ಇರುವೈಲ್ ನಲ್ಲಿ ಅಕ್ರಮ ಕೋಳಿ ಅಂಕ; ಕಾರ್ಯಚರಣೆ ನಡೆಸಿದ ಪೊಲೀಸರು

Picture of RB NEWS

RB NEWS

Bureau Report

ಇರುವೈಲ್ ನಲ್ಲಿ ಅಕ್ರಮ ಕೋಳಿ ಅಂಕ; ಕಾರ್ಯಚರಣೆ ನಡೆಸಿದ ಪೊಲೀಸರು

ಮೂಡುಬಿದಿರೆ: ಇರುವೈಲ್ ನ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ .ಪಿ.ಜಿ ದಾಳಿ ನಡೆಸಿದ್ದಾರೆ.

ಜುಲಾಯಿ 24 ರಂದು ಸಂಜೆ 06.30 ಗಂಟೆಗೆ ಇರುವೈಲು ಗ್ರಾಮದ ಸುಗ್ಗೋಣಿ ಎಂಬಲ್ಲಿ ಕೆಲವು ವ್ಯಕ್ತಿಗಳು ಸೇರಿ ಎರಡು ಅಂಕದ ಕೋಳಿಗಳಿಗೆ ಹರಿತವಾದ ಬಾಲ್ ಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಟ್ಟು ಅವುಗಳ ಮುಂದೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದರು.

ಮಾಹಿತಿಯನ್ವಯ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿದ ಕೋಳಿ ಅಂಕದ ಜೂಜಾಟಗಾರರು ಓಡಿ ಪರಾರಿಯಾಗಲು ಪ್ರಯತ್ನಿಸಿದರೆ, ಇನ್ನೂ ಕೆಲವರು ಓಡಿ ಹೋಗಿದ್ದರು.
ಘಟನಾ ಸ್ಥಳದಲ್ಲಿ ಕೋಳಿಅಂಕದಲ್ಲಿ ನಿರತರಾಗಿದ್ದ ಸಂತೋಷ್ ನಾಯ್ಕ @ ಅಟ್ಟೆ ಸಂತು, ವೇದವ್ @ ಸಂತೋಷ್ @ ಚಿಮಣಿ ಸಂತು, ಕಿಶೋರ್ ಮತ್ತು ಪೂವಪ್ಪ ಪೂಜಾರಿ ಎಂಬವರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಓಡಿ ತಪ್ಪಿಸಿಕೊಂಡವರ ಬಗ್ಗೆ ವಿಚಾರಿಸಲಾಗಿ ಅವರ ಹೆಸರು ಮಿಥುನ್ ಕುತ್ಯಾಡಿ, ಮಹಾಬಲ ಪೂಜಾರಿ, ವಿಷ್ಣು ಪೂಪಾಡಿ, ಜಗ್ಗು ಕರ್ಪೆ @ ಜಗದೀಶ್, ಗುಮ್ಮಣ್ಣ, ಮನೋಜ್ ಕುಮಾರ್, ಹರೀಶ್ ತಂದೆ: ಅಚ್ಚಪ್ಪ ಪೂಜಾರಿ ಮತ್ತು ಇತರರು ಎಂಬುದಾಗಿ ತಿಳಿದುಬಂದಿದೆ.

ಆಪಾದಿತ ರ ವಶದಲ್ಲಿದ್ದ ಕೋಳಿ ಅಂಕ ಎಂಬ ನಶೀಬಿನ ಜೂಜಾಟಕ್ಕೆ ಪಣವಾಗಿ ಉಪಯೋಗಿಸಲಿದ್ದ 4 ಹುಂಜಗಳನ್ನು ಮತ್ತು 1 ಸಾವಿರ ರೂಪಾಯಿ ವಶಕ್ಕೆ ಪಡೆದು ಆಪಾದಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಯಿತು.

  • ಸದ್ರಿ ಪ್ರಕರಣದ ಆಪಾಧಿತ ಸಂತೋಷ@ ಅಟ್ಟೆ ಸಂತು ಎಂಬುವನು ವಿರುದ್ಧ ಈ ಹಿಂದೆ ನಾಲ್ಕು ಕೋಳಿ ಅಂಕದ ಪ್ರಕರಣ ದಾಖಲಾಗಿದ್ದು ಈತನ ವಿರುದ್ಧಸಭಾರತೀಯ ನ್ಯಾಯ ಸಂಹಿತೆ ಕಲಂ :112(ಸಂಘಟಿತ ಅಪರಾಧ) ರಂತೆ ಕ್ರಮ ಜರುಗಿಸಲಾಗಿದೆ.

ಪೊಲೀಸ್ ಆಯುಕ್ತ ಸುಧೀರ ಕುಮಾರ್ ರೆಡ್ಡಿ ಐ.ಪಿ.ಎಸ್ ರವರ ಆದೇಶದಂತೆ ಹಾಗೂ ಉಪ ಪೊಲೀಸ್ ಆಯುಕ್ತ ಮಿಥುನ್ ಹೆಚ್.ಎನ್ ಐ.ಪಿ.ಎಸ್ (ಕಾ ಮತ್ತು ಸು) ಮತ್ತು ರವಿಶಂಕರ (ಅ ಮತ್ತು ಸ) ರವರ ಹಾಗೂ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ್ ರವರ ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ಮತ್ತು ಸಿಬ್ಬಂದಿಗಳಾದ ರಾಜೇಶ, ಪ್ರದೀಪ, ಸುರೇಶ, ವೆಂಕಟೇಶ, ಚಂದ್ರಶೇಖರ ಉಮೇಶ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top