ಬಾರೋ ಗಣಪ! ಬಾರೋ ನಮ್ಮ ಮನೆಗೆ !
ಬಾರಯ್ಯ! ಬಾರೋ ಗಣಪ! ತೋರಯ್ಯ ನಿನ್ನ! ಲೀಲೆಯ ನಮಗೆ !! ಪಲ್ಲವಿ!!
ಭುಜಗ ಭೂಷಣನೆ! ತ್ರಿಜಗದೊಡೆಯನೆ! ಗಜಮುಖನೆ ನಿನ್ನ! ಪೂಜಿಪೆನು ನಾನೇ!
ಹರನ ತನಯನೆ! ಗಿರಿಜಾ ಸುತನೆ! ಮೊರೆಯ ಲಾಲಿಸು ನೀ! ವಿಘ್ನೇಶ್ವರನೆ !! ೧ !!
ತಾರೆಗಳೆಡೆಯಿಂದ! ಮೋಡದ ಮರೆಯಿಂದ! ಧರೆಗೆ ಇಳಿದು ಬಾರೋ! ಆಗಸದಿಂದ !
ಸುರನರ ಪೂಜಿತ! ಶುಕಮುನಿ ವಂದಿತ! ತವ ಶಿವ ಪಾರ್ವತಿ! ತನಯನೆ ಬಾರೋ !! ೨ !!
ಬಾದ್ರಪದ ಶುಕ್ಲದ! ಚೌತಿಯ ದಿನದಂದು! ಆದರದಿ ಕರೆವೆ! ಬಾರೋ ನಮ್ಮ ಮನೆಗೆ!
ಶ್ರೀಧರನೆ ನಮ್ಮ! ಪಡುತಿರುಪತೀಶನ ! ಪಾದ ಸೇವೆಯ ಮಾಡೋ! ಮಾತೆ ಲಕುಮಿಯೊಡನೆ !! ೩ !!
ಭಕ್ತಿಪೂರ್ವಕ ರಚನೆ
ಕಾಂತಾವರ ಶಿವಾನಂದ ಶೆಣೈ ಕಾರ್ಕಳ

























