ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವಕ್ಕೆ ಆ.26 ರಂದು ಹಸಿರು ಹೊರೆ ಕಾಣಿಕೆ

Picture of RB NEWS

RB NEWS

Bureau Report

ಮೂಡುಬಿದಿರೆ ಸಮಾಜ ಮಂದಿರ ಸಭಾದ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಆಶ್ರಯದಲ್ಲಿ ಆ. 27 ರಿಂದ 31ರ ವರೆಗೆ ಸಮಾಜ ಮಂದಿರದಲ್ಲಿ ನಡೆಯಲಿರುವ ಗಣೇಶೋತ್ಸವಕ್ಕೆ ಪ್ರಥಮ ಬಾರಿಗೆ ಎನ್ನುವಂತೆ ಹಸಿರು ಹೊರೆ ಕಾಣಿಕೆ ಒಪ್ಪಿಸುವ ಮೆರವಣಿಗೆಯನ್ನು ಹೊಂದಿಸಲಾಗಿದೆ.
ಮೂಡುಬಿದಿರೆಯ ಎಂ. ಸಿ. ಎಸ್. ಸೊಸೈಟಿ ಮುಂಭಾಗದಿಂದ ಹೊರಡಲಿರುವ ಮೆರವಣಿಗೆಯಲ್ಲಿ ದೇವರ ವಿಗ್ರಹದ ಬೆಳ್ಳಿಯ ರಥ ,ದೇವರ ಪ್ರಭಾವಳಿ ಎಲ್ಲವೂ ಒಳಗೊಂಡಿರುತ್ತದೆ. ಸೊಸೈಟಿಯ ವಿಶೇಷ ಸಿ. ಇ. ಒ. ಚಂದ್ರಶೇಖರ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂಬುದಾಗಿ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ ಎಂ ತಿಳಿಸಿದ್ದಾರೆ.

ಆಗಸ್ಟ್ 27ರಂದು ಬೆಳಿಗ್ಗೆ ಘಂಟೆ 9.30 ಕ್ಕೆ ಡಾ.ಎಂ. ಮೋಹನ ಆಳ್ವ ಅವರು ಗಣೇಶೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ವಿಶೇಷವಾಗಿ ಎಲ್ಲ ದಿನಗಳಲ್ಲಿ ಸಂಜೆ ಮೂಡುಗಣಪತಿ ಸೇವೆ,ರಂಗಪೂಜೆ, ಗುರುವಾರ ಮುಜಿ ಅಪಪ ಸೇವೆ ,ಶುಕ್ರವಾರ ಅಥರ್ವಶೀರ್ಷ ಗಣಯಾಗ, ಶನಿವಾರ ಮುಜಿ ಅಪ್ಪ ಸೇವೆ, ಸಂಜೆ ಘಂಟೆ 3.30 ಕ್ಕೆ ಧಾರ್ಮಿಕ ಸಭೆ,ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ, ರವಿವಾರ ಸಾಯಂ. ಘಂ.5.30ಕ್ಕೆ ರಂಗಪೂಜೆ ,6.30ಕ್ಕೆ ವಿಸರ್ಜನಾ ಪೂಜೆಯಾಗಿ ರಾತ್ರಿ 8ಕ್ಕೆ ಶೋಭಾಯಾತ್ರೆ ಹೊರಡಲಿದೆ ಎಂದು ನಾರಾಯಣ ಪಿ ಎಂ ವಿವರಿಸಿದರು.
ಬುಧವಾರ ಸಂಜೆ ಘಂ. 6ಕ್ಕೆ ಡಾ. ಜೀವನ್ ರಾಮ್ ಸುಳ್ಯ ಅವರು ಸಾಂಸ್ಕೃತಿಕ ಕಲಾಪ ಉದ್ಘಾಟಿಸಲಿರುವರು. ನಿತಿನ್ ಕುಮಾರ್ ನಿರ್ದೇಶನದಲ್ಲಿ ಚ್ವಿಸ್ಟರ್ ಡಾನ್ಸ್ ಅಕಾಡೆಮಿಯವರಿಂದ ನೃತ್ಯ ಕಾರ್ಯಕ್ರಮ.ಗುರುವಾರ ನೃತ್ಯ ಗಾನ ಹಾಸ್ಯ ಮಿಮಿಕ್ರಿ, ಗ್ರಿಟ್ಟರ್ ಆರ್ಟ್ ಸಹಿತ ಪವರ್ ಉತ್ಸವ. ಶುಕ್ರವಾರ ಆಳ್ವಾಸ್ ಧೀಂಕಿಟ ತಂಡದವರಿಂದ ಯಕ್ಷಗಾನ “ನಾಗ ನಂದಿನಿ”. ಶನಿವಾರ ಶ್ರೀಷಾ ಪ್ರಭು ಸ್ಯಾಕ್ಸೋಫೋನ್ ವಾದನ, ಪಿಂಗಾರ ಕಲಾವಿದೆರ್ ಬೆದ್ರ ಅವರಿಂದ ಮಣಿ ಕೋಟೆಬಾಗಿಲು ನಿರ್ದೇಶನದ ನಾಟಕ “ಓಂಕಾರ” ಪ್ರದರ್ಶನವಿದೆ ಎಂದು ಅವರು ವಿವರಿಸಿದರು.
ಉಪಾಧ್ಯಕ್ಷ ಕೊರಗ ಶೆಟ್ಟಿ,ಕೋಶಾಧಿಕಾರಿ ಚೇತನ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಆ. 31ರಂದು ರಾತ್ರಿ 8ಕ್ಕೆ ಶೋrಭಾಯಾತ್ರೆ ಹೊರಡಲಿದ್ದು ಟ್ಯಾಬ್ಲೋಗಳು,ಇತರ ತಂಡಗಳು ನಿಗದಿತ ಸ್ಥಳದಲ್ಲಿ ಮಾತ್ರವಷ್ಟೆ ನಿಯಮಿತ ಸಮಯದಷ್ಟು ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿದೆ. ನಿಗದಿತ ಒಟ್ಟು ಮೂರು ತಾಸುಗಳ ಶೋಭಾಯಾತ್ರೆಯು ಯಾವುದೇ ಕಾರಣಕ್ಕೂ ಸಮಯವನ್ನು ಮೀರದೆ ಆಲಂಗಾರು ದೇವಸ್ಥಾನದ ಗಂಗೋತ್ರಿ ಕೆರೆಯಲ್ಲಿ ವಿಗ್ರಹ ವಿಸರ್ಜನೆಯನ್ನು ಮಾಡಿ ಮಕ್ತಾಯಗೊಳಿಸಲಾಗುವುದು. ಎಲ್ಲ ರೀತಿಯಲ್ಲೂ ಶಿಸ್ತು ಮೂಡಿಬರುವಂತೆ ಪೊಲೀಸರ ಜೊತೆಗೆ ಸ್ವಯಂಸೇವಕರೂ ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟಿನ ಉಪಾಧ್ಯಕ್ಷ ರಾಜಾರಾಮ್ ನಾಗರಕಟ್ಟೆ ಅವರು ತಿಳಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top