ವಾರಭವಿಷ್ಯ ದಿನಾಂಕ 07.09.2025 ರಿಂದ 13.09.2025ರ ತನಕ
ವಿಶೇಷ ದಿನಗಳು :
07.09.2025… ಪೂರ್ಣಿಮಾ..ಖಗ್ರಾಸ ಚಂದ್ರ ಗ್ರಹಣ
08.09.2025….. ಮಹಾಲಯ ಆರಂಭ
13.09.2025…..ತುಲಾ ರಾಶಿಗೆ ಕುಜನ ಪ್ರವೇಶ
ಮೇಷ: ಮಿತಿ ಮೀರಿದ ಕೆಲಸದಿಂದ ದೇಹಕ್ಕೆ ಮತ್ತು ಮನಸ್ಸಿಗೆ ಹೆಚ್ಚು ಆಯಾಸ ಆಗಲಿದೆ. ಸಾಡೇ ಸಾತ್ ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ, ರಾಜಕೀಯ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ವಕೀಲ ವೃತ್ತಿಯಲ್ಲಿ ಇರುವವರಿಗೆ ಉತ್ತಮ ಸ್ಥಾನ-ಮಾನ ಸಿಗಲಿದೆ. ನಿಮ್ಮ ಉತ್ತಮ ಯೋಜನೆಗಳಿಗೆ ಮೇಲಾಧಿಕಾರಿಗಳ ಪ್ರೋತ್ಸಾಹ ಸಿಗಲಿದೆ. ನಿಮ್ಮ ಸ್ನೇಹಿತರನ್ನು ನೇರವಾಗಿ ನಂಬುವುದು ಶ್ರೇಯಸ್ಕರವಲ್ಲ, ಉತ್ತಮ ದಾಂಪತ್ಯ ಜೀವನ ನಡೆಸಲಿದ್ದೀರಿ.
ವೃಷಭ : ವಿದ್ಯಾರ್ಥಿಗಳಿಗೆ ಅವರ ಪರಿಶ್ರಮಕ್ಕೆ ತಕ್ಕಂತೆ ಉತ್ತಮ ಪ್ರತಿಫಲ ಸಿಗಲಿದೆ. ಪಂಚಮದ ಕುಜ ಕೋಪವನ್ನು ಹೆಚ್ಚಿಸುವವನು. ಮನೆಯ ನವೀಕರಣ ಮಾಡುವ ಯೋಚನೆಯನ್ನು ಮಾಡಲಿರುವಿರಿ ದೈವಾನುಗ್ರಹ ಉತ್ತಮವಾಗಿರುವುದರಿಂದ ನೀವು ಯೋಚಿಸುವ ಕೆಲಸಗಳೆಲ್ಲವೂ ಯಾವುದೇ ಅಡೆ ತಡೆ ಇಲ್ಲದೆ ನಡೆಯಲಿದೆ. ಮಾತಿನಲ್ಲಿ ಹಿಡಿತವಿರಲಿ ಹಣ ಹೂಡಿಕೆ ಮಾಡಲು ಒಳ್ಳೆಯ ಸಮಯವಾಗಿದೆ. ಜೊತೆಗೆ ತಜ್ಞರ ಸಲಹೆ ಇರಲಿ. ಛಾಯಾ ಗ್ರಾಹಕರಿಗೆ ಉತ್ತಮ ಸಮಯ.
ಮಿಥುನ : ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸಮಯವಾಗಿದೆ. ಕುಜ ತಿಳಿಸುವಂತೆ, ವಾಹನ ಖರೀದಿ, ಭೂ ಖರೀಧಿ ಮಾಡಲು ಇದು ಸರಿಯಾದ ಸಮಯವಲ್ಲ ಪ್ರಯಾಣ ಮಾಡಲು ಇಚ್ಚಿಸುವ ನೀವು ಪೂರ್ಣ ಪ್ರಮಾಣದ ಪೂರ್ವ ತಯಾರಿಯನ್ನು ಮಾಡಿಕೊಳ್ಳಿರಿ, ವ್ಯರ್ಥ ಖರ್ಚು ಬರುವ ಲಕ್ಷಣವಿರುವುದರಿಂದ ನಿಯಂತ್ರಣವಿರಲಿ, ಸಂಗದೋಷ ಅದರಿಂದ ದುರಾಭ್ಯಾಸ ಬರುವ ಸಾಧ್ಯತೆ ಇರುವುದರಿಂದ ಅತಿಯಾದ ಆತ್ಮವಿಶ್ವಾಸದಿಂದ ದೂರವಿರುವುದು ಒಳ್ಳೆಯದು.
