ಗಾಂಜಾ ಮಾರಾಟ: ಆರೋಪಿಯ ಬಂಧನ
ಮಣಿಪಾಲ : ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಸೀತಾರಾಮ ರೆಡ್ಡಿ ಪ್ರಕರಣ ಆರೋಪಿಯಾಗಿದ್ದು, ಆತನಿಂದ ಗಾಂಜಾ ಸೇರಿದಂತೆ ಕೆಲ ಪರಿಕರಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಅ. 08 ಸಂಜೆ 07:00 ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ರಾಜೀವನಗರ ಎಂಬಲ್ಲಿ ಮನೆಯಲ್ಲಿ ಗಾಂಜಾ ಶೇಖರಿಸಿಟ್ಟ ಸೀತಾರಾಮ ರೆಡ್ಡಿ ಗಾಂಜಾ ಮಾರಾಟ ಮಾಡುತ್ತಿದ್ದನು. ಮಾಹಿತಿ ಅರಿತ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕಿ ಅಕ್ಷಯಕುಮಾರಿ ಎಸ್.ಎನ್ರವರುಬಸಿಬ್ಬಂದಿಯವರೊಂದಿಗೆ ಕಾರ್ಯಚರಣೆ ನಡೆಸಿದ್ದಾರೆ.
ಆರೋಪಿಯ ವಿವರ : ಸೀತಾರಾಮ ರೆಡ್ಡಿ ತೌಟರೆಡ್ಡಿ(21), ತಂದೆ: ವಿಜಯಭಾಸ್ಕರ ರೆಡ್ಡಿ ತೌಟರೆಡ್ಡಿ ವಾಸ: ಪ್ಲಾಟ್ ನಂಬ್ರ: 6 ವೆಸ್ಟ್ ಮಾರುತಿ ನಗರ, ಬೊಡುಪ್ಪಲ್, ಘಟ್ರೇಸ್ಕರ್ ಮಂಡಲ್, ಬೊಡುಪ್ಪಲ್ ತಾಲೂಕು ರಂಗರೆಡ್ಡಿ ಜಿಲ್ಲೆ, ಆಂದ್ರಪ್ರದೇಶ ರಾಜ್ಯ, ಹಾಲಿ ವಿಳಾಸ: ಮಾತಾಪಿತಾ, ರಾಜೀವನಗರ, 80 ಬಡಗಬೆಟ್ಟು,
ಉಡುಪಿ.





































