ಹಿಂಗಾದ್ರೆ ಹೆಂಗೆ ಗಣಪ
ಗಣಪನೆ ನಿನಗೆ! ಹೇಗೆ ಒಲಿಸಲಿ!
ಹಣದುಬ್ಬರದ ಈ! ದಿನದಲ್ಲಿ!
ಮಣಮಣ ಮಂತ್ರವ! ಪಠಿಸುವೆನು ನಾನು!
ಗಣಪತಿಯೆ ನಿನ್ನ! ಭಕುತಿಯಲಿ!! ಪಲ್ಲವಿ !!
ಬಾರೊ ಬಾರೊ! ಬಾರೊ ಗಣಪ!
ತೋರೋ ನಿನ್ನ! ಲೀಲೆಯನು!! ಅ.ಪ !!
ಉಂಡೆ ಚಕ್ಕುಲಿ! ಕೋಡುಬಳೆ!
ತುಂಡು ಕಬ್ಬು ಮತ್ತು! ಮೋದಗ!
ಕಡಬು ಪಾಯಸದ! ಊಟವ ನೀಡಲು!
ಹಣದುಬ್ಬರವೆ ಬಾಧಕ!! ಬಾರೊ !!
ನಿತ್ಯ ವಸ್ತುಗಳು! ದುಸ್ತರವಾಗಿದೆ!
ಎತ್ತರಕ್ಕೇರಿದೆ! ಹೂವಿನ ಬೆಲೆ!
ಸತ್ಯದ ದಿನಗಳು! ಮಾಯವಾಗಿದೆ!
ಸತ್ತು ಹೋಗಿದೆ! ನ್ಯಾಯದ ನೆಲೆ!! ಬಾರೊ !!
ವಿಘ್ನೇಶ್ವರನೆ! ವಿಘ್ನ ನಾಶಕನೆ! ಬಂದ ವಿಘ್ನವನು! ಪರಿಹರಿಸುವೆಯಾ!
ಮಗ್ನತೆಯಿಂದಲಿ! ಸೇವೆಯ ನಡೆಸಲು!
ಶಕ್ತಿಯನು ನೀ! ಕರುಣಿಸುವೆಯಾ!! ಬಾರೊ !!
ಭಕ್ತಿಪೂರ್ವಕ ರಚನೆ
ಕಾಂತಾವರ ಶಿವಾನಂದ ಶೆಣೈ ಕಾರ್ಕಳ




































