ವಿಶೇಷ ದಿನಗಳು : 17.10.2025 ….ತುಲಾ ಸಂಕ್ರಾಂತಿ 18.10.2025…..ಕರ್ಕಾಟಕ ರಾಶಿಗೆ ಗುರುವಿನ ಪ್ರವೇಶ
ಮೇಷ : ಸುಖ ಸ್ಥಾನಕ್ಕೆ ಗುರು ಪ್ರವೇಶವಾಗುತ್ತಿದ್ದಾನೆ. ನೀವು ಮಾಡುತ್ತಿರುವ ವ್ಯವಹಾರ ಯಶಸ್ವಿಯಾಗುವತ್ತ ಹೋಗಲಿದೆ. ಸಾಡೇ ಸಾತ್ ಶನಿ ಸಪ್ತಮದಲ್ಲಿ ರವಿ, ಕುಜ, ಬುಧ ಇವರು ಇರುವುದರಿಂದ ನಿಮ್ಮಲ್ಲಿ ಸಿಟ್ಟಿನ ದುಡುಕು ಸ್ವಭಾವ ಮುಂದುವರಿಯಲಿದೆ. ಮಕ್ಕಳ ವಿಷಯದಲ್ಲಿ ಬೇಸರ ಬರುವ ಸಾಧ್ಯತೆ ಇರುತ್ತದೆ, ಗಣಪತಿ ದೇವರನ್ನು ಯಥಾ ಶಕ್ತಿ ಆರಾಧಿಸಿ ಕೊಂಡು ಬನ್ನಿರಿ, ದೈಹಿಕ ಶ್ರಮ ಹೆಚ್ಚಾದರೂ ಆರ್ಥಿಕ ಲಾಭ ಗಳಿಸುವಿರಿ. ಅಧ್ಯಾಪಕ ವೃತ್ತಿಯವರಿಗೆ ಶುಭ ಸಮಯವಾಗಿದೆ.
ವೃಷಭ : ಗುರು ತೃತೀಯಾಕ್ಕೆ ಪ್ರವೇಶ ಮಾಡುತ್ತಿರುವುದನ್ನು ಗಮನಿಸಿರಿ, ಹಿರಿಯರೊಡನೆ ಮನಸ್ತಾಪವು ಹೆಚ್ಚಾಗದಂತೆ ಗಮನಹರಿಸುವುದು ಒಳ್ಳೆಯದು, ನಿಮ್ಮ ಹಳೆಯ ಅನಾರೋಗ್ಯ ಸಮಸ್ಯೆಯೂ ಪರಿಹಾರವಾಗಲಿದೆ. ದಾಂಪತ್ಯದಲ್ಲಿ ವಿರಸ ಬರದಂತೆ ಎಚ್ಚರ ವಹಿಸಿರಿ, ಹೊಸ ಮನೆ ಕಟ್ಟುವ ನಿಮ್ಮ ಕನಸು ನನಸಾಗಲಿದೆ.ಸಹೋದರನ ಸಹಾಯದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಶನಿ ನಿಮಗೆ ನಿಯತಕಾಲಿಕವಾಗಿ ಬರುತ್ತಿರುವ ಆದಾಯವನ್ನು ತರುತ್ತಲಿರುತ್ತಾನೆ.
ಮಿಥುನ : ಸಹೋದ್ಯೋಗಿಗಳಿಗೆ ನಿಮ್ಮ ಮೇಲೆ ತಪ್ಪು ಕಲ್ಪನೆ ಬಾರದಂತೆ ನಡೆದು ಕೊಳ್ಳಿರಿ. ಗುರು ದ್ವಿತೀಯಾಕ್ಕೆ ಪ್ರವೇಶ ಮಾಡುತ್ತಿರುವುದು ನಿಮ್ಮ ಪೂರ್ಣ ವ್ಯವಹಾರದ ದಿಕ್ಕನ್ನೇ ಬದಲಾವಣೆ ಮಾಡಲಿದ್ದಾನೆ. ಮಕ್ಕಳು ವಿರುದ್ಧ ದಿಕ್ಕಿನಲ್ಲಿ ಚಲಿಸಬಹುದು, ಸ್ವಂತ ಉದ್ಯಮಿಗಳಿಗೆ ಉತ್ತಮ ಲಾಭ ಬರಲಿದೆ. ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ರೀತಿಯಲ್ಲಿ ಯಶಸ್ಸು ಸಿಗಲಿದೆ. ಅನಿರೀಕ್ಷಿತ ಪ್ರಯಾಣ ಬರಲಿದೆ. ಆಪ್ತ ಸ್ನೇಹಿತರೊಂದಿಗೆ ವೈಮನಸ್ಸು ಬಾರದಂತೆ ಗಮನವಿರಲಿ.
