಸಿರಿ, ತಂದೆ ತಾಯಿಯವರನ್ನು ದೂರಮಾಡಿದರಲ್ಲವೇ ? ಸಂಗಾತಿಯ ಮಾತು ಕೇಳಿ ಜನ್ಮ ಕೊಟ್ಟವರನ್ನು ಮರೆಯಬೇಡಿರಿ.
ವೃಷಭ : ಸಂಗಾತಿಯ ಬೇಸರಕ್ಕೆ ಗುರಿಯಾಗುವಿರಿ. ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ಶನಿ ಧಾರಾಳವಾಗಿ ಅನೇಕ ಆದಾಯದ ಮೂಲಗಳನ್ನು ಒದಗಿಸಿ ಕೊಡಲಿದ್ದಾನೆ. ಮಕ್ಕಳ ವಿಷಯದಲ್ಲಿ ಮನಸ್ಸಿಗೆ ಚಿಂತೆ ಬರಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ, ಉದ್ಯೋಗ ನಿಮಿತ್ತ ಬೇರೆ ಕಡೆಯಲ್ಲಿದ್ದರೂ ಮನೆಯ ನೆನಪು ನಿಮಗೆ ಕಾಡಲಿದೆ. ಮಾನಸಿಕ ಒತ್ತಡದಿಂದ ಹೊರಬರಲು ನಿಮ್ಮ ಮಿತ್ರರು ಸಹಾಯ ಮಾಡಲಿದ್ದಾರೆ.
ಮಿಥುನ : ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಕೆಲಸಗಳಿಂದ ಶ್ಲಾಘನೆ ಪಡೆಯುತ್ತೀರಿ. ಹೊಸ ಉದ್ಯೋಗಕ್ಕಾಗಿ ನೀವು ಮಾಡುವ ಪ್ರಯತ್ನ ಯಶಸ್ವಿಯಾಗಲಿದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರದ ಊರಿಗೆ ಹೋಗಲಿದ್ದಾರೆ.ಪ್ರಮುಖ ಕೆಲಸ ಕಾರ್ಯಗಳನ್ನು ನಿರ್ವಹಿಸಲು ತಾಳ್ಮೆ ಅಗತ್ಯವಿದೆ. ವೃತ್ತಿಕ್ಷೇತ್ರದಲ್ಲಿ ವರ್ಗಾವಣೆ, ಭಡ್ತಿ ಸಿಗಲಿದೆ. ಉತ್ತಮ ದೈವಾನುಗ್ರಹವಿರುವ ಸಮಯವಾಗಿದೆ. ಭೂಮಿ ವ್ಯವಹಾರಕ್ಕೆ ಉತ್ತಮ ಸಮಯವಾಗಿದೆ.
ಕರ್ಕಾಟಕ : ಜನ್ಮ ರಾಶಿಯಲ್ಲಿ ಇರುವ ಗುರು ಮಿಶ್ರ ಫಲವನ್ನು ನೀಡಲಿದ್ದಾನೆ. ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಯಲು, ನೀವೀಗ ಮಾಡುತ್ತಿರುವ ಉದ್ಯೋಗದ ಜೊತೆಗೆ ಅರೆಕಾಲಿಕ ವೃತ್ತಿಯನ್ನು ನಿರ್ವಹಿಸಿದರೆ ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ಗ್ರಾಹಕರ ಜೊತೆಗೆ ಸೌಹಾರ್ಧಯುತವಾಗಿ ವರ್ತಿಸಿರಿ. ನಿಮ್ಮ ಅಭ್ಯಾಸಗಳು ಆರೋಗ್ಯಕರವಾಗಿರಲಿ. ಕಾನೂನಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಅಡೆತಡೆಗಳು ಬರಲಿವೆ. ನಾಗ ದೇವರ ಯಥಾ ಶಕ್ತಿ ಸೇವೆಯನ್ನು ಮಾಡುತ್ತಾ ಬನ್ನಿರಿ,
ಸಿಂಹ : ಪಾಲುದಾರಿಕೆಯ ವ್ಯವಹಾರ ಮಾಡುವವರಿಗೆ ಹೊಸ ಅವಕಾಶಗಳು ಕೂಡಿ ಬರಲಿದೆ. ವಿದ್ಯಾರ್ಥಿಗಳು ಜಡತ್ವದಿಂದ ಹೊರಗೆ ಬರಲು ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಿರಿ. ದೀರ್ಘಕಾಲದಿಂದ ಕಾದಿರುವ ಯೋಜನೆಗಳಿಗೆ ವೇಗ ಕೊಡಲು ಮರೆಯಬೇಡಿರಿ. ಇತರರಿಗೆ ನೀಡಿರುವ ಭರವಸೆಗಳನ್ನು ಪೂರೈಸಲು ಮರೆಯಬೇಡಿರಿ. ಗುರು ವ್ಯಯದಲ್ಲಿ ಅಷ್ಟಮದಲ್ಲಿ ಶನಿ ಸಪ್ತಮದಲ್ಲಿ ರಾಹು ಇರುವುದರಿಂದ ಆರೋಗ್ಯದ ಕಡೆಗೆ ಗಮನವಿರಲಿ.
ಕನ್ಯಾ :ಕೆಲಸಕಾರ್ಯಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಂಡರೆ ಅಭಿವೃದ್ಧಿ ಸಾಧಿಸುತ್ತೀರಿ.ಆಕಸ್ಮಿಕ ಧನಲಾಭವಾಗುವ ಸೂಚನೆ ಇರುತ್ತದೆ. ನಿಮ್ಮ ಉತ್ತಮ ನಡವಳಿಕೆಯಿಂದ ಉನ್ನತ ಸ್ಥಾನ ಮಾನ ಸಿಗಲಿದೆ. ಹೊಸ ಹೂಡಿಕೆಯ ವಿಚಾರದಲ್ಲಿ ಅನುಭವಿಗಳ ಸಲಹೆ ಪಡೆಯಲು ಮರೆಯಬೇಡಿರಿ. ಭೂ ಸಂಬಂಧಿ ಪ್ರಕರಣದಲ್ಲಿ ಹಿನ್ನೆಡೆಯಾದರೂ ಪೂರ್ವ ಪುಣ್ಯದ ಫಲ ನಿಮಗಿರುತ್ತದೆ. ಗುರುವಿನ ಪೂರ್ಣ ಅನುಗ್ರಹ ನಿಮಗಿರುವುದರಿಂದ ಹೆದರುವ ಅಗತ್ಯವಿರುವುದಿಲ್ಲ.
ತುಲಾ : ನಿಮ್ಮ ಪ್ರಮಾಣಿಕ ಪ್ರಯತ್ನಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ಹೊಸ ವಾಹನ ಖರೀಧಿಯ ನಿಮ್ಮ ಪ್ರಯತ್ನ ಸಫಲವಾಗಲಿದೆ. ಆಸ್ತಿಯ ವಿಚಾರವಾಗಿ ಸಹೋದರ ವರ್ಗದವರ ಜೊತೆಗೆ ವಿವಾದಗಳು ಬರುವ ಸಾಧ್ಯತೆ ಇರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಉದ್ಯಮ ಕ್ಷೇತ್ರದಲ್ಲಿ ಉತ್ತಮ ಲಾಭ ಪಡೆಯುವ ಸಮಯವಾಗಿದೆ. ಕೃಷಿ ಕಾರ್ಯದಲ್ಲಿ ಉತ್ತಮ ಲಾಭ ಬರಲಿದೆ.
ವೃಶ್ಚಿಕ : ಜನ್ಮ ರಾಶಿಯಲ್ಲಿ ಕುಜ ಮತ್ತು ಬುಧ,ವ್ಯಯದಲ್ಲಿ ರವಿ ಮತ್ತು ಶುಕ್ರ ಸುಖ ಸ್ಥಾನದಲ್ಲಿ ರಾಹು ಪಂಚಮದಲ್ಲಿ ಶನಿ ಇವರೆಲ್ಲರೂ ಪ್ರತಿಕೂಲ ಸ್ಥಿತಿಯಲ್ಲಿದ್ದಾರೆ. ಯಥಾ ಶಕ್ತಿ ಪರಿಹಾರ ಅಗತ್ಯವಿರುತ್ತದೆ, ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿರುತ್ತದೆ. ಹಣ ಕಾಸಿನ ವಿಚಾರದಲ್ಲಿ ಎಚ್ಚರವಿರಲಿ. ಮಕ್ಕಳ ಶಿಕ್ಷಣದ ವಿಚಾರವಾಗಿ ಗಮನವಿರಲಿ.ಅನ್ಯರು ನಿಮ್ಮ ವ್ಯವಹಾರದಲ್ಲಿ ಮೂಗು ತೂರಿಸುವ ಸಾಧ್ಯತೆ ಇರುತ್ತದೆ.
ಧನು : ಪ್ರಮುಖ ವ್ಯಾಪಾರ ಸಂಪರ್ಕಗಳು ಅಭಿವೃದ್ಧಿಯಾಗಲಿವೆ. ವಾಹನ ಚಾಲನೆಯಲ್ಲಿ ಜಾಗ್ರತೆವಹಿಸಬೇಕಾಗಿದೆ. ಗುರು ಹಿರಿಯರೊಂದಿಗೆ ವಿರೋಧ ಬಾರ ದಂತೆ ಎಚ್ಚರ ವಹಿಸಬೇಕಾಗಿದೆ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಯೋಗವಿದೆ, ಹೊಸ ಮನೆ ಭೂ,ವಾಹನ ಖರೀಧಿ ಮಾಡಲು ಸರಿಯಾದ ಸಮಯವಾಗಿದೆ. ಗುರು ಅಷ್ಟಮದಲ್ಲಿ ಸುಖ ಸ್ಥಾನದಲ್ಲಿ ಶನಿ ಇರುವುದರಿಂದ ಆರೋಗ್ಯದ ಬಗ್ಗೆ ಎಚ್ಚರವಿರಲಿ. ವ್ಯವಹಾರದಲ್ಲಿ ಎಚ್ಚರವಿರಬೇಕು.
ಮಕರ : ಸಹೋದರ ಸಂಬಂಧಿಗಳಿಂದ ಸೂಕ್ತ ಸಮಯದಲ್ಲಿ ಸಹಾಯ ಸಿಗಲಿದೆ, ಶನಿ ತೃತೀಯಾದಲ್ಲಿ ಇರುವುದನ್ನು ಗಮನಿಸಿರಿ .ಪಶು ಸಾಕಾಣಿಕೆ ಉತ್ತಮ ಲಾಭ ತರಲಿದೆ. ಮಕ್ಕಳ ಪ್ರಗತಿಯನ್ನು ಸಂತೋಷ ಪಡುವ ಸಮಯ ನಿಮ್ಮದಾಗಲಿದೆ. ವೃತ್ತಿ -ವ್ಯವಹಾರ ಕ್ಷೇತ್ರದಲ್ಲಿ ಉದಾಸೀನ ಮಾಡದಿದ್ದರೆ ಲಾಭ ಗಳಿಸಲಿದ್ದೀರಿ.ಕಿವಿ ಅಥವಾ ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ. ಅಷ್ಟಮದಲ್ಲಿರುವ ಕೇತುವಿಗೆ ಗಣಪತಿಯನ್ನು ಪ್ರಾರ್ಥಿಸಿರಿ,
ಕುಂಭ : ಪರಿಶ್ರಮದ ದುಡಿಮೆಯಿಂದ ವಿವಿಧ ಮೂಲಗಳಿಂದ ಆದಾಯ ಹೆಚ್ಚಿಸಿಕೊಳ್ಳುತ್ತೀರಿ. ಗುರುವಿನ ಅನುಗ್ರಹದ ಕೊರತೆ ಇರುತ್ತದೆ. ಸಾಡೇ ಸಾತ್ ಶನಿಯ ದೋಷವಿರುತ್ತದೆ. ಮಕ್ಕಳ ವಿಷಯದಲ್ಲಿ ಎಚ್ಚರವಿರಲಿ. ಭೂ ವ್ಯವಹಾರ ಅಥವಾ ಕೃಷಿ ವಿಷಯದಲ್ಲಿ ಅಭಿವೃದ್ಧಿ ಕಾಣುತ್ತೀರಿ.ಹೊಟ್ಟೆ ಅಥವಾ ನಾಭಿಯ ಕೆಳಗಿನ ಪ್ರದೇಶದಲ್ಲಿ ಅನಾರೋಗ್ಯ ಕಾಡಬಹುದು.ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಒಳ್ಳೆಯ ಸಮಯ.
ಮೀನ : ವೃತ್ತಿ ಕ್ಷೇತ್ರದಲ್ಲಿ ಸಂಬಂಧಿಸಿದಂತೆ ಉತ್ತಮ ಅವಕಾಶ ನಿಮ್ಮನ್ನು ಅರಸಿ ಬರಲಿದೆ.ಉದಾಸೀನ ಮಾಡಿ ಹಾಳು ಮಾಡಿಕೊಳ್ಳಬೇಡಿರಿ.ಸಹೋದರರಿಂದ ಸಹಾಯವಿದೆ.ವಾಹನ ಪ್ರಯಾಣದಲ್ಲಿ ಕಿರಿಕಿರಿಗಳು ಬರಬಹುದು.ಕಾನೂನು ವಿಷಯದಲ್ಲಿ ಅನುಭವಿಗಳಿಂದ ಸಲಹೆ ಪಡೆಯಿರಿ. ನಿರುದ್ಯೋಗಿಗಳಿಗೆ ಶುಭ ಸು ದ್ಧಿಯಿರುತ್ತದೆ ಅಷ್ಟಮದಲ್ಲಿ ಇರುವ ರವಿ ಶುಕ್ರರಿಗೆ ಯಥಾ ಶಕ್ತಿ ಪರಿಹಾರ ಅಗತ್ಯವಿರುತ್ತದೆ.








