ಭಾರತ ಸಂವಿಧಾನದ ಪ್ರಜಾಪ್ರಭುತ್ವ ಅಪಾಯದಲ್ಲಿ -ವಸಂತ ಆಚಾರಿ

Picture of RB NEWS

RB NEWS

Bureau Report

ಸಾಮಾಜಿಕ ಭದ್ರತೆಗಳನ್ನು ಕೊಡುವಲ್ಲಿ ವಂಚನೆ ಮಾಡುತ್ತಿರುವ ಮೋದಿ ಸರಕಾರದಿಂದ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಭಾರತ ಕಮ್ಯೂನಿಷ್ಟ ಪಕ್ಷ(ಎಮ್) ನ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ.


ಮೂಡುಬಿದಿರೆ ಸಮಾಜ ಮಂದಿರದಲ್ಲಿ ಪಕ್ಷ ಏರ್ಪಡಿಸಿದ್ದ ರಾಜಕಾಯ ಸಮಾವೇಶದಲ್ಲಿ ಪ್ರಧಾನ ಭಾಷಣಕಾರನಾಗಿ ಅವರು ಮಾತನಾಡುತ್ತಿದ್ದರು.
ವಸತಿ,ಶಿಕ್ಷಣ,ಆಹಾರ,ಆರೋಗ್ಯ ಮುಂತಾದ ಜೀವನಾವಶ್ಯಕ ಭದ್ರತೆಗಳನ್ನು ಮೋದಿ ಸರಕಾರ ನೀಡದೆ ಬಂಡವಾಳಶಾಹಿಗಳ ಜೊತೆ ವ್ಯವಹಾರ ಮಾಡಿಕೊಂಡಿದೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದರೊಂದಿಗೆ ದೇಶದಲ್ಲಿ ಭಾರೀ ನಿರುದ್ಯೋಗವನ್ನು ಹೆಚ್ಚಿಸಿದ ಕೀರ್ತಿ ಮೋದಿ ಸರಕಾರಕ್ಕೆ ದೊರಕುತ್ತದೆ. ಜಾಗತಿಕ ಬದಲಾವಣೆಯ ದುಷ್ಪರಿಣಾಮಗಳು ಭಾರತವನ್ನೂ ಕಾಡುವುದು.ಆ ಎಲ್ಲ ಮುನ್ಸೂಚನೆಗಳನ್ನು ಅರಿತುಕೊಳ್ಳದೆಯೆ ಮೋದಿ ಸರಕಾರವು ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ಮಾಜಿರುವುದು ಕೇವಲ ಬಂಡವಾಳಿಶಾಹಿಗಳ ಜೊತೆಗಿನ ಸಂಬಂಧ ಒಡನಾಟ ಮತ್ತು ಪ್ರಪಂಚದ ತಿರುಗಾಟ ಮಾತ್ರ ಎಂದು ಹೇಳಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಕೂಡ ಬಂಡವಾಳಶಾಹಿಗಳೊಂದಿಗೆ ಸೇರಿಕೊಂಡು ಆಡಳಿತ ಮಾಡುತ್ತಿದೆ. ಕಾಂಗ್ರೆಸ್ ಕೂಡಾ ಬಂಡವಾಳಶಾಹಿಗಳ ಜೊತೆಗೆನೆ ಬೆಳೆಯುತ್ತಿರುವ ಪಕ್ಷ ಎಂದು ಆರೋಪಿಸಿದರು.
ಪ್ರಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಮಂಡಲ ಸದಸ್ಯ ಯಾದವ ಶೆಟ್ಟಿ ಮಾತಾಡಿದರು. ಹಿರಿಯ ಸದಸ್ಯೆ ರಮಣಿ ಮೂಡುಬಿದಿರೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸುಂದರ ವಾಲ್ಪಾಡಿ ,ಕೃಷ್ಣಪ್ಪ ಕೊಣಾಜೆ
ಲಕ್ಷ್ಮೀ, ಗಿರಿಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಡಿ. ವೈ. ಎಫ್. ಐ. ಯವರಿಂದ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಂತರ ಮೂಡುಬಿದಿರೆ ಪುರಸಭಾ ರಾಜೀವ ಗಾಂಧಿ ವಾಣಿಜ್ಯ ಸಂಕೀರ್ಣದ ಎದುರು ನಿರುದ್ಯೋಗ ಸಮಸ್ಯೆಯ ಜಾಗೃತಿ ಸಂದೇಶ ಸಾರುವ ಬೀದಿ ನಾಟಕ ಪ್ರದರ್ಶನ ನಡೆಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top