ವೇಶ್ಯಾವಾಟಿಕೆ ದಂಧೆ : ಆರೋಪಿಗಳಿಬ್ಬರ ಬಂಧನ
ಮೂಡುಬಿದಿರೆ: ಮೂಡಬಿದಿರೆಯ ಮಾರ್ಪಾಡಿ ಗ್ರಾಮದ ಆಳ್ವಾಸ್ ಆಸ್ಪತ್ರೆ ಕಡೆಗೆ ಹೋಗುವ ರಸ್ತೆಯಲ್ಲಿರುವ ಮಹಡಿ ಕಟ್ಟಡದ ರೂಂ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೇಂದ್ರಕ್ಕೆ ಪೊಲೀಸ್ ಇನ್ ಸೆಕ್ಟರ್ ಸಂದೇಶ್ ಪಿ.ಜಿ. ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಪೊಲೀಸ್ ಇನ್ ಸೆಕ್ಟರ್ ಸಂದೇಶ್ ಪಿ.ಜಿ
ಆಗಸ್ಟ್ 26ರ ರಾತ್ರಿ 8.00 ಗಂಟೆಗೆ ಈ ಕಾರ್ಯಚರಣೆ ನಡೆದಿದೆ.
ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ ಪೊಲೀಸರು ಪ್ರಕರಣದ ಆರೋಪಿಗಳಾದ ರಾಜೇಶ್ ಬೋವಿ (31 ವರ್ಷ) ತಂದೆ: ಶಿವಪ್ಪ, ವಾಸ: ಮನೆ ನಂಬರ್ 116 ಕಲ್ಯಂಕ, ಸ್ವರಾಜ್ ಮೈದಾನದ ಬಳಿ ಮಾರ್ಪಾಡಿ ಗ್ರಾಮ, ಮೂಡಬಿದ್ರೆ ತಾಲೂಕು ದ. ಕ ಜಿಲ್ಲೆ ಮತ್ತು ಬೆಳ್ತಂಗಡಿ ತಾಲೂಕು ನಾರಾವಿ ನಿವಾಸಿ ಭರತ್ ಜೈನ್(52) ರವರನ್ನು ಬಂಧಿಸಿದ್ದಾರೆ.
ಭರತ್ ಜೈನ್ ಸದ್ರಿ ಸಂತ್ರಸ್ತ ಮಹಿಳೆಯನ್ನು ಮುಂದಿಟ್ಟುಕೊಂಡು ಗ್ರಾಹಕರಿಗೆ ತೋರಿಸಿ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ತಿಳಿದು ಬಂದಿರುತ್ತದೆ.
ಆರೋಪಿ ಭರತ್ ಜೈನ್ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆ ಸಹಿತ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.



































