ಗಾಂಜಾ ಮಾರಾಟ: ಆರೋಪಿಯ ಬಂಧನ

Picture of RB NEWS

RB NEWS

Bureau Report

ಮಣಿಪಾಲ : ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಸೀತಾರಾಮ ರೆಡ್ಡಿ ಪ್ರಕರಣ ಆರೋಪಿಯಾಗಿದ್ದು, ಆತನಿಂದ ಗಾಂಜಾ ಸೇರಿದಂತೆ ಕೆಲ ಪರಿಕರಗಳನ್ನು ಪೊಲೀಸರು ವಶಪಡಿಸಿದ್ದಾರೆ.

ಅ. 08 ಸಂಜೆ 07:00 ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ರಾಜೀವನಗರ ಎಂಬಲ್ಲಿ ಮನೆಯಲ್ಲಿ ಗಾಂಜಾ ಶೇಖರಿಸಿಟ್ಟ ಸೀತಾರಾಮ ರೆಡ್ಡಿ ಗಾಂಜಾ ಮಾರಾಟ ಮಾಡುತ್ತಿದ್ದನು. ಮಾಹಿತಿ ಅರಿತ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕಿ ಅಕ್ಷಯಕುಮಾರಿ ಎಸ್‌.ಎನ್‌ರವರುಬಸಿಬ್ಬಂದಿಯವರೊಂದಿಗೆ ಕಾರ್ಯಚರಣೆ ನಡೆಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಿಣೆ ನಡೆಸಿದಾಗ, ತಾನು ಮೇಘಾಲಯದಿಂದ ಆನ್‌ಲೈನ್ ಆಪ್ (ರೆಡಿಟ್) ಮುಖಾಂತರ ಗಾಂಜಾ ಮಾದಕ ವಸ್ತುಗಳನ್ನು ಅಂಚೆ ಮುಖೇನ ಖರೀದಿ ಮಾಡಿ ಮಣಿಪಾಲ ಹಾಗೂ ಉಡುಪಿ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪರಿಚಯಸ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿರುವುದಾಗಿ ಹೇಳಿರುತ್ತಾನೆ.

ಆರೋಪಿಯ ವಶದಲ್ಲಿದ್ದ ಎರಡು ಪಾರ್ಸೆಲ್ ಪ್ಲಾಸ್ಟಿಕ್ ಕವರ್‌ಗಳಲ್ಲಿ ಡೈಪರ್‌ಗಳ ಮಧ್ಯದಲ್ಲಿ ಒಟ್ಟು ಮೂರು ಪ್ಯಾಕ್ ಏರ್ ಜಿಪ್ ಬ್ಯಾಗ್ ನಲ್ಲಿ ಸುಮಾರು 01 ಕೆಜಿಗೂ ಹೆಚ್ಚು ಗಾಂಜಾ ಇರುವುದನ್ನು ಕಂಡು ಬಂದಿದೆ.

ಸದ್ರಿ ಪಾರ್ಸೆಲ್ ಪ್ಲಾಸ್ಟಿಕ್ ಕವರ್ ನಲ್ಲಿ ಇನ್ನೊಂದು ಏರ್ ಜಿಪ್ ಕವರ್ ಇದ್ದು ಅದರಲ್ಲಿ ಖಾಲಿ ಪೇಪರ್ ನಲ್ಲಿ ಗಾಂಜಾವನ್ನು ಹಾಕಿ ಸುತ್ತಿದ ಎರಡು ಪ್ಯಾಕ್ ಗಳು ಹಾಗೂ ಖಾಲಿ ಎರಡು ಏ‌ರ್ ಜಿಪ್ ಕವರ್ ಗಳು, ಟೇಬಲ್ ಮೇಲಿನ ಗಾಂಜಾವನ್ನು ಎಳೆಯುವ ಎರಡು ಬಾಂಗ್ ಹಾಗೂ 1 ಐಫೋನ್ ಹಾಗೂ ನಗದು ರೂ. 3180 ಸ್ವಾಧೀನಪಡಿಸಿಕೊಳ್ಳಲಾಗಿದೆ. ಗಾಂಜಾದ ಅಂದಾಜು ಮೌಲ್ಯ ರೂ. 60000 ಆಗಬಹುದು. ಆರೋಪಿಯ ಮೊಬೈಲ್‌ನ ಅಂದಾಜು ಮೌಲ್ಯ ರೂ. 75000 ಆಗಬಹುದು.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top