ಅರೆಬರೆ ಕಾಮಗಾರಿ : ಸಾಣೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ!
ಸಾಣೂರು ರಾ.ಹೆ -169 : ಸಾಣೂರು ಬಿಕರ್ನಕಟ್ಟೆ ಚತುಷ್ಪಥ ಹೆದ್ದಾರಿ (ಚೈನೇಜ್ 691 ರಿಂದ 694.500 ರವರೆಗೆ_(ಕಾರ್ಕಳ ತಾಲೂಕು/ಉಡುಪಿ ಜಿಲ್ಲಾ ವ್ಯಾಪ್ತಿ)ತುರ್ತಾಗಿ ಆಗಬೇಕಾದ ಕೆಲಸ ಕಾರ್ಯಗಳು….
ಸುಮಾರು ಎರಡು ಕಿಲೋ ಮೀಟರ್ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಇನ್ನೂ ಪ್ರಸ್ತಾವನೆ ಅಂಗೀಕಾರ ಆಗಿಲ್ಲ.
ಸಾಣೂರು ಗ್ರಾಮಸ್ಥರು ಈ ಬಗ್ಗೆ ಹಲವಾರು ಪ್ರತಿಭಟನೆಗಳನ್ನು ಮಾಡಿ ಶಾಸಕರು ,ಸಂಸದರು ಮತ್ತು ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ವಿನಂತಿಸಿ ಕಾಮಗಾರಿ ಪರಿಶೀಲನೆ ನಡೆಸಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿದರು ಯಾವುದೇ ಪ್ರಗತಿ ಕಂಡು ಬರುತ್ತಿಲ್ಲ.
ಪ್ರತಿನಿತ್ಯ ಅಪಘಾತಗಳು ಪ್ರಯಾಣಿಕರಿಗೆ ಆಘಾತ


ಸರ್ವಿಸ್ ರಸ್ತೆಗಳು ಇಲ್ಲದೆ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದ ಅಡ್ಡರಸ್ತೆಯಿಂದ ವಾಹನಗಳು ಮತ್ತು ಜನರು ನೇರವಾಗಿ ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಗೆ ಬರುತ್ತಿದ್ದು ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ.
ಕಗ್ಗತ್ತಲಲ್ಲಿ ಹೆದ್ದಾರಿ: ಸಿಕ್ಕಿಲ್ಲ ಇನ್ನೂ ಬೆಳಕಿನ ಭಾಗ್ಯ

ಬೀದಿ ದೀಪಗಳಿಲ್ಲದೆ ರಾತ್ರಿ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ.
ಕನಿಷ್ಠ ಸರ್ವಿಸ್ ರಸ್ತೆ ಪೂರ್ಣಗೊಂಡಲ್ಲಿ ಕೂಡಲೇ ಬೀದಿ ದೀಪದ ವ್ಯವಸ್ಥೆ ಮಾಡಬೇಕು.
ಡೈ ವರ್ಷನ್ ನಲ್ಲಿ ಪ್ರಯಾಣಿಕರಿಗೆ ಗೊಂದಲವಾಗದಂತೆ ಬ್ಲಿಂಕರ್, ಬೆಳಕಿನ ವ್ಯವಸ್ಥೆ, ಫ್ಲೋರಸೆಂಟ್ ಸ್ಟಿಕ್ಕರ್ ಗಳನ್ನು ಅಳವಡಿಸಬೇಕು.
ಅಪೂರ್ಣ ಸೇತುವೆ

