ಕಾರ್ಕಳ: ಕಾರ್ಕಳ ನ್ಯಾಯಾಲಯದ ಸನಿಹದಲ್ಲಿ ಅಶ್ವಥಮರವೊಂದು ಒಣಗಿ ಅಪಾಯಕಾರಿ ಸ್ಥಿತಿಯಲ್ಲಿದೆ. ಕಳೆದ ಕೆಲ ಸಮಯಗಳಿಂದ ಒಣಗಿದ ಅಶ್ವಥಮರದ ಕೊಂಬೆಗಳು ಒಂದೊಂದಾಗಿ ಧರೆಗುರುಳುತ್ತಿದೆ. ಕಾರ್ಕಳ ನ್ಯಾಯಾಲಯದ ಪ್ರವೇಶ ದ್ವಾರದ ಬಲ ಬದಿಯಲ್ಲಿ ಈ ದೃಶ್ಯಾವಳಿ ಕಂಡುಬಂದಿದೆ. ಅಸರೆಪಡೆದ ಇತರ ಮರಗಳು, ಗಿಡಗಳು, ಬಳಿಗಳು ಈ ಅಶ್ವಥಮರವನ್ನು ಸುತ್ತುವರಿದುಕೊಂಡಿದು ಮೇಲ್ನೋಟಕ್ಕೆ ಹಸಿರು ಭರಿತವಾಗಿ ಕಾಣಬಹುದು. ಒಂದೆಡೆಯಲ್ಲಿ ನ್ಯಾಯಾಲಯ, ಮತ್ತೊಂದೆಡೆಯಲ್ಲಿ ಪ್ರವಾಸಿ ಮಂದಿರ ಇವೆ. ದೈನಂದಿನ ಕೆಲಸಕಾರ್ಯಗಳಿಗೆ ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ಪೊಲೀಸರು, ಕ್ಷಕಿದಾರರು ಸೇರಿದಂತೆ ಇತರರು ನ್ಯಾಯಾಲಯಕ್ಕೆ ಅಗಮಿಸುತ್ತಾರೆ. ಇದೇ ಪರಿಸರದ ಮೂಲಕವಾಗಿ ವಿಧ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹಾದೂ ಹೋಗುತ್ತಿದ್ದಾರೆ. ಪ್ರವಾಸಿ ಬಂಗಲೆಗೆ ವಿವಿಧ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಅಗಮಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕಾಲಮಿಂಚುವ ಮುನ್ನ ಸ್ಥಳೀಯಾಡಳಿತವು ಈ ಬಗ್ಗೆ ಗಮನ ಹರಿಸಬೇಕೆಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.