ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಸಾಲ ವಸೂಲಾತಿ ಸಾಧನ ಪ್ರಶಸ್ತಿ

Picture of RB NEWS

RB NEWS

Bureau Report

ಮಂಗಳೂರು : 2024-25 ನೇ ಸಾಲಿನಲ್ಲಿ ಸಂಘದ ಸದಸ್ಯರಿಂದ ಬರತಕ್ಕ ಸಾಲವನ್ನು ಶೇ.100 ವಸೂಲಾತಿ ಮಾಡಿದ ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಸಾಲ ವಸೂಲಾತಿ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಎಮ್.ಎನ್ ರಾಜೇಂದ್ರ ಕುಮಾ‌ರ್ ಅವರು ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಾಪಾಲು ಜಯವರ್ಮ ಜೈನ್ ಹಾಗೂ ಮುಖ್ಯ ಕಾರ್ಯದರ್ಶಿ ಆದ ಆದರ್ಶ್ ಜೈನ್ ಇವರನ್ನು ಸಾಲ ವಸೂಲಾತಿ ಸಾಧನ ಪ್ರಶಸ್ತಿ ನೀಡಿ ಗೌರವಿಸಿದರು.

ಸಂಘವು ನಿರಂತರ 15 ವರ್ಷದಿಂದ ಸದಸ್ಯರಿಂದ ಬರತಕ್ಕ ಸಾಲವನ್ನು ಶೇ.100 ವಸೂಲಾತಿ ಮಾಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top