ಮೂಡುಬಿದಿರೆ ಪುರಸಭಾ ಬಸ್ಸು ನಿಲ್ದಾಣದ ದುರವಸ್ಥೆ!
ಮೂಡುಬಿದಿರೆ : ಪುರಸಭಾ ಬಸ್ಸು ನಿಲ್ದಾಣದ ಬಳಿಯಲ್ಲಿ ಜಲ್ಲಿ ಪುಡಿ ರಾಶಿ ಹಾಕಿ ತಿಂಗಳುಗಳೇ ಕಳೆದಿವೆ. ಅದನ್ನು ರಾಶಿ ಹಾಕುವುದರ ಅಗತ್ಯವಿತ್ತೇ ಆಗಿದ್ದರೂ ಬೇರೆಡೆ ಸ್ಥಳಾವಕಾಶವಿದೆ.
ಮೂಡುಬಿದಿರೆ ಪುರಸಭೆಯ ಆಡಳಿತ ನಿರ್ವಹಣೆಯೇ ಹಾಗೆ ಇದೆ. ಅದಕ್ಕೆ ಈ ಬಸ್ಸು ನಿಲ್ದಾಣ ಒಂದು ಕೈಗನ್ನಡಿಯ ಹಾಗೆ ಇದೆ.


ಯಾವತ್ತೋ ಮಾಡಬೇಕಾದ ಕೆಲಸವನ್ನು ಯಾವಾಗಾವಾಗ ಮಾಡುವುದು.ಪ್ರಯಾಣಿಕರ ತಂಗುದಾಣಕ್ಕೆ ಸಿಮೆಂಟ್ ಮತ್ತು ಕೆಂಪು ಬಣ್ಣ ಹಾಕುವ ಕೆಲಸವನ್ನು ಕಳೆದ ಜಡಿ ಮಳೆಯ ದಿನಗಳಲ್ಲೇ ಮಾಡಲಾಗಿತ್ತು. ನಾಲ್ಕಾರು ದಿನಗಳಲ್ಲಿ ಪ್ರಯಾಣಿಕರು ಮಳೆಗೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಆ ಮಳೆಗೆ ಅವಸರದಲ್ಲಿ ಮಾಡಿರುವ ಕೆಲಸ ಎಷ್ಟಾದರೂ ಅಷ್ಟೆ! ಕಾಮಗಾರಿಯ ಹಣ ನಗದೀಕರಿಸುವ ಕಾಟಾಚಾರದ ಕೆಲಸ.
ಇನ್ನು ಶಿರ್ತಾಡಿ -ನಾರಾವಿ ಊರುಗಳಿಗೆ ತೆರಳುವ ಪ್ರಯಾಣಿಕರ ವಿಶ್ರಾಂತಿ ಸ್ಥಳದ ದುರವಸ್ಥೆಯೇ ಬೇರೆ. ಮಳಿಗೆಯವರೆಲ್ವರೂ ತಮ್ಮ ಮಾರಾಟ ವಸ್ತುಗಳ ಮೇಜನ್ನು ಪ್ರಯಾಣಿಕರು ಅಡ್ಡಾಡುವ ಪ್ಯಾಸೇಜಿನಲ್ಲೇ ಇಟ್ಟಿರುವುದು. ಅದನ್ನು ಸಾಕಷ್ಚು ಬಾರಿ ಪುರಸಭೆಯ ಗಮನಕ್ಕೆ ತಂದರೂ ಅಲ್ಲಿಯ ಸ್ಪಂದನವೇ ಇಲ್ಲ.
ಮೂಡುಬಿದಿರೆ ಪುರಸಭೆಯ ಮಾಸಿಕ ಸಭೆಯಲ್ಲಿ ಯಾವುದೆಲ್ಲ ವಿಷಯಗಳು ಚರ್ಚೆಗೆ ಬಂದರೂ ನಾಗರಿಕರ ಕುಂದುಕೊರತೆಗಳ ಬಗ್ಯೆ ಯಾರದ್ದೂ ಚಕಾರವಿರುವುದಿಲ್ಲ ಎಂದೇ ತಿಳಿಬೇಕಷ್ಟೆ.
-ವಿ. ಕೆ. ವಾಲ್ಪಾಡಿ






































