ರೂ. 5 ಲಕ್ಷ ಮೌಲ್ಯದ ಅಡಿಕೆ ಕಳವು: 12 ಮಂದಿ ಬಂಧನ
ಕಾರ್ಕಳ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ನಲ್ಲಿ 2025 ಆಗಸ್ಟ್ 23 ರಂದು ತೋಟದ ಮನೆಯಲ್ಲಿ ಅಡಿಕೆ ಕಳುವು ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 12ಮಂದಿ ಆರೋಪಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ ರೂ 5 ಲಕ್ಷ ಮೌಲ್ಯ ದ 1100 ಕೆಜಿ ಅಡಿಕೆ ಯನ್ನು ವಶಪಡಿಸಿ ಕೊಳ್ಳಲಾಗಿದೆ.
2025 ಸೆಪ್ಪೆಂಬರ್ 8 ರಂದು ಕಾರ್ಕಳ ವೃತ್ತ ನೀರಿಕ್ಷಕ ಮಂಜಪ್ಪ ರವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ಗಳಾದ ಪ್ರಸನ್ನ ಎಂ ಎಸ್, ಸುಂದರ ಮತ್ತು ಎಎಸ್ಐ ಗಳಾದ ಪ್ರಕಾಶ್ ಸುಂದರ ಗೌಡ ಮತ್ತು ಸಿಬ್ಬಂದಿಗಳಾದ ರುದ್ರೇಶ್ ಚಂದ್ರಶೇಖರ ಮಹಾಂತೇಶ್ ಜಿಲ್ಲಾ ಪೊಲೀಸ್ ಕಚೇರಿ ಸಿಡಿಆರ್ ಸಿಬ್ಬಂದಿ ಗಳಾದ ದಿನೇಶ್ ನಿತಿನ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿ ರಾಮ್ ಶಂಕರ್ ಐಪಿಎಸ್. ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ್ ,ಸಹಾಯಕ ಪೊಲೀಸ್ ಅಧಿಕ್ಷಕಿ ಕಾರ್ಕಳ ಹರ್ಷ ಪ್ರಿಯಾಂವದ ರವರ ಮಾರ್ಗ ದರ್ಶನ ದಲ್ಲಿ ಕಾರ್ಯಚರಣೆ ನಡೆದಿರುತ್ತದೆ.
12 ಮಂದಿ ಆರೋಪಿಗಳನ್ನು ಬಂಧಿಸಿ (ಆರೋಪಿತರು ಕಾನೂನು ಸಂಘರ್ಷಕ್ಕೆ ಒಳಪಟ್ಟಿರುವುದರಿಂದ ಹೆಸರಿನ ಮಾಹಿತಿ ನೀಡಿರುವುದಿಲ್ಲ.) ಆರೋಪಿತರಿಂದ ರೂ 5 ಲಕ್ಷ ಮೌಲ್ಯ ದ 1100 ಕೆಜಿ ಅಡಿಕೆ ಯನ್ನು ವಶಪಡಿಸಿ ಕೊಳ್ಳಲಾಗಿದೆ.


























