ಮೂಡುಬಿದಿರೆ ಪುರಸಭೆಯ ಉದ್ದೇಶಿತ ಬೇಜವಾಬ್ದಾರಿ



ಚಿತ್ರಗಳು : ಬಸ್ ನಿಲ್ದಾಣ ಪ್ರವೇಶ ರಸ್ತೆಯಲ್ಲಿ ಕಸ ರಾಶಿ ಮತ್ತು ಕಸ ತುಂಬಿಸುವುದು.
ಮೂಡುಬಿದಿರೆ ಪುರಸಭೆಯ ಮಾಸಿಕ ಸಭೆಯಲ್ಲಿ ಸಾರ್ವಜನಿಕ ಕುಂದು ಕೊರತೆ ಹಾಗೂ ಪುರಸಭೆಯ ಆಡಳುತದಲ್ಲಿನ ಉದ್ದೇಶಿತ ನಿರ್ಲಕ್ಷ್ಯಗಳಾವುದೂ ಚರ್ಚೆಗೆ ಬರುವುದೇ ಅತಿ ವಿರಳ. ಲಾಭದಾಯಕ ವಿಷಯಗಳಾದ ಟೆಂಡರ್,ಬಾಡಿಗೆ,ಬಿಲ್ ಪಾವತಿ ಅದುವೇ ಮುಂತಾದ್ದನ್ನು ತಾಸುಗಟ್ಚಲೆ ಗಲಭೆ ಎಬ್ಬಿಸುತ್ತಾರೆ.
ಪುರಸಭೆಯ ವ್ಯಾಪ್ತಿಯಲ್ಲಿ ಕಸವಿಲೇವಾರಿ ಪದ್ಧತಿಯಿದ್ದರೂ ಕೂಡ ಕಸವನ್ನು ಕೊಂಡೊಯ್ಯುವ ಕಾರ್ಮಿಕರಿಗೆ ಕಿರುಕುಳ ಕೊಡುವುದನ್ನು,ಓಡಾಡವ ವಾಹನಗಳು ಅಪಘಾತಕ್ಕೆ ತುತ್ತಾಗುವುದನ್ನು,ನಡೆದಾಡುವ ನಾಗರಿಕರನ್ನು ವಾಹನಗಳ ಢಿಕ್ಕಿಗೆ ಸಿಲುಕುವಂತೆ ಮಾಡುವ ವ್ಯವಸ್ಥೆ ಪೂರೈಸಿಕೊಟ್ಟಿದೆ.
ಪುರಸಭಾ ಮುಖ್ಯಾಧಿಕಾರಿಯವರಿಗೆ ಎಷ್ಟು ಬಾರಿ ದೂರಿಕೊಂಡರೂ ಅವರು ಕಚೇರಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಯಾವುದೇ ಸೂಚನೆಯನ್ನೂ ಕೊಡುವುದಿಲ್ಲ. ಆ ಶಿಸ್ತು ನಿಯಮಗಳು ಅಂದಿನ ಪುರಸಭಾಧಿಕಾರಿ ರಾಯಪ್ಪನವರಲ್ಲಿ ಮಾತ್ರ ಇದ್ದುದು. ಅವರು ಪ್ರತಿ ದಿನ ನಗರ ಪ್ರದಕ್ಷಿಣೆ ಮಾಡುತ್ತಿದ್ದರು ಎನ್ನುವುದನ್ನು ಯಾರೂ ಮರೆಯಲಿಕ್ಕಿಲ್ಲ. ಅವರ ಆದರ್ಶವನ್ನು ಮಣ್ಣುಪಾಲು ಮಾಡಬೇಕೆಂದೇ ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿಗಳು ಸತತ ಹೋರಾಟ ಮಾಡಿರುವುದು ಇತಿಹಾಸ. ಅದನ್ನೇ ಈಗಿನ ಶಾಸಕ ಉಮಾನಾಥ ಕೋಟ್ಯಾನ್ ಅವರು ಕೂಡಾ ಬೆಂಬಲಿಸುತ್ತ ಬಂದಿರುವುದು ನಾಗರಿಕರ ಸೋಲು.
ಪುರಸಭೆಯ ಆಡಳಿತ ಅಧಿಕಾರ ತಮ್ಮ ಪಕ್ಷದವರಲ್ಲಿಯೇ ಇರಬೇಕೆಂದು ಕಸರತ್ತು ಮಾಡುವ ಈ ಶಾಸಕ ಕೂಡಾ ತನ್ನ ಪಕ್ಷದ ಸದಸ್ಯರಿಗೆ ಯಾವುದೇ ಕ್ಲಾಸ್ ತೆಗೆದುಕೊಳ್ಳುವುದಿಲ್ಲ.
