ಸಾಧನೆಯ ಹಾದಿಯಲ್ಲಿ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿ.
ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘವು 68 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 69ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಮೂಡುಬಿದಿರೆ ತಾಲೂಕಿನ ಬೆಳುವಾಯಿ, ಪಡುಮಾರ್ನಾಡು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ ಮತ್ತು ದರೆಗುಡ್ಡೆ ಗ್ರಾಮಗಳಿಗೆ ಸೀಮಿತವಾಗಿರುತ್ತದೆ.

ಕೇಂದ್ರ ಕಛೇರಿ ಹಾಗೂ ಶಾಖೆಗಳು:-
ಸಂಘವು ಕೇಂದ್ರ ಕಛೇರಿಯೊಂದಿಗೆ 5 ಶಾಖೆಗಳನ್ನು ಹೊಂದಿದ್ದು ಎಲ್ಲಾ ರೀತಿಯ ಬ್ಯಾಂಕಿoಗ್ ವ್ಯವಹಾರ, ರೈತರಿಗೆ ಬೇಕಾಗುವ ಕೃಷಿ ಸವಲತ್ತು ಹಾಗೂ ರೇಶನ್, ರಾಸಾಯನಿಕ ಗೊಬ್ಬರಗಳನ್ನು ಮಿತದರದಲ್ಲಿ ಒದಗಿಸಲಾಗುತ್ತಿದೆ.
ಶಾಖೆಗಳ ಸುಭದ್ರತೆಗಾಗಿ ಎಲ್ಲಾ ಶಾಖೆಗಳಿಗೆ ಭದ್ರತಾ ಕೊಠಡಿ, ಸಿ,ಸಿ.ಕ್ಯಾಮರಾ, ಅಲರಾಂ ಸಿಸ್ಟಮ್ ಅಳವಡಿಸಲಾಗಿದೆ.



ಸದಸ್ಯರು ಮತ್ತು ಪಾಲು ಬಂಡವಾಳ:
ದಿನಾಂಕ 31-03-2024ರ ಅಂತ್ಯಕ್ಕೆ ಇದ್ದಂತೆ ಒಟ್ಟು 7,275 ಮಂದಿ ಅ ತರಗತಿಯ ಸದಸ್ಯರಿದ್ದು,
8,150 ಮಂದಿ ಕ ತರಗತಿಯ ಸದಸ್ಯರಿರುತ್ತಾರೆ.
ಸದಸ್ಯರ ಒಟ್ಟು ಪಾಲು ಬಂಡವಾಳ ರೂ. 1,85,37,480.00 ಇರುವುದು. ಕಳೆದ ಸಾಲಿಗಿಂತ ರೂ. 15,36,625.00 ಪಾಲುಬಂಡವಾಳ ವೃದ್ಧಿಯಾಗಿದೆ. ಈ ಪೈಕಿ ರಾಜ್ಯ ಸರ್ಕಾರದ ಯಾವುದೇ ಪಾಲು ಬಂಡವಾಳವಿರುವುದಿಲ್ಲ.
ದುಡಿಯುವ ಬಂಡವಾಳ:
2023-2024ನೇ ಸಾಲಿಗೆ ಸಂಘದ ಒಟ್ಟು ದುಡಿಯುವ ಬಂಡವಾಳ ರೂ.123 ಕೋಟಿ ಆಗಿರುತ್ತದೆ.
ಕ್ಷೇಮ ನಿಧಿ ಮತ್ತು ಇತರ ನಿಧಿಗಳು:
ಪ್ರಕೃತ ಸಂಘದಲ್ಲಿರೂಪಾ¬ 17,98,61,858.37 ವಿವಿಧ ನಿಧಿಗಳು ಇರುವುದು, ಕಳೆದ ಸಾಲಿಗಿಂತ ರೂ 2,22,74,641.11 ಸಂಘದ ನಿಧಿಯು ವೃದ್ಧಿಯಾಗಿರುತ್ತದೆ.
ವಿವರ ಈ ಕೆಳಗಿನಂತಿವೆ.
ಕ್ರ. ಸಂ ವಿವರಗಳು ಅಂತಿಮ ಶಿಲ್ಕು
1 ಕ್ಷೇಮ ನಿಧಿ 7,56,45,360.45
2 ಕಟ್ಟಡ ನಿಧಿ 3,96,35,527.97
3 ವ್ಯಾಪಾರ ಏರಿಳಿತ ನಿಧಿ 48,07,189.90
4 ವ್ಯಾಪಾರ ನಷ್ಟ ಪರಿಹಾರ ನಿಧಿ 60,79,652.42
5 ಕೆಟ್ಟ ಸಾಲದ ಮೀಸಲು ನಿಧಿ 46,48,028.04
6 ಸಾರ್ವಜನಿಕ ಉಪಕಾರ ನಿಧಿ 63,13,145.62
7 ಲಾಭಾಂಶ ಸಮೀಕರಣ ನಿಧಿ 35,34,818.85
8 ಸಿಬ್ಬoದಿ ಸಹಾಯಕ ನಿಧಿ 60,17,608.38
9 ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ 1,80,41,525.6410 10 10 ಸವಕಳಿ ನಿಧಿಗಳು 1,51,39,001.10
ಒಟ್ಟು ರೂಪಾಯಿ 17,98,61,858.37
ಕ್ಷೇಮನಿಧಿಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ವಿನಿಯೋಗಿಸಿದೆ.