ಕರ್ಕಾಟಕ : ಗುರು ನಿಮ್ಮ ಜನ್ಮ ರಾಶಿಗೆ ಬರುತ್ತಿರುವುದು ಸಂತೋಷದ ವಿಷಯವಾಗಲಿದೆ. ಸಾಹಸದಿಂದ ಆಗದ ಕೆಲಸಗಳು ಸಹನೆ ತಾಳ್ಮೆಯಿಂದ ಆಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಬಲ ಕೂಡಿ ಬಂದಿದೆ. ಹೊಸ ಹೂಡಿಕೆ ಮಾಡುವಾಗ ಅನುಭವಿಗಳ ಸಲಹೆ ಪಡೆಯಿರಿ, ಅಗ್ನಿ ಅಥವಾ ವಾಹನ ಸಂಬಂಧಿ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ. ಸಹೋದರರ ಜೊತೆಗೆ ಮನಸ್ತಾಪವಾಗುವ ಸೂಚನೆಯಿರುತ್ತದೆ. ಹಳೆಯ ಸಾಲವು ಮರುಪಾವತಿಯಾಗಲಿದೆ.
ಸಿಂಹ : ಜೀವನದಲ್ಲಿ ಒಮ್ಮೆಯೇ ಸೋಲಿನ ಭಾವನೆ ಉಂಟಾಗಲಿದೆ.ಗುರು ಕರ್ಕಾಟಕ ರಾಶಿಗೆ ಬಂದಿರುವುದೇ ಕಾರಣವಾಗಿದೆ. ರಾಹು ಸಪ್ತಮದಲ್ಲಿ ಇರುವುದರಿಂದ ಶನಿ ಅಷ್ಟಮದಲ್ಲಿ ಇರುವುದರಿಂದ ದಾಂಪತ್ಯದಲ್ಲಿ ಸದಾ ಒಂದಿಲ್ಲ ಒಂದು ವಿಷಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಲೇ ಇರುತ್ತದೆ. ಮಾನಸಿಕ ಒತ್ತಡಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಆದಷ್ಟು ಮೌನವಾದರೆ ಒಳ್ಳೆಯದು. ಕೇತು ಜನ್ಮ ರಾಶಿಯಲ್ಲಿ ಇರುವುದರಿಂದ ನಿಮ್ಮ ಮಾತಿನಲ್ಲಿಯೇ ಕೊಕ್ಕೆ ಇರುತ್ತದೆ.
ಕನ್ಯಾ: ಗುರು ಲಾಭ ಕ್ಷೇತ್ರದಲ್ಲಿ ಬರುತ್ತಿರುವುದು ನಿಮ್ಮ ಜೀವನದಲ್ಲಿ ಅನಿರೀಕ್ಷಿತವಾದ ಶುಭ ಕ್ಷಣಗಳನ್ನು ನೋಡಲು ಸಾಧ್ಯವಾಗಲಿದೆ. ನಿಮ್ಮ ವಾಕ್ ಸ್ಥಾನದಲ್ಲಿ ರವಿ ಬುಧ ಕುಜ ಇರುವುದು ನಿಮ್ಮ ಮಾತಿನ ಶೈಲಿಯನ್ನು ದುಡುಕುತನವನ್ನು ಬದಲಾಯಿಸುವಂತೆ ತಿಳಿಸಲಾಗುತ್ತಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿಯಾಗಲಿದೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ ದೂರವಾಗಲಿದೆ, ವೈವಾಹಿಕ ಜೀವನದಲ್ಲಿ ” ಅನುಮಾನ” ಬಾರದಂತೆ ಎಚ್ಚರವಹಿಸುವುದು ಅತೀ ಅಗತ್ಯವಾಗಿದೆ.