ಕರ್ಕಾಟಕ : ನಿಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತಿರುವ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಪರಿಶ್ರಮ ಪಡುವುದು ಅಗತ್ಯವಿದೆ. ಗುರುವಿನ ಅನುಗ್ರಹದ ಕೊರತೆ ಇರುತ್ತದೆ, ಕೃಷಿಕರಿಗೆ ಒಳ್ಳೆಯ ಲಾಭವಿರುವ ಸಮಯವಾಗಿದೆ. ಪಿತ್ರಾರ್ಜಿತ ಆಸ್ತಿ ದೊರೆಯುವ ಸಮಯ ಹತ್ತಿರ ಬರುತ್ತಿದೆ. ಮನಸ್ಸಿನಲ್ಲಿರುವ ನಕಾರಾತ್ಮಕ ಭಾವನೆಗಳನ್ನೂ ದೂರ ಮಾಡಿರಿ. ಮನಸ್ಸಿಗೆ ಅಗೋಚರವಾದ ಬೇಸರ ಬರುವ ಸಾಧ್ಯತೆಯನ್ನು ರಾಹು ಮತ್ತು ಚಂದ್ರ ತಿಳಿಸುತ್ತಿದ್ದಾರೆ.ನಾಗ ದೇವರ ಪ್ರಾರ್ಥನೆಯನ್ನು ಮಾಡಿರಿ,
ಸಿಂಹ : ನಿಮ್ಮ ಉತ್ತಮ ಕೆಲಸಗಳನ್ನು ಸಮಾಜ ಗುರುತಿಸುತ್ತಿದೆ. ಇನ್ನು ಕೆಲವೇ ಸಮಯದಲ್ಲಿ ಗುರುವಿನ ಅನುಗ್ರಹ ಕಡಿಮೆಯಾಗುವ ನೀವು ವಿಷ್ಣು ಸಹಸ್ರನಾಮ ಪಾರಾಯಣ ಹೇಳಲು ಆರಂಭಿಸಿರಿ. ನಿಮ್ಮ ಮನಸ್ಸನ್ನು ಸ್ವಚ್ಚಗೊಳಿಸಿಕೊಳ್ಳಿರಿ. ಯಾರಿಗೂ ಕೆಡುಕನ್ನು ಬಯಸಲು ಹೋಗಬೇಡಿರಿ. ನಿಮ್ಮ ಮನಸ್ಸಿನ ಸಂಕಲ್ಪದಂತೆ ಯೋಜಿತ ಕೆಲಸಗಳು ನಡೆಯಲಿವೆ, ನಿದ್ದೆಯ ಕೊರತೆ ನಿಮ್ಮನ್ನು ಬಾಧಿಸಲಿದೆ. ಅನಾವಶ್ಯಕ ಚಿಂತೆಯಿಂದ ದೂರವಿರುವುದು ಒಳ್ಳೆಯದು. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಲಿದೆ.
ಕನ್ಯಾ : ವೈವಾಹಿಕ ಜೀವನಕ್ಕೆ ಪ್ರವೇಶಿಸುವ ಶುಭ ಗಳಿಗೆ ಕೆಲವರಿಗೆ ಬರಲಿದೆ. ಅನ್ಯ ಜಾತಿಯ ವಿವಾಹ ಸಂಬಂಧ ನಡೆಯುವ ಸಾಧ್ಯತೆಯನ್ನು ಶನಿ ತಿಳಿಸುತ್ತಿದ್ದಾನೆ. ಅತಿಯಾದ ಅವಸರ ಅಪಘಾತಕ್ಕೆ ಕಾರಣವಾದೀತು, ಹಿರಿಯರ ಸಲಹೆಯೊಂದಿಗೆ ಮುನ್ನಡೆಯಿರಿ, ಕೃಷಿಕರಿಗೆ ಅತಿಯಾದ ಮಳೆಯಿಂದಾಗಿ ನಷ್ಟ ಬರುವ ಸಾಧ್ಯತೆ ಬರಲಿದೆ. ಅಭಿವೃದ್ಧಿ ಹೊಂದಲು ನ್ಯಾಯಪರವಾದ ಅನೇಕ ದಾರಿಗಳಿವೆ.ಯೋಚಿಸಿರಿ. ನಿಮ್ಮಲ್ಲಿರುವ ಹಲವಾರು ತಪ್ಪು ತಿಳುವಳಿಕೆಗಳಿಂದ ನೀವು ದೂರವಾಗಬೇಕಿದೆ.
