ವಿಶ್ವರೂಪ ದರ್ಶನ
ಪಡುತಿರುಪತಿಯ ವೈಭವ
ರಾಗ: ಭೂಪಾಲಿ (ಮೋಹನ)
ತಡರಾತ್ರಿಯಲಿ ಎದ್ದು! ಮುಂಜಾನೆ ಮಡಿ ಉಟ್ಟು!
ಬಂದೇವು ನಾವೆಲ್ಲಾ! ಭಕುತಿಯಿಂದ!
ಪಡುತಿರುಪತಿಯ ವೈಭವ! ವಿಶ್ವರೂಪದ ಅಂದ!
ಸರತಿ ಸಾಲಲಿ ಬಂದು! ಕಂಡೇವ!! ಪಲ್ಲವಿ
ಏನು ಚಂದವು ಇದು! ಎಷ್ಟೊಂದು ಅಂದವು!
ನಯನಗಳಿಗಿದುವು! ಔತಣವು!
ಪಡುತಿರುಪತಿ ಕ್ಷೇತ್ರದೊಳು! ಕಾರ್ತಿಕ ಮಾಸದ ಸೇವೆ!
ವಿಶ್ವರೂಪವೆಂಬ ! ದೀಪಬೆಳದಿಂಗಳು!! ೧!!
ಸವಾರಿ ಭಜನೆಯು! ದೇಗುಲಕೆ ಬಂದಾಗ!
ಲಕ್ಷ ಲಕ್ಷ ದೀಪದ! ಪ್ರಜ್ವಲನವು!
ಹಣತೆಯ ದೀಪವದು! ಸಾಲಾಗಿಟ್ಟಿಹರು!
ಒಳಸುತ್ತು! ಹೊರಸುತ್ತು! ರಥ ಬೀದಿಯೊಳು!! ೧!!
ರಂಗನ ಅಂಗಳದಿ! ಅಂಗನೆಯರು ಸೇರಿ!
ರಂಗಾದ ರಂಗೋಲಿಯ! ಇರಿಸಿಹರು!
ರಂಗುರಂಗು!ಗಳನೆಲ್ಲಾ!
ಅಂಗಳದಿ ಚೆಲ್ಲುತ್ತ! ಅಂದದ ಚಿತ್ತಾರವ ಬಿಡಿಸಿಹರು!! ೨!!
ಗರ್ಭಗುಡಿಯ ಸುತ್ತಲೂ ! ಪುಷ್ಪದ ಸಿಂಗಾರವು ! ಕುಸುಮದಾ ತೋರಣವ ! ಕಟ್ಟಿದಂಗ!
ಸರ್ಪಶಯನನೇ ನಮ್ಮ! ಪಡುತಿರುಪತೀಶನ!
ಅಭಯ ಪ್ರಸಾದದ ಲಡ್ಡು! ಸಿಕ್ಕಿತು ನಂಗ!! ೩!!
ಭಕ್ತಿಪೂರ್ವಕ ರಚನೆ:
ಕಾಂತಾವರ ಶಿವಾನಂದ ಶೆಣೈ, ಕಾರ್ಕಳ







