ಮುಖ್ಯ ರಸ್ತೆ ಬದಿಯಲ್ಲಿಯೇ ಅಂಗಡಿ,ಬಾರ್ ಎಂಡ್ ರೆಸ್ಟೋರೆಂಟ್, ಹೊಟೇಲಿನವರು ಕಸದ ರಾಶಿ ಸುರಿಯುವುದು. ಅದನ್ನು ಕಸದ ಟೆಂಪೋಗಲ್ಲಿ ತುಂಬಿಸಬೇಕಾದವರು ರಸ್ತೆ ನಿಯಮಗಳನ್ನೇ ಅನಿವಾರ್ಯವಾಗಿ ಮರೆತು ಬಿಡಬೇಕಾಗುತ್ತದೆ.
ಅದೇ ರೀತಿ ಮೂಡುಬಿದಿರೆ ಬಸ್ ನಿಲ್ದಾಣಕ್ಕೆ ಮುಖ್ಯ ರಸ್ತೆಯಿಂದ ಪ್ರವೇಶಿಸುವ ಮಾರ್ಗದ ಬದಿಯಲ್ಲಿಯೇ ಹೊಟೇಲಿನವರು ಕಸ ಮುಂತಾದ್ದನ್ನು ಸುರಿದಿಡುತ್ತಾರೆ. ಕಾರ್ಕಳ , ಮಂಗಳೂರು ಕಡೆಯಿಂದ ಬರುವ ಬಸ್ಸು ಆ ರಸ್ತೆಯಲ್ಲಿ ನಿಂತು ಕಸ ತುಂಬಿಸುವ ವಾಹನಕ್ಕೆ ಢಿಕ್ಕಿ ಹೊಡೆಯುವುದೇ ಸಂದರ್ಭ. ವೇಗವಾಗಿ ಬರುವ ಬಸ್ಸುಗಳು ಬಹಳ ಸಂಧಿಗ್ಧ ಪರಿಸಿಥಿತಿಯಲ್ಲಿ ನಿಲ್ದಾಣಕ್ಕೆ ಪ್ರವೇಶಿಸುತ್ತವೆ. ಬರುವ ಇತರ ಕಡೆಯಲ್ಲೂ ಮುಖ್ಯ ರಸ್ತೆಯುದ್ದಕ್ಕೂ ಹಾಕಿರುವ ಕಸದ ರಾಶಿ ವಿಂಗಡಿಸಿ ವಾಹನಕ್ಕೆ ತುಂಬಿಸುವವರಿಂದಲೇ ಟ್ರಾಫಿಕ್ ಸಮಸ್ಯೆ.
ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸುಲಭ ಮಾರ್ಗಗಳಿವೆಯಾದರೂ ಪುರಸಭೆಯವರು ಕ್ಯಾರೇ ಅನ್ನುತ್ತಿಲ್ಲ. ಹೊಟೇಲು,ಅಂಗಡಿಯವರು ಕಸವಿಲೇವಾರಿಗೆ ಹಣ ಪಾವತಿ ಕೊಡುತ್ತಾರೆಯೆನ್ನುವ ಹಂಗಿಗೋಸ್ಕರ ಅವರು ಏನೇ ಮಾಡುವುದಕ್ಕೂ ಬೆಂಬಲಿಸುತ್ತ ಸಾರ್ವಜನಿಕರಿಗೆ ಕಿರುಕುಳ ಕೊಡುವ ಇರಾದೆಯಾಗಿದೆಯೊ ತಿಳಿಯದು.
ಇನ್ನು ಮುಂದಾದರೂ ಬಸ್ ನಿಲ್ದಾಣ ಪ್ರವೇಶ ರಸ್ತೆ ಬದಿಯಲ್ಲಿ ಕಸದ ರಾಶಿ ಸುರಿಯುವುದಕ್ಕೆ ಬದಲಾಗಿ ಬೇರೆ ಸ್ಥಳವನ್ನು ಸೂಚಿಸಲಿ. ಬಹಳ ಇಕ್ಕಟ್ಟಿನ ಪ್ರಧಾನ ರಸ್ತೆಯಿರುವಲ್ಲಿಯೂ ಕಸ ಸುರಿಯದಂತೆ ಕಡ್ಡಾಯವಾಗಿ ಪಾಲಿಸುವ ಸೂಚನೆ ನೀಡಬೇಕಾಗಿದೆ
-ವಿ. ಕೆ. ವಾಲ್ಪಾಡಿ
