ತುಲಾ : ಗುರುವಿನ ಅನುಗ್ರಹ ಹೊಂದಿರುವ ನಿಮ್ಮನ್ನು ತಡೆಯುವವರು ಸಧ್ಯಕ್ಕೆ ಯಾರೂ ಇರಲಾರರು, ನೂತನ ಉದ್ಯೋಗಕ್ಕೆ ಪ್ರವೇಶವಾಗುವಿರಿ, ಭಡ್ತಿ ಸಿಗುವ ಸಾಧ್ಯತೆ ಇರುತ್ತದೆ, ಕುಜ ತಿಳಿಸುವಂತೆ ಭೂಮಿ ವ್ಯವಹಾರ ಉತ್ತಮ ಲಾಭವನ್ನು ನೀಡಲಿದೆ, ದಾಖಲೆಗಳ ಸರಿಯಾದ ಪರಿಶೀಲನೆ ಅತೀ ಅಗತ್ಯವಾಗಿದೆ. ಅತಿಯಾದ ಪ್ರಯಾಣ ಸಮಸ್ಯೆಯನ್ನು ತರಬಹುದು, ಅವಸರದ ತೀರ್ಮಾನ ಸಮಸ್ಯೆಗೆ ಕಾರಣವಾಗಲಿದೆ. ಉದ್ಯಮಿಗಳಿಗೆ ಒಳ್ಳೆಯ ಅವಕಾಶ ಲಭಿಸಲಿದೆ. ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ,
ವೃಶ್ಚಿಕ: ಲಾಭ ಕ್ಷೇತ್ರದಲ್ಲಿ ಇರುವ ಕುಜ ನಿಮ್ಮನ್ನು ಹೊಸ ಮನೆ ನಿರ್ಮಾಣ, ಭೂಮಿ ಖರೀಧಿ ಮಾಡಲು ಪ್ರೇರೇಪಣೆ ನೀಡಲಿದ್ದಾನೆ. ರಾಹು ಶನಿ ನೀಡಲಿರುವ ಸಣ್ಣ ಪುಟ್ಟ ತಡೆಗಳನ್ನು ನಿವಾರಣೆ ಮಾಡುತ್ತಾ ಮುಂದುವರಿದರೆ ನೀವು ಯಶಸ್ವಿಯಾಗುತೀರಿ, ಚಂದ್ರ ಗ್ರಹಣ ಕಾಲದಲ್ಲಿ ಕುಲ ದೇವರ ಜಪವನ್ನು ಮಾಡಲು ಮರೆಯದಿರಿ, ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ, ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಹಣ ಹೂಡಿಕೆ ಮಾಡುವಾಗ ಹಿರಿಯರ ಸಲಹೆ ಪಡೆಯಿರಿ,
ಧನು : ಸುಖ ಸ್ಥಾನದ ಶನಿ ತಿಳಿಸುವಂತೆ ಎಲ್ಲಿಯೂ ಅವಸರ ಬೇಡ. ಗಂಟು ನೋವು ಬರುವ ಸಾಧ್ಯತೆ ಇರುತ್ತದೆ, ಹಣದ ವಿಷಯದಲ್ಲಿ ಜವಾಬ್ದಾರಿಯಿಂದ ವರ್ತಿಸಿರಿ. ಇದು ದ್ವಿತೀಯಾದಲ್ಲಿರುವ ಮಾಂದಿಯ ಆದೇಶವಾಗಿರುತ್ತದೆ. ಸರಿಯಾದ ಸಮಯದೊಳಗೆ ಉತ್ತಮವಾದ ಅವಕಾಶಗಳು ನಿಮ್ಮೆದುರು ಬರಲಿದೆ. ನ್ಯಾಯವಾದ ರೀತಿಯಲ್ಲಿ ಇನ್ನೊಬ್ಬರ ಕಷ್ಟಗಳಿಗೆ ಸ್ಪಂಧಿಸಿರಿ, ಅಧಿಕ ಪ್ರಸಂಗ ಆಗಬಾರದು, ಅನ್ಯ ಮಹಿಳೆಯರಿಂದ ಅಂತರವನ್ನು ಕಾಯ್ದುಕೊಳ್ಳಿರಿ. ಮುಂಗೋಪ ಸದಾ ಇರುವುದು ಒಳ್ಳೆಯದಲ್ಲ,