ತುಲಾ : ನಿಮ್ಮ ಕರ್ಮ ಕ್ಷೇತ್ರಕ್ಕೆ ಗುರು ಬಂದಿರುವುದರಿಂದ ಹೊಸ ಉದ್ಯೋಗ ಪ್ರಾಪ್ತಿ ಆಗಲಿದೆ. ಉದ್ಯೋಗ ಬದಲಾವಣೆಯ ಸೂಚನೆಯೂ ಇರುತ್ತದೆ, ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ, ಶುಕ್ರ ವ್ಯಯದಲ್ಲಿ ಇರುವುದರಿಂದ ರಿಂದ ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡುವುದು ಅಗತ್ಯವಾಗಿದೆ, 60+ ಆಗಿರುವವರು ವಾಹನ ಸಂಚಾರದಲ್ಲಿ ಎಚ್ಚರವಹಿಸುವುದು ಅತೀ ಅಗತ್ಯವಾಗಿದೆ. ನಿಶ್ಯಕ್ತಿ ಬಾಧೆ ನಿಮ್ಮನ್ನು ಕಾಡಲಿದೆ. ಯುವಕರು ಪ್ರೀತಿ ಪ್ರೇಮದಲ್ಲಿ ಬೀಳುವ ಸಾಧ್ಯತೆ ಇರುತ್ತದೆ.
ವೃಶ್ಚಿಕ : ಜೀವನದಲ್ಲಿ ಶುಭ ಗಳಿಗೆಯೊಂದು ಬಂದು ಮನಸ್ಸಿಗೆ ಉಲ್ಲಾಸ ಉಂಟಾಗಲಿದೆ. ನಿಮ್ಮನ್ನು ದೂರ ಮಾಡಿದವರೆಲ್ಲರೂ ಅವರೇ ನಿಮ್ಮ ಬಳಿಗೆ ಬರಲಿದ್ದಾರೆ.ಗುರು ಭಾಗ್ಯಕ್ಕೆ ಬಂದಿರುವುದೇ ಇದಕ್ಕೆ ಕಾರಣವಾಗಿದೆ. ರವಿ ಕುಜ ಬುಧ ವ್ಯಯಕ್ಕೆ ಬಂದಿರುವುದರಿಂದ ವ್ಯರ್ಥ ಖರ್ಚು ಬಾರದಂತೆ ಸದಾ ಎಚ್ಚರವಹಿಸಬೇಕು, ಆರೋಗ್ಯದ ಕಡೆಗೆ ಗಮನ ಕೊಡಬೇಕು. ರಾಹು ಶನಿ ಇವರಿಗೆ ಯಥಾ ಶಕ್ತಿ ಪರಿಹಾರ ಬೇಕು.
ಧನು : ಗುರು ಅಷ್ಟಮಕ್ಕೆ ಶನಿ ಸುಖ ಸ್ಥಾನದಲ್ಲಿ ಇರುವುದು ನಿಮ್ಮ ಜೀವನದಲ್ಲಿ ಸದಾ ಎಚ್ಚರದಿಂದ ಇರುವಂತೆ ಸೂಚನೆ ಕೊಡಲಾಗುತ್ತಿದೆ. ಪತನ ಭಯವಿರುತ್ತದೆ, ಬರುವ ಅದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ರವಿ ಕುಜ ಬುಧ ಲಾಭ ಕ್ಷೇತ್ರದಲ್ಲಿ ಬಂದಿರುವುದು ನಿಮ್ಮ ಮಕ್ಕಳ ಅಭಿವೃದ್ಧಿಯನ್ನು ಕಾಣುವ ಯೋಗವನ್ನು ಸೂಚಿಸುತ್ತಿದೆ. ಉದ್ಯೋಗ ಬದಲಾವಣೆ ಆಗಲಿರುವುದನ್ನು ಸೂಚಿಸುತ್ತಿದೆ, ಬೆಲೆ ಬಾಳುವ ವಸ್ತುಗಳು ಮನೆಗೆ ಬರಲಿವೆ.
ಮಕರ : ಸಪ್ತಮಕ್ಕೆ ಗುರುವಿನ ಪ್ರವೇಶ ನಿಮ್ಮ ಜೀವನವನ್ನೇ ಬದಲಾವಣೆಯತ್ತ ಒಯ್ಯಲಿದೆ. ಕರ್ಮ ಕ್ಷೇತ್ರದಲ್ಲಿ ರವಿ ಬುಧ ಕುಜ ಇರುವುದು ಉದ್ಯೋಗದಲ್ಲಿ ರಾಜಕೀಯದಲ್ಲಿ ಆರೋಗ್ಯದಲ್ಲಿ ಕೆಲವೊಂದು ಬದಲಾವಣೆ ಆಗಲಿರುವುದನ್ನು ಸೂಚನೆ ಕೊಡುತ್ತಿದೆ. ರಾಹು ಹಣವನ್ನು ವ್ಯರ್ಥ ಖರ್ಚು ಮಾಡುವಂತೆ ಮಾಡಿದರೆ ಶನಿ ಅಧಿಕ ಲಾಭವನ್ನು ಕೊಡಲಿದ್ದಾನೆ. ಉತ್ತಮ ದಾಂಪತ್ಯ ಜೀವನ ನಡೆಸುವಿರಿ. ಕಂಕಣ ಬಲದ ನಿರೀಕ್ಷೆಯಲ್ಲಿ ಇರುವವರಿಗೆ ಆಸೆ ನೆರವೇರಲಿದೆ.
ಕುಂಭ : ಗುರು ಷಷ್ಟಭಾವಕ್ಕೆ ಬಂದಿರುವುದು ನಿಮ್ಮ ಜೀವನದಲ್ಲಿ ಋಣಾತ್ಮಕ ಚಿಂತನೆಯನ್ನು ಹೆಚ್ಚಿಸುವಂತೆ ಮಾಡಲಿದ್ದಾನೆ. ಅದರ ಜೊತೆಗೆ ಸಾಡೇ ಸಾತ್ ಶನಿಯ ಪ್ರಭಾವ. ಅಂದಾಜು 47 ದಿನಗಳ ಕಾಲ ಬಹಳ ಎಚ್ಚರಿಕೆಯಿಂದ ಇರುವಂತೆ ಗುರು ಸೂಚನೆ ಕೊಡುತ್ತಿದ್ದಾನೆ. ದಾಂಪತ್ಯ ಜೀವನದಲ್ಲಿ ಕೇತು ನೀವು ಹಗ್ಗದ ಮೇಲೆ ನಡೆಯುವಂತೆ ಅಂದರೆ ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚನೆ ಕೊಡುತ್ತಿದ್ದಾನೆ.
ಮೀನ : ನಿಮ್ಮ ಜೀವನದಲ್ಲಿ ಗುರುವಿನ ಕರ್ಕಾಟಕ ರಾಶಿ ಪ್ರವೇಶ ಹೊಸ ಶುಭ ಬೆಳವಣಿಗೆಯನ್ನು ತೋರಿಸುತ್ತಿದ್ದಾನೆ, ಬರುವ ಆದಾಯಕ್ಕೆ ಶುಭ ಸೂಚನೆ, ಸಂತಾನ ಭಾಗ್ಯದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸೂಚನೆ ಸಿಗಲಿದೆ. ಅಷ್ಟಮದಲ್ಲಿ ರವಿ ಬುಧ ಕುಜ ಇರುವುದು ನೀವು ಬಹಳ ಎಚ್ಚರಿಕೆಯಿಂದ ಇರಬೇಕು, ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರರ ಜೊತೆಗೆ ಕಲಹ ಬರುವ ಸೂಚನೆ ಇರುತ್ತದೆ. ಸಾಡೇ ಸಾತ್ ಶನಿಯ ಪ್ರಭಾವ ಇರುವುದರಿಂದ ಕೋರ್ಟ್, ಪೊಲೀಸ್ ಸ್ಟೇಷನ್ ಮೆಟ್ಟಲೇರುವ ಸಾಧ್ಯತೆ ಇರುತ್ತದೆ. ಆರೋಗ್ಯದ ಸಮಸ್ಯೆ ಇರುವವರು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಾಸ್ತು ಸಲಹೆ, ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.