ನಕಲಿ ಮದ್ಯ ತಯಾರಕ ಘಟಕಕ್ಕೆ ದಾಳಿ : ರೂ. 5,57,690 ಮೌಲ್ಯದ ಸೊತ್ತು ವಶಕ್ಕೆ
ಮಂಗಳೂರು : ಕದ್ರಿ ಲೋಬೊ ಲೇನ್ನಲ್ಲಿ ನಕಲಿ ಮದ್ಯ ತಯಾರಿಕಾ ಅಡ್ಡೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು ರೂ. 5,57,690 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಕಲ್ ಬ್ಲೈಸ್ ಮಿನೇಜಸ್ ಪ್ರಕರಣದ ಆರೋಪಿ.
ಈತನ ಮನೆಯಲ್ಲಿ ನಕಲಿ ಮದ್ಯ ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿದರು.
ಮೈಕಲ್, ಬ್ಲೈಸ್ ಮಿನೀಜಸ್ ಎಂಬುವರ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಕಲಿ ವೈನ್ – 238.500 ಲೀಟರ್, ವೈನ್ ತಯಾರಿಸುವ ಕೊಳೆ – 1,500 ಲೀಟರ್, ಮದ್ಯ – 3.180 ಲೀಟರ್ , ನಕಲಿ ವೈನ್ ತಯಾರಿಸುವ ಸಲಕರಣೆಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.






