ಠೇವಣಿಗಳು
ಪ್ರಕೃತ ಸಂಘವು ಒಟ್ಟು ರೂ 97,73,07,220.94 ವಿವಿಧ ಠೇವಣಿಗಳನ್ನು ಹೊಂದಿರುತ್ತದೆ.
ಠೇವಣಿಗಳ ವಿವರ ಈ ಕೆಳಗಿನಂತಿವೆ.
ಕ್ರ. ಸಂ ವಿವರಗಳು ಅಂತಿಮ ಶಿಲ್ಕು
1 ಉಳಿತಾಯ. 11,17,03,671.74
2 ಭಾಗ್ಯನಿಧಿ 3,63,00,138.00
3 ಕಾಲ್ ಠೇವಣಿ 26,38,313.00
4 ನಿರಖು ಠೇವಣಿ 9,53,13,692.00
5 ಮಾಸಿಕ ಠೇವಣಿ 26,34,144.00
6 ವೃದ್ಧಿ ನಗದು ಪತ್ರ 70,77,99,204.20
7 ಸಿಬ್ಬoದಿ ಠೇವಣಿ 2,09,18,058.00
ಒಟ್ಟು ರೂಪಾಯಿ 97,73,07,220.94
ಕಳೆದ ಸಾಲಿಗೆ ಹೋಲಿಸಿದಾಗ ರೂ.7,33,32,068.93 ಠೇವಣಿ ಹೆಚ್ಚಳವಾಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ.
2023-2024ನೇ ಸಾಲಿನಲ್ಲಿ ಠೇವಣಿಯು ಶೇಕಡ 8.11ರಷ್ಟು ಹೆಚ್ಚುವರಿ ಸಂಗ್ರಹವಾಗಿದೆ ಸಂಘದ ಮೇಲೆ ವಿಶ್ವಾಸವಿರಿಸಿದ ಎಲ್ಲಾ ಠೇವಣಿದಾರ ಸದಸ್ಯರಿಗೆ ಆಡಳಿತ ಮಂಡಳಿಯು ವಿಶೇಷವಾಗಿ ಕೃತಜ್ಞತೆಯನ್ನು ಅರ್ಪಿಸುತ್ತದೆ.
ಬ್ಯಾಂಕಿನಲ್ಲಿರುವ ಶಿಲ್ಕು:
ದಿನಾಂಕ 31-03-2024ಕ್ಕೆ ಇದ್ದಂತೆ ನಮ್ಮ ಸಂಘವು ವಿವಿಧ ಬ್ಯಾಂಕ್ಗಳ ಚಾಲ್ತಿ/ಉಳಿತಾಯ ಖಾತೆಗಳಲ್ಲಿಒಟ್ಟು ರೂ. 95,91,118.37 ಶಿಲ್ಕನ್ನು ಹೊಂದಿರುತ್ತದೆ.
ಸoಘದ ವಿನಿಯೋಗಗಳು:-
ಪ್ರಕೃತ ಸಂಘವು ವಿವಿಧ ಬ್ಯಾಂಕ್ಗಳಲ್ಲಿರೂ. 24,66,69,479.21ನ್ನು ನಿರಖು ಠೇವಣಿಯಲ್ಲಿ ತೊಡಗಿಸಿದೆ.
ಅಲ್ಲದೆ ರೂ. 5,41,39,000.00 ವಿವಿಧ ಸಹಕಾರಿ ಸಂಸ್ಥೆಗಳ ಪಾಲು ಬಂಡವಾಳದಲ್ಲಿ ವಿನಿಯೋಗಿಸಿದೆ.
ಜಿಲ್ಲಾ ಕೇ0ದ್ರ ಸಹಕಾರಿ ಬ್ಯಾಂಕಿನ ಸಾಲಗಳು:
ಸದಸ್ಯರ ಸಾಲದ ಅವಶ್ಯಕತೆಗಳನ್ನು ಪೂರೈಸಲು ಅಗತ್ಯವಾದ ಹಣವನ್ನು ದ.ಕ.ಜಿಲ್ಲಾಕೇಂದ್ರ ಸಹಕಾರಿ ಬ್ಯಾ0ಕಿನಿಂದ ಉಚಾಪತಿ ಸಾಲದ ಮುಖಾಂತರ ಪಡೆದುಕೊಂಡಿರುತ್ತೇವೆ.