ಸಾಣೂರು ರಾ.ಹೆ ಹೊಸ ಸೇತುವೆಗೆ ಪಿಲ್ಲರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸುತ್ತಲೂ ಮಣ್ಣು ರಾಶಿ ಹಾಕಿರುವುದರಿಂದ.. ಮಳೆನೀರು ಪಕ್ಕದ ಗದ್ದೆಗಳಿಗೆ ನುಗ್ಗಿ ಕೃತಕ ನೆರೆ ಉಂಟಾಗಿದೆ. ಸೇತುವೆ ನಿರ್ಮಾಣ ಕಾರ್ಯ ಕೂಡಲೇ ಸಂಪೂರ್ಣ ಗೊಳಿಸಬೇಕು.
ರಸ್ತೆ ಕಾಮಗಾರಿ ನಡೆಯುವ ಅಕ್ಕಪಕ್ಕದಲ್ಲಿ ಮಣ್ಣು, ಕಬ್ಬಿಣದ ಸಾಮಗ್ರಿಗಳನ್ನು ಅಲ್ಲಲ್ಲಿ ರಾಶಿ ಹಾಕಲಾಗಿದ್ದು, ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಕೂಡಲೇ ಅದನ್ನು ತೆರವುಗೊಳಿಸಬೇಕು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಕಿತ್ತು ಹಾಕಿರುವ ವಿದ್ಯಾಲಯದ ಕಾಂಕ್ರೀಟ್ ಪ್ರವೇಶ ದ್ವಾರ ಮತ್ತು ಬಸ್ಸು ಪ್ರಯಾಣಿಕರ ತಂಗುದಾಣ ಕಟ್ಟಡವನ್ನು ನಿರ್ಮಿಸಿ ಕೊಡಬೇಕು.
ತಡೆಗೋಡೆಯ ಮೇಲ್ಭಾಗಕ್ಕೆ ಸುರಕ್ಷತಾ ಕಬ್ಬಿಣದ ಗ್ರಿಲ್ (ಕನಿಷ್ಠ ಐದುಅಡಿ ಎತ್ತರ)ಗಳನ್ನು ಅಳವಡಿಸಬೇಕು.
ಕಟ್ಟಡದ ಮುಂಭಾಗದ ಕೊರಕಲು ಪ್ರದೇಶಕ್ಕೆ ಮಣ್ಣು ತುಂಬಿಸಿ ಸುರಕ್ಷತೆಯನ್ನು ಕಾಪಾಡಬೇಕು.
ಕಟ್ಟಡದ ಹಿಂಭಾಗದ ಗುಡ್ಡ ಕುಸಿಯುತ್ತಿದ್ದು ಇನ್ನಷ್ಟು ದೂರದವರೆಗೆ ಮಣ್ಣನ್ನು ತೆಗೆದು ಸುರಕ್ಷತಾ ಕ್ರಮವನ್ನು ಕೈಗೊಳ್ಳಬೇಕು. ಆಟದ ಮೈದಾನದಲ್ಲಿ ಸಂಗ್ರಹ ಗೊಂಡಿರುವ ಹೆಚ್ಚುವರಿ ಮಣ್ಣನ್ನು ಹೊರಗೆ ಸಾಗಿಸಬೇಕು.
ಜಂಕ್ಷನ್ ನಲ್ಲಿ ಹೈ ಮಾಸ್ಟ್ ದೀಪ
ಮುರತಂಗಡಿ -ಇರುವತ್ತೂರು ಜಂಕ್ಷನ್ ನಲ್ಲಿ ಅಪೂರ್ವಣಗೊಂಡಿರುವ ಸರ್ವಿಸ್ ರೋಡ್ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುಕೂಲ ವಾಗುವಂತೆ ರಸ್ತೆ ಅಗಲಗೊಳಿಸಿ ರಾತ್ರಿ ವೇಳೆಯಲ್ಲಿ ಅನುಕೂಲವಾಗುವಂತೆ ಹೈ ಮಾಸ್ಟ್ ದೀಪ ಅಳವಡಿಸಬೇಕು.
ಸಾಣೂರು ಫುಲ್ಕೇರಿ_ ಬೈಪಾಸ್ ವೃತ್ತದ ಬಳಿ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆಯನ್ನು ಮಾಡಿ, ಕಳಸ -ಶೃಂಗೇರಿ , ಧರ್ಮಸ್ಥಳ-ಸುಬ್ರಹ್ಮಣ್ಯ ಭಾಗಕ್ಕೆ ಹೋಗುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ದೊಡ್ಡದಾದ ಸೂಚನಾಫಲಕ ಹಾಗೂ ಹೈ ಮಾಸ್ಟ್ ದೀಪ ಗಳನ್ನು ಅಳವಡಿಸಬೇಕು.
ಹೊಸ ಬಸ್ಸು ತಂಗುದಾಣಗಳ ನಿರ್ಮಾಣ
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೆರವುಗೊಳಿಸಿದ ಹಳೆ ಬಸ್ಸು ತಂಗುದಾಣ ಮತ್ತು ರಿಕ್ಷಾ ತಂಗುದಾಣಗಳ ಬದಲಿಗೆ ಹೊಸ ಬಸ್ಸು ತಂಗುದಾಣ ಮತ್ತು ರಿಕ್ಷಾ ತಂಗುದಾಣಗಳನ್ನು ಜನರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಸ್ಥಾಪಿಸಲು ಕೂಡಲೇ ನಿರ್ಮಾಣ ಕಾರ್ಯ ಆರಂಭಿಸಬೇಕು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಕೂಡಲೇ ಎಚ್ಚೆತ್ತು ಮಳೆಯ ಬಿರುಸು ಕಮ್ಮಿಯಾದ ಕೂಡಲೇ ಆದಷ್ಟು ಶೀಘ್ರ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಸಂಪೂರ್ಣಗೊಳಿಸಿ ವಾಹನಗಳ ಮತ್ತು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು



























