ನಿಡ್ಡೋಡಿ ಪರಿಸರದಲ್ಲಿ ಅಕ್ರಮ ಗಣಿಗಾರಿಕೆ : ಬೀದಿಗಿಳಿದ ಗ್ರಾಮಸ್ಥರು ; ನ್ಯಾಯೋಚಿತ ಹೋರಾಟಕ್ಕೆ ಬೆಂಬಲಿಸಿದ ಶಾಸಕ ಉಮಾನಾಥ ಕೋಟ್ಯಾನ್
ಮೂಡುಬಿದಿರೆ : ನಿಡ್ಡೋಡಿಯ ಬಂಗೇರಪದವು ಪರಿಸರದಲ್ಲಿ ತಲೆಎತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ಅನಧಿಕೃತವಾಗಿ ರಾಜಾರೋಷವಾಗಿ ಸಂಚರಿಸುತ್ತಿರುವ ಲಾರಿ, ಟಿಪ್ಪರ್ ಗಳಿಂದ ರಸ್ತೆ ಅವಘಾತಗಳು ಸಂಖ್ಯೆ ಹೆಚ್ಚುತ್ತಿವೆ.
ಈ ಬೆಳವಣಿಯಿಂದಾಗಿ ಆಕ್ರೋಶಗೊಂಡ ನಿಡ್ಡೋಡಿ, ಕಲ್ಲಮುಂಡ್ಕೂರು, ತೆಂಕಮಿಜಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮಾಹಿತಿ ತಿಳಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ನ್ಯಾಯೋಚಿತ ಬೇಡಿಕೆಗೆ ಬೆಂಬಲ ಸೂಚಿಸಿದರು. ಸಂಬಂಧಿತ ಅಧಿಕಾರಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.





































