ವಾರಭವಿಷ್ಯ ದಿನಾಂಕ 20.07.2025 ರಿಂದ 26.07.2025 ರ ವರೆಗೆ
ವಿಶೇಷ ದಿನಗಳು :24. 07. 2025……..ಅಮಾವಾಸ್ಯಾ ,ಆಟಿ ಅಮಾವಾಸ್ಯೆ
ಮೇಷ : ಅವಕಾಶಗಳು ಎಲ್ಲೆಡೆಯಲ್ಲಿಯೂ ಸಿಗಲಿದೆ. ಅದು ನಿಮ್ಮ ಅರಿವಿಗೆ ಬರಲಿದೆ. ಅದೃಷ್ಟದ ಬೆಂಬಲ