ಮಕರ : ಗುರುವಿನ ಅನುಗ್ರಹದ ಕೊರತೆಯಲ್ಲಿ ಇರುವ ನೀವು ಹೊಸ ಉದ್ಯಮ ವೊಂದನ್ನು ಆರಂಭಿಸುವ ಯೋಚನೆಯಲ್ಲಿದ್ದೀರಿ, ಚಿನ್ನವನ್ನು ಅಡವಿಟ್ಟು ಸಾಲಮಾಡಿಕೊಂಡು ಮಾಡುವ ಕಸರತ್ತು ಮಾಡುವಿರಿ, ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವತ್ತ ಗಮನವಿರಲಿ, ಮದ್ಯ ಸೇವನೆಯಿಂದ ದೂರವಿರಿ, ಹೃದಯವನ್ನು ಪರೀಕ್ಷಿಸುವ ಕೆಲಸ ನಿಮಗೆ ಅಗತ್ಯವೆಂದು ಕಂಡರೆ ಮಾಡಿಸಿರಿ, ತಮ್ಮನ್ನು ಧಾರ್ಮಿಕ ವಿಚಾರದಲ್ಲಿ ತೊಡಗಿಸಿಕೊಳ್ಳಿರಿ.
ಕುಂಭ : ವೃತ್ತಿ-ವ್ಯವಹಾರ ಕ್ಷೇತ್ರದಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀವು ಎದುರಿಸಲೇ ಬೇಕಾಗಿದೆ. ನೀವು ಹೋದಲ್ಲಿ ಬಂದಲ್ಲಿ ಜಗಳ ಮಾಡುವ ಪ್ರವೃತ್ತಿ ಒಳ್ಳೆಯದಲ್ಲ ಹಿರಿಯರ ಸಲಹೆಗಳನ್ನು ಪಡೆದು ಗೊಂದಲಗಳಿಂದ ದೂರವಿದ್ದರೆ ಒಳ್ಳೆಯದು, ಹಿಂದೆ ನಡೆದುಹೋದ ಕಹಿ ಘಟನೆಗಳು ಮನಸ್ಸಿಂದ ಹೊರಗೆ ಹೋಗಲು ಕೇಳುತ್ತಿಲ್ಲ ಅದು ಮರುಕಳಿಸದ ಹಾಗೆ ನೀವು ನೋಡಿಕೊಳ್ಳುವುದು ಅಗತ್ಯವಿದೆ.
ಮೀನ : ಅನಿರೀಕ್ಷಿತ ವಿದ್ಯಮಾನಗಳು ಸಂಭವಿಸುವ ಕ್ಷಣಗಳು ಬರಲಿವೆ. ಮಕ್ಕಳ ಬಗ್ಗೆ ಜಾಗ್ರತೆ ಅತೀ ಅಗತ್ಯವಿದೆ. ಇತರರಿಂದ ಪ್ರೇರಣೆ ಪಡೆದು ಉತ್ತಮ ಕಾರ್ಯಗಳನ್ನು ಮಾಡಿರಿ. ಸುಳ್ಳು ವದಂತಿ ಹರಡುವ ಹಿತ ಶತ್ರುಗಳಿಂದ ಆದಷ್ಟು ದೂರವಿರುವುದು ಅತೀ ಒಳ್ಳೆಯದು, ಹಿರಿಯರ ಜೊತೆಗೆ ಕಲಹ ಬರುವ ಸಾಧ್ಯತೆಯನ್ನು ಶನಿ, ಕುಜ ತಿಳಿಸುತ್ತಿದ್ದಾರೆ. ಟೀಕೆ ಮಾಡುವುದು ಕೆಲವರ ಅಭ್ಯಾಸ. ಅದರಿಂದ ನೀವು ಧೈರ್ಯ ಕಳೆದುಕೊಳ್ಳಬೇಡಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು, ವಾಸ್ತು ಸಲಹೆ/ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.






































