ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಗದೀಶ್ ಪೈ ಇನ್ನಿಲ್ಲ
ಕಾರ್ಕಳ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿದ್ದುಕೊಂಡು, ಆರ್ ಎಸ್ ಎಸ್ ವಲಯದ ಉನ್ನತ ಮಟ್ಟದ ಸಂಪರ್ಕವನ್ನು ಹೊಂದಿದ್ದ ಡಾ. ಜಗದೀಶ್ ಪೈ (62) ಜು. 28ರಂದು ನಿಧನ ಹೊಂದಿದರು.
ಆತ್ರೇಯಾ ಕ್ಲಿನಿಕ್‌ನ ಮಾಲಕ ಡಾ. ಜಗದೀಶ್ ಪೈ (62) ಕನ್ನಡ ಹಾಗೂ ಕೊಂಕಣಿ ಸಾಹಿತಿ ಆಗಿದ್ದ ಡಾ. ಪೈ ಅವರು ರಾಷ್ಟ್ರೀಯವಾದಿ ಲೇಖನ, ಹಾಸ್ಯ ಲೇಖನ, ವ್ಯಕ್ತಿತ್ವ ವಿಕಸನ ಕುರಿತು ಹಲವಾರು ಪುಸ್ತಕ ಪ್ರಕಟಿಸಿದ್ದ ಅವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಡಾ. ನಂದಾ ಪೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.





