ವರ್ಷಾಂತ್ಯಕ್ಕೆ ಸಂಘವು ಪಡೆದ ಸಾಲದ ಪೈಕಿ ಉಚಾಪತಿ ಸಾಲದಲ್ಲಿ ಬಾಕಿ ರೂಪಾಯಿ 2,00,00,000/-
ಮತ್ತು ಠೇವಣಿ ಸಾಲದಲ್ಲಿ ಬಾಕಿ ರೂಪಾಯಿ 3,00,00,000/-
ಹಾಗೂ ಕೇಂದ್ರ ಕಛೇರಿ, ಬೆಳುವಾಯಿಲ್ಲಿ ಗೋದಾಮು ಕಟ್ಟಡ ನಿರ್ಮಾಣದ ಬಹುಉಪಯೋಗಕೇಂದ್ರ ನಬಾರ್ಡ್ ಸಾಲ ರೂಪಾಯಿ 87,00,000/-ಇರುತ್ತದೆ.
ಸದಸ್ಯರ ಸಾಲಗಳು:
ಸಂಘದ ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ನೀಡಿದ ಸಾಲಗಳು 31-03-2023ರ ಅಂತ್ಯಕ್ಕೆ ರೂಪಾಯಿ 91,98,27,793.90 ಹೊರ ಬಾಕಿಯಿರುವುದು.
ಈ ಸಾಧನೆಗೆ ಸಹಕರಿಸಿ ಹಾಗೂ ಸಕಾಲದಲ್ಲಿ ಸಾಲದ ಕಂತನ್ನು ಮರುಪಾವತಿಸಿದ ನಮ್ಮ ಎಲ್ಲಾ ಸಾಲಗಾರ ಸದಸ್ಯರಿಗೆ ಕೃತಜ್ಞತೆಯನ್ನು ಆಡಳಿತ ಮಂಡಳಿಯವರು ಸಲ್ಲಿಸುತ್ತಾರೆ.
ಸಂಘದಲ್ಲಿ ಸದಸ್ಯರು ಪಡೆದ ಸಾಲವು 2023-2024ನೇ ಸಾಲಿನಲ್ಲಿಶೇ 11.54ರಷ್ಟು ವೃದ್ಧಿಯಾಗಿರುತ್ತದೆ.
ಸಾಲದ ಕಂತನ್ನು ವಾಯಿದೆಯೊಳಗೆ ಮರುಪಾವತಿಸಿದಲ್ಲಿಶೇ.1ಬಡ್ಡಿ ರಿಯಾಯಿತಿಯನ್ನು ಜಾರಿಗೊಳಿಸಿದೆ.
ಸರಕಾರದ ಆದೇಶದಂತೆ ಅಲ್ಪಾವಧಿ ಕೃಷಿಸಾಲ, ಅಲ್ಪಾವಧಿ ಹೈನುಗಾರಿಕೆಗೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ
ಹಾಗೂ ಮಧ್ಯಮಾವಧಿ ಕೃಷಿಸಾಲಕ್ಕೆ ಶೇ.3ರ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ.
ಸ್ವಸಹಾಯ ಸಂಘಗಳು:
ಸಂಘದಲ್ಲಿ ಒಟ್ಟು232 ಸ್ವಸಹಾಯ ಗುಂಪುಗಳು ಇದ್ದು,
ಇದರಲ್ಲಿ 158 ನವೋದಯ ಸ್ವಸಹಾಯ ಗುಂಪುಗಳಿರುತ್ತವೆ.
74 ನವೋದಯ ಸ್ವಸಹಾಯ ಗುಂಪುಗಳಿಗೆ ಸಂಘದಿoದ ಸಾಲ ನೀಡಿದ್ದು ವರ್ಷಾಂತ್ಯಕ್ಕೆ ರೂ. 91,18,196.00 ಹೊರಬಾಕಿ ಸಾಲ ಇರುತ್ತದೆ.
ವ್ಯಾಪಾರ ವಹಿವಾಟು:
2022-23ನೇ ಸಾಲಿನಲ್ಲಿ ಸಂಘವು ರಾಸಾಯನಿಕ ಗೊಬ್ಬರ ಕ್ರಿಮಿನಾಶಕ, ಕೃಷಿ ಉಪಕರಣಗಳು, ಪಡಿತರ ಸಾಮಾಗ್ರಿಗಳ ವಿತರಣೆ ನಡೆಸಿದ್ದು ಒಟ್ಟು ರೂಪಾಯಿ 7,62,495.14 ಆರಂಭದ ಸರಕು ದಾಸ್ತಾನು ಇದ್ದು.
ರೂಪಾಯಿ 56,06,769.20 ಬೆಲೆಯ ಮಾಲು ಖರೀದಿಸಿ
ರೂ. 57,93,320.48 ಮಾಲು ಮಾರಾಟವನ್ನು ಮಾಡಿ ಹಾಗೂ ವರದಿ ಸಾಲಿನ ಅಂತ್ಯಕ್ಕೆ ಒಟ್ಟು ರೂಪಾಯಿ 14,14,487.41 ಅಂತಿಮವಾಗಿ ಸರಕು ದಾಸ್ತಾನು ಹೊಂದಿದ್ದು ವ್ಯಾಪಾರ ವೆಚ್ಚ ಕಳೆದ ರೂಪಾಯಿ 6,52,850.00 ವ್ಯಾಪಾರದಿಂದ ಲಾಭಗಳಿಸಿರುತ್ತದೆ.
ಬೆಳುವಾಯಿ, ಮೂಡುಮಾರ್ನಾಡು ಹಾಗೂ ಕೆಲ್ಲಪುತ್ತಿಗೆ ಗ್ರಾಮದ ಒಟ್ಟು 3,651 ಪಡಿತರ ಚೀಟಿದಾರರಿಗೆ POS ಯಂತ್ರದ ಬಿಲ್ಲಿಂಗ್ ವ್ಯವಸ್ಥೆಯ ಮೂಲಕ ಸಮಯದಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ.
ಲಾಭ ನಷ್ಟ ತ:ಖ್ತೆ:
2023-2024ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಸರಕಾರದ ಆದೇಶದ ಪ್ರಕಾರ ಸನದು ಲೆಕ್ಕ ಪರಿಶೋಧಕರಾದ ಸಿಎ ಬಿ ಸುದೇಶ್ಕುಮಾರ್ ರೈ ಸನ್ನದು ಲೆಕ್ಕಪರಿಶೋಧಕರು,2ನೇ ಮಹಡಿ, ಎಂಪೈರ್ ಮಾಲ್, ಎಂ.ಜಿ.ರೋಡ್, ಮಂಗಳೂರು-ಇವರು ನಡೆಸಿ ಕೊಟ್ಟಿರುತ್ತಾರೆ.
2023-2024ನೇ ಸಾಲಿನಲ್ಲಿ ಸಂಘವು 445 ಕೋಟಿ ವ್ಯವಹಾರವನ್ನು ನಡೆಸಿ
ರೂ. 3,23,91,756.24 ನಿವ್ವಳ ಲಾಭ ಗಳಿಸಿರುತ್ತದೆ.
ಈ ನಿವ್ವಳ ಲಾಭವನ್ನು ಸಹಕಾರಿ ಕಾಯ್ದೆಯಂತೆ ಹಂಚಲು ಈ ಮಹಾಸಭೆಯ ಮುಂದೆ ಇಡಲಾಗಿದೆ
ಸದಸ್ಯರಿಗೆ ಪಾಲು ಬಂಡವಾಳದ ಮೇಲೆ ಶೇ.25% ಪಾಲು ಮುನಾಫೆ ನೀಡಲು ಸಂಘದ ಆಡಳಿತ ಮಂಡಳಿಯಿAದ ಶಿಫಾರಸ್ಸುಗೊಂಡಿರುತ್ತದೆ, 2018-19ರಿಂದ ಸತತವಾಗಿ ಸದಸ್ಯರಿಗೆ ಪಾಲು ಬಂಡವಾಳದ ಮೇಲೆ ಶೇ.25% ಪಾಲು ಮುನಾಫೆಯನ್ನು ನೀಡುತ್ತಾ ಬಂದಿರುವುದು ಸಂಘದ ನೈಜ ಸ್ಥಿತಿಯನ್ನು ಸಾರಿ ಹೇಳುತ್ತಿದೆ.
2009-2010ನೇ ಸಾಲಿನಿಂದ ಸಂಘವು ಸತತವಾಗಿ ‘ಎ’ ದರ್ಜೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲು ಆಡಳಿತ ಮಂಡಳಿಯು ಸಂತೋಷಪಡುತ್ತದೆ.
ಸoಘದೊoದಿಗೆ ನಿಕಟಸಂಪರ್ಕವನ್ನಿರಿಸಿ ಸಂಘದ ದೈನಂದಿನ ವ್ಯವಹಾರದಲ್ಲಿ ಪಾಲ್ಗೊಂಡು ಸಂಘದ ಪ್ರಗತಿಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಆಡಳಿತ ಮಂಡಳಿ ಸಭೆ:
2022-2023ನೇ ಸಾಲಿನಲ್ಲಿ ಒಟ್ಟು 12 ಆಡಳಿತ ಮಂಡಳಿಯ ಸಭೆಗಳು ಜರಗಿದ್ದು ಆಡಳಿತ ಮಂಡಳಿಯವರು ಸಂಘದ ಅಭಿವೃದ್ಧಿಗೆ ಉತ್ತಮ ಮಾರ್ಗದರ್ಶನ ನೀಡಿರುತ್ತಾರೆ.
ದಿನಾಂಕ 17-01-2020ರಿಂದ ಅಧ್ಯಕ್ಷರಾಗಿ ಶ್ರೀ ಭಾಸ್ಕರ ಎಸ್.ಕೋಟ್ಯಾನ್ ಸೇವೆ ಸಲ್ಲಿಸುತ್ತಿದ್ದಾರೆ.
ಪರಿವೀಕ್ಷಣೆ:
ಕೃಷಿ ಪತ್ತಿನ ಸಹಕಾರ ಸಂಘಗಳ ಲೆಕ್ಕಪರಿಶೋಧನ ವರದಿಯ ಮಾರ್ಗಸೂಚಿಯ ಸಂಖ್ಯೆ 9 ರಲ್ಲಿ ತಿಳಿಸಿದಂತೆ ಎಲ್ಲಾ ಶಾಖೆಗಳಲ್ಲಿ ಆಂತರಿಕ ಲೆಕ್ಕಪರಿಶೋಧನೆಯನ್ನು ನಡೆಸಿರುತ್ತದೆ, ಸಂಘದಲ್ಲಿ ಅಡವಿಟ್ಟಿರುವ ಚಿನ್ನಾಭರಣ ಸಾಲಗಳ ಚಿನ್ನಾಭರಣಗಳನ್ನು ಸಂಘದ ನಿಯಮಕ್ಕನುಗುಣವಾಗಿ ಹೊರಗಿನ ಮೌಲ್ಯಮಾಪಕರಿಂದ ಪರಿವೀಕ್ಷಣೆ ಮಾಡಲಾಗಿದೆ.
ಸಿಬ್ಬಂದಿ ವರ್ಗ:
ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಾ ಒಟ್ಟು 18 ಮಂದಿ ಖಾಯಂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ,.ತರಬೇತಿಯ ಬಗ್ಗೆ ಅಟೋಮೇಶನ್ ಕ್ಲೌಡ್ ಸೊಲ್ಯೂಷನ್ಸ್ ಲಿ. ಮಂಗಳೂರು ಇವರಿಂದ ಆಗಿಂದಾಗೆ ಸಂಘದ ಸಾಫ್ಟ್ವೇರ್ ಸ್ಮಾರ್ಟ್ ಓಗಲ್ ಬಗ್ಗೆ ತರಬೇತಿ ಹಾಗೂ ಪ್ರತಿ ತಿಂಗಳ ಸಭೆಯಲ್ಲಿ ಸಾಲ ವಸೂಲಾತಿಯ ಪ್ರಮಾಣ ಹಾಗೂ ಠೇವಣಿಗಳ ಗುರಿ ಗೊತ್ತು ಪಡಿಸುವುದು.
ಸರ್ವ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯು ಸಂಘದ ಪ್ರಗತಿಗೆ ಸಹಕಾರಿಯಾಗಿದೆ.
ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ

2022-2023ನೇ ಸಾಲಿನಲ್ಲಿ ಸಂಘವು ಮಾಡಿದ ಸಾಧನೆಗೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡುವ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಪರಿಗಣಿಸಿ 7 ಬಾರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಹಾಗೂ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘವೆoದು ಗುರುತಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದೆ.
ಬೆಳೆ ವಿಮೆ:-
2023-2024ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭಿಮಾ ಬೆಳೆ ವಿಮಾ ಯೋಜನೆಯಡಿಯಲ್ಲಿ 121 ಮಂದಿ ಸದಸ್ಯರನ್ನು ನೋಂದಾಯಿಸಿ ರೂ. 4,28,247/- ವಿಮಾ ಮೊಬಲಗನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೂಲಕ ವಿಮಾ ಕಂಪೆನಿಗೆ ಪಾವತಿಸಲಾಗಿದೆ.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು 2024ನೇ ಸಾಲಿನ ಜೂನ್ ತಿಂಗಳ ನಂತರ ಆಗಸ್ಟ್ ತಿಂಗಳ ಒಳಗೆ ಮುಂಗಾರು ಹಂಗಾಮಿಗೆ ಅನ್ವಯಿಸಿ ಅಡಿಕೆ 1 ಎಕ್ರಗೆ ವಿಮಾ ಕಂತು 2590/- ಬೆಳೆ ಹಾನಿಯ ಪ್ರಮಾಣದ ಮೇಲೆ ಗರಿಷ್ಟ ಪರಿಹಾರದ ಮೊತ್ತ 51,800/- ಮತ್ತು ಕರಿಮೆಣಸು 1 ಎಕ್ರಗೆ ವಿಮಾ ಕಂತು 951/- ಬೆಳೆ ಹಾನಿಯ ಪ್ರಮಾಣದ ಮೇಲೆ ಗರಿಷ್ಟ ಪರಿಹಾರ ಮೊತ್ತ 19021/-
ಸೇವಾ ಸೌಲಭ್ಯ:-
ಕರ್ನಾಟಕ ಸರಕಾರದ ಯಶಸ್ವಿನಿ ರೈತರ ಆರೋಗ್ಯ ವಿಮಾ ಯೋಜನೆಯಲ್ಲಿ ಸುಮಾರು 652 ಕುಟುಂದದ ಸದಸ್ಯರು ಒಟ್ಟು 2482 ಮಂದಿ ಹೆಸರು ನೋಂದಾಯಿಸಿದ್ದು ಈ ಪೈಕಿ ಸುಮಾರು 27 ಕ್ಕೂ ಹೆಚ್ಚು ಮಂದಿ ಸದಸ್ಯರು ಈ ಯೋಜನೆಯಡಿಯಲ್ಲಿ ಬೇರೆ ಬೇರೆ ರೀತಿಯ ಶಸ್ತ್ರ ಚಿಕಿತ್ಸೆಯ ಪ್ರಯೋಜನವನ್ನು ಪಡೆದಿರುತ್ತಾರೆ.
ಯಶಸ್ವಿನಿ ರೈತರ ಆರೋಗ್ಯ ವಿಮಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 162 ಕುಟುಂದ ಸದಸ್ಯರ ಒಟ್ಟು 645 ಮಂದಿಯ ಹೆಸರು ಉಚಿತವಾಗಿ ನೋಂದಾಯಿಸಿದೆ.

ಇತರ ಸೇವಾ ಸೌಲಭ್ಯಗಳು:
ಸಂಘದ ಸದಸ್ಯರ ಹಾಗೂ ಗ್ರಾಹಕರ ಅನುಕೂಲತೆಗಾಗಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯವನ್ನು ಮಿತದರದ ಬಾಡಿಗೆಯಲ್ಲಿ ಒದಗಿಸಲಾಗುತ್ತಿದೆ.
ಸದಸ್ಯರ ಅನುಕೂಲಕ್ಕಾಗಿ ಶೀಘ್ರ ಹಣ ವರ್ಗಾವಣೆಗೆ Neft/Rtgs ಸೇವಾ ಸೌಲಭ್ಯ,
ಪಾನ್ ಕಾರ್ಡ್ ಸೌಲಭ್ಯ, ಝೆರೆಕ್ಸ್ ಇತ್ಯಾದಿ ಸೇವಾ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಮಳೆಕೊಯ್ಲು ಯೋಜನೆಯಡಿ 15 ಮಂದಿ ಸದಸ್ಯರು ಸೌಲಭ್ಯವನ್ನು ಪಡೆದಿರುತ್ತಾರೆ.
ಕೃಷಿ ಸಾಲ ಪಡೆದುಕೊಂಡಿರುವ ಸದಸ್ಯರಿಗೆ ರೂಪಾಯಿ 50,000/-ಗಳ ವೈಯಕ್ತಿಕ ಅಪಘಾತ ವಿಮಾ ಯೋಜನೆ ಯನ್ನು ನ್ಯಾಶನಲ್ ಇನ್ಶೂರೆನ್ಸ್ ಕಂಪೆನಿಯ ಸಹಯೋಗ ದೊಂದಿಗೆ ಮಾಡಲಾಗಿದೆ.
ಕೃಷಿಸಾಲ ಪಡೆದ ಸದಸ್ಯರು ಸಾಲ ಮರುಪಾವತಿ ಮಾಡುವ ಮೊದಲೇ ಮೃತಪಟ್ಟಲ್ಲಿ ಸಂಘದ ಕ್ಷೇಮಾಭಿವೃದ್ಧಿ ನಿಧಿಯಿಂದ ರೂ.10,000/-ನೀಡುವ ಯೋಜನೆಯನ್ನು ಜಾರಿಗೊಳಿಸಿದೆ. (4 ಮಂದಿ ಸದಸ್ಯರು ಇದರ ಪ್ರಯೋಜನವನ್ನು ಪಡೆದಿರುತ್ತಾರೆ)
ರೈತ ಸದಸ್ಯರಿಗೆ ಒಂದು ತಿಂಗಳ ಅವಧಿಗೆ ಬಡ್ಡಿ ರಹಿತ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಸಾಲದ ನೆಲೆಯಲ್ಲಿ ನೀಡಲಾಗುತ್ತಿದೆ.ಒಟ್ಟು 68 ಮಂದಿ ಸದಸ್ಯರು ಇದರ ಪ್ರಯೋಜನವನ್ನು ಪಡೆದಿರುತ್ತಾರೆ.
ರಸಗೊಬ್ಬರ ಹಾಗೂ ಇತರ ಸರಕು ಸಾಗಾಟಕ್ಕಾಗಿ ಕಡಿಮೆ ಬಾಡಿಗೆ ದರದಲ್ಲಿ ಸಂಘದ ಟಾಟಾ ಯೋಧ ವಾಹನವು ಲಭ್ಯವಿದ್ದು ಅಫಘಾತ ಹಾಗೂ ಶವ ಸಾಗಾಟಕ್ಕೂ ಸದಸ್ಯರು ಇದರ ಉಪಯೋಗವನ್ನು ಪಡೆಯಬಹುದಾಗಿದೆ. 2023-2024ನೇ ಸಾಲಿನಲ್ಲಿ ಒಟ್ಟು 129 ಮಂದಿ ಸದಸ್ಯರು ಇದರ ಪ್ರಯೋಜನವನ್ನು ಪಡೆದಿರುತ್ತಾರೆ.ಹಾಗೂ ರಸಗೊಬ್ಬರಗಳನ್ನು ಸಂಘದ ಶಾಖೆಗಳಿಗೆ ಸಾಗಾಟ ಮಾಡಲು ಈ ವಾಹನ ಅನುಕೂಲಕರವಾಗಿದೆ.
ಕ್ಯಾನ್ಸರ್, ಹೃದ್ರೋಗ, ಮೆದುಳಿನ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸದಸ್ಯರಿಗೆ ಈ ಬಗ್ಗೆ ಚಿಕಿತ್ಸೆಗಾಗಿ ಸಂಘದ ಸದಸ್ಯರ ಕ್ಷೇಮ ನಿಧಿಯಿಂದ ಆರ್ಥಿಕ ನೆರವನ್ನು ನೀಡಲಾಗುತ್ತದೆ. ವರದಿ ಸಾಲಿನಲ್ಲಿ ಒಟ್ಟು 24 ಸದಸ್ಯರಿಗೆ ಒಟ್ಟು ರೂಪಾಯಿ 4,20,000/-ಸದಸ್ಯರಿಗೆ ಆರ್ಥಿಕ ನೆರವನ್ನು ನೀಡಲಾಗಿದೆ.
ಸಂಘದ ಕೇಂದ್ರ ಕಛೇರಿ ಹಾಗೂ ಐದು ಶಾಖೆಗಳಲ್ಲಿ ನೂತನ ಸಾಪ್ಟ್ವೇರ್ ‘ಸ್ಮಾರ್ಟ್ ಬ್ಯಾಂಕ್’ ಅಳವಡಿಸಿ ಗಣಕೀಕೃತ ಪಾಸ್ ಪುಸ್ತಕ ಮತ್ತು 100% ಗಣಕೀಕರಣ ಮಾಡಲಾಗಿದೆ.
ಸದಸ್ಯರ ಖಾತೆಗಳ ವಿವರಗಳನ್ನು ಮೊಬೈಲ್ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಆನ್ಲೈನ್ ಪಾವತಿಗೆ ಸಂಘದ ಬ್ಯಾಂಕ್ ಖಾತೆಗಳ ಬಗ್ಗೆ ಯುಪಿಐ ಪಾವತಿ ಸೌಲಭ್ಯವನ್ನು ಅನುಷ್ಟಾನಿಸಲಾಗಿದೆ.
ಉತ್ತಮ ರೈತರ ಸನ್ಮಾನ:-
ಕಳೆದ 16-09-2023ರಂದು ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಈ ಸಂಘದ ಕಾರ್ಯವ್ಯಾಪ್ತಿಯಲ್ಲಿನ 5 ಗ್ರಾಮಗಳಿಂದ 10 ಮಂದಿ ಉತ್ತಮ ರೈತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
1) ಪ್ರಭಾಕರ ಶೆಟ್ಟಿ- ಹೆನಬೆಟ್ಟು, ಬೆಳುವಾಯಿ
2) ಸದಾನಂದ ನಾಯ್ಕ- ಕುಕ್ಕುಡೇಲು, ಬೆಳುವಾಯಿ
3) ಮೊಹಮ್ಮದ್ ಹಾರೀಸ್- ಅಮನೊಟ್ಟು, ಪಡುಮಾರ್ನಾಡು
4) ಪಣಿರಾಜ್ ಜೈನ್- ಹಳೆಮನೆ, ಪಡುಮಾರ್ನಾಡು
5) ಚಂಪ ಕೆ ಪೂಜಾರಿ- ಬ್ರಹ್ಮಂದಡ್ಡ, ಮೂಡುಮಾರ್ನಾಡು
6) ಸರ್ವೊತ್ತಮ ಮೂಲ್ಯ-ಹುಳಜಾಲು, ಮೂಡುಮಾರ್ನಾಡು
7) ರಾಮಯ್ಯ- ದರೆಗುಡ್ಡೆ
8) ದುಜಪಿನ್ ಜೊಸ್ಪಿನ್ ಮಿನೇಜಸ್- ದಡ್ಡುಮನೆ, ದರೆಗುಡ್ಡೆ
9) ವೀರೇಂದ್ರ ಕೋಟ್ಯಾನ್- ಜಗಿದೊಟ್ಟು, ಕೆಲ್ಲಪುತ್ತಿಗೆ
10) ಪ್ರೇಮ ಪೂಜಾರಿ- ಪೊಲ್ಲೆದೊಟ್ಟು, ಕೆಲ್ಲಪುತ್ತಿಗೆ
ಗಣ್ಯರ ಭೇಟಿ:
ವರದಿ ಸಾಲಿನಲ್ಲಿ ನಮ್ಮ ಸಂಘಕ್ಕೆ . ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಾದ ಮಾನ್ಯ ಊ.ಓ.ರಮೇಶ್ ಹಾಗೂ ಮಂಗಳೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಮಾನ್ಯ ಸುಧೀರ್ ಕುಮಾರ್ ಜಿ. ಮತ್ತು ಮೂಡುಬಿದಿರೆ ತಾಲೂಕಿನ ಸಹಕಾರಿ ಸಂಘಗಳ ಸಿ ಡಿ ಓ ಶ್ರೀ ವಿಲಾಸ್ ಭೇಟಿ ನೀಡಿ ಸಂಘದ ಅಭಿವೃದ್ಧಿ ಬಗ್ಗೆ ಉತ್ತಮ ಸಲಹೆಗಳನ್ನು÷ ನೀಡಿರುತ್ತಾರೆ.
ಮುಂದಿನ ಯೋಜನೆಗಳ ವಿವರ:
- ಸಂಘದ ಸಂಪನ್ಮೂಲವನ್ನು ಹೆಚ್ಚಿಸುವರೇ ವಿವಿಧ ಠೇವಣಿ ಯೋಜನೆಗಳ ಮೂಲಕ ರೂ.108 ಕೋಟಿ ಠೇವಣಿ ಹೊಂದುವ ಗುರಿ ನಿಗದಿಪಡಿಸಲಾಗಿದೆ.
- ಸಂಘದ ಕೇಂದ್ರ ಕಛೇರಿ ಕಟ್ಟಡದ ಹಿಂಭಾಗದಲ್ಲಿ ನಬಾರ್ಡಿನ ಬಹು ಸೇವಾ ಕೇಂದ್ರ ಯೋಜನೆಯಡಿ ಸುಮಾರು 1.45 ಕೋಟಿ ವೆಚ್ಚದಲ್ಲಿ ನೂತನ ರೈತಸಿರಿ ಗೋದಾಮು ಕಟ್ಟಡ ಉದ್ಘಾಟನೆಗೊಂಡಿದ್ದು ಇದರ ಅಂಗಡಿ ಕೋಣೆಗಳನ್ನು ರೈತರ ಕೃಷಿ ಉತ್ಪನ್ನಗಳ ದಾಸ್ತಾನು ಇಟ್ಟು ಅದರ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು ,ಹೆಚ್ಚುವರಿ ಕೋಣೆಗಳನ್ನು ಸಂಘ ಸದಸ್ಯರುಗಳಿಗೆ ವ್ಯಾಪಾರ ವಹಿವಾಟು ಮಾಡಲು ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗುವುದು. ರೈತರಿಗೆ ಬೇಕಾಗುವ ಕೃಷಿ ಸವಲತ್ತು ಹಾಗೂ ರೇಶನ್, ರಾಸಾಯನಿಕ ಗೊಬ್ಬರಗಳನ್ನು ಇದರ ಅಂಗಡಿ ಕೋಣೆಗಳಲ್ಲಿ ವಿತರಿಸಲಾಗುವುದು.
2.ಸಂಘದ ಕೇಂದ್ರ ಕಛೇರಿಯಲ್ಲಿ ಉದ್ಘಾಟನೆಗೊಂಡ ವಜ್ರಸಿರಿ ಸಭಾಂಗಣವನ್ನು ಬಾಡಿಗೆಗೆ ಸಮಾರಂಭ ನಡೆಸಲು ನೀಡಲಾಗುವುದು. - ಕಾರ್ಯಕ್ಷೇತ್ರದಲ್ಲಿರುವ ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ರೈತರನ್ನು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಸಂಘದ ಸದಸ್ಯರನ್ನಾಗಿ ಸೇರಿಸಿಕೊಳ್ಳುವುದು.
ಕೃತಜ್ಞತೆಗಳು:-
ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ ಸದಸ್ಯರಿಗೂ, ಠೇವಣಾತಿದಾರರಿಗೂ,
ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದ ಎಲ್ಲಾ ಸದಸ್ಯರಿಗೆ,
ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೂ, ವ್ಯವಸ್ಥಾಪನಾ ನಿರ್ದೇಶಕರು ಮತ್ತು ವಲಯ ಮೇಲ್ವಿಚಾರಕರಿಗೂ,
ದ.ಕ.ಜಿಲ್ಲಾ ಸಹಕಾರ ಸಂಘಗಳಉಪನಿಬoಧಕರಿಗೂ, ಸಹಾಯಕ ನಿಬಂಧಕರು
ಹಾಗೂ ಲೆಕ್ಕ ಪರಿಶೋಧನೆಯನ್ನು ಸಮಯಕ್ಕೆ ನೆರವೇರಿಸಿಕೊಟ್ಟ ಸನದು ಲೆಕ್ಕ ಪರಿಶೋಧಕರಾದ ಸಿಎ ಬಿ ಸುದೇಶ್ಕುಮಾರ್ ರೈ ಮಂಗಳೂರು ಇವರಿಗೂ,
ಸಂಘದ ಎಲ್ಲಾ ಗ್ರಾಹಕರಿಗೆ ಮತ್ತು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿರುವ ಸಂಘದ ಎಲ್ಲಾ ಸಿಬ್ಬಂದಿ ವರ್ಗಕ್ಕೆ, ಸಂಘದ ಎಲ್ಲಾ ಸದಸ್ಯರಿಗೆ, ಕಾನೂನು ಸಲಹೆಗಾರರಿಗೆ, ಸ್ಥಿರಾಸ್ತಿ ಹಾಗೂ ವಾಹನ ಮೌಲ್ಯಮಾಪಕರಿಗೆ, ಅಧಿಕಾರಿ ವರ್ಗದವರಿಗೆ,
ನಮ್ಮ ಸಂಘದ ಮೇಲಿಟ್ಟ ವಿಶ್ವಾಸ, ಸಹಕಾರಕ್ಕೆ ಮನದಾಳದ ಕೃತಜ್ಞತೆಯನ್ನು ಸಲ್ಲಿಸುತ್ತಾ
ಮುಂಬರುವ ವರ್ಷಗಳಲ್ಲಿ ಈ ಸಂಘವು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುವoತಾಗಲು ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತಾ ಈ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ.
ಜೈ ಸಹಕಾರ
































