ಉದ್ಯಮಿ ಸೈಫುದ್ದಿನ್ ಕೊಲೆ ಪ್ರಕರಣ : ಮಹಿಳೆಯ ಬಂಧನ



ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಮುಹಮದ್ ಫೈಸಲ್ ಖಾನ್(27), ಉಡುಪಿ ಕರಂಬಳ್ಳಿ ಜನತಾ ಕಾಲೋನಿಯ ಮುಹಮದ್ ಶರೀಫ್(37) ಹಾಗೂ ಸುರತ್ಕಲ್ ಕೃಷಾಪುರದ ಅಬ್ದುಲ್ ಶುಕೂರು ಯಾನೆ ಅದ್ದು(43) ರಿಧಾ ಶಭನಾ(27), ಬಂಧಿತ ಆರೋಪಿಗಳು.

ಮಲ್ಪೆ: ಸಾರಿಗೆ ಉದ್ಯಮಿ ರೌಡಿ ಶೀಟರ್ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಎಕೆಎಂಎಸ್ ಬಸ್ ಮಾಲಕ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿ ರಿಧಾ ಶಭನಾ(27), ಗಂಡ : ಮೊಹಮ್ಮದ್ ಫೈಜಲ್ ಖಾನ್, ಸಿ ಗೇಟ್ ಅಪಾರ್ಟ್ಮೆಂಟ್, ಮಿಷಿನ್ ಕಂಪೌಂಡ್ ಹತ್ತಿರ, ಬಡಗುಬೆಟ್ಟು, ಉಡುಪಿ ಇವರನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಂಪತಿಯ ಪಾತ್ರ
ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಮುಹಮದ್ ಫೈಸಲ್ ಖಾನ್(27)ನ ಧರ್ಮಪತ್ನಿ ರಿಧಾ ಶಭನಾ(27) ಒಳಸಂಚು ನಡೆಸಿ ಜೈಲುಪಾಲಾಗಿದ್ದಾಳೆ.
ಉದ್ಯಮಿ ಸೈಫುದ್ದಿನ್ ನ ಅಪ್ತನಾಗಿರುವ ಫೈಸಲ್ ಖಾನ್ ಹಾಗೂ ಆತನ ಪತ್ನಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.


























