ಬೈಲೂರು ಹಳೆ ವಿದ್ಯಾರ್ಥಿ ಸಂಘದ ಸಭೆ

Picture of RB NEWS

RB NEWS

Bureau Report

ಬೈಲೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇದರ ಹಳೆ ವಿದ್ಯಾರ್ಥಿಗಳ ಸಂಘದ ಸಮಾರಂಭವು ಅ.24 ರಂದು ಜರುಗಿತು.
105 ವರ್ಷ ಇತಿಹಾಸವುಳ್ಳ ಈ ಶಾಲೆಗೆ ನೂತನ ಕಟ್ಟಡ ರಚನೆಯಾಗಬೇಕು. ಮೂಲಭೂತ ಸೌಕರ್ಯ ಒದಗಿಸಬೇಕು ಆಂಗ್ಲ ಮಾಧ್ಯಮ ಹಾಗೂ ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಬೇಕೆಂಬ ಹಂಬಲದಿಂದ ಹುಟ್ಟಿಕೊಂಡ ಹಳೆ ವಿದ್ಯಾರ್ಥಿ ಸಂಘವನ್ನು, ನಾಯರ ಬೆಟ್ಟು ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಕೆ ಆರ್ ಸುಧೀರ್ ಹೆಗ್ಡೆ ಅವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು.
ಸಭೆಯ ಅಧ್ಯಕ್ಷ ಸ್ಥಾನವನ್ನು ಸಂಘದ ಅಧ್ಯಕ್ಷ ವಾಸುದೇವ ಶೆಟ್ಟಿಗಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ, ದಿನೇಶ್ ಕೊಡವೂರು ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಸಿಇಓ ಹಾಗೂ ಪ್ರಾಂಶುಪಾಲ ಕೌಡೂರು ನಾಯರ ಬೆಟ್ಟು ಡಾ .ಪ್ರಸನ್ನ ಕುಮಾರ್ ಹೆಗ್ಡೆ, ಶಾಲಾ ಮುಖ್ಯ ಶಿಕ್ಷಕಿ ಆಶಾ ಬಾನು, ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಸಾಲಿಯಾನ್, ಕೌಡೂರು ಹರಿ ಜೀವನ್ ಹೆಗ್ಡೆ, ಕೌಡೂರು ವಸಂತಶೆಟ್ಟಿ ಉದ್ಯಮಿ,
ನಿವ್ರತ ಯೋಧರಾದ ಸಹದೇವ ನಾಯಕ್,
ಉದ್ಯಮಿ ಮಂಜುನಾಥ ಶೆಣೈ, ಎಸ್ ಡಿ ಎಂ ಸಿ
ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೈಲೂರು ಉಪಸ್ಥಿತರಿದ್ದರು.

ಅಧ್ಯಕ್ಷ ವಾಸುದೇವ ಶೆಟ್ಟಿಗಾರ್ ಸ್ವಾಗತಿಸಿದರು.
ಕೌಶಿಕ್ ಮುನಿಯಾಲು ನಿರೂಪಿಸಿದರು.ಆಶಾ ಭಾನು ಅವರು ವಂದಿಸಿದರು.

ಆ ಪ್ರಯುಕ್ತ ಕಮಲಾಕ್ಷ ಕಾಮತ್ ರವರು ಶಾಲೆಗೆ ಭೇಟಿ ನೀಡಿದ್ದರು . ಶಾಲೆಯಲ್ಲಿ ಪುಸ್ತಕ ಪೂಜೆ,ಭಜನೆ ಹಾಗೂ ಮಕ್ಕಳಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು.
ಶಾಲಾ ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಹಕರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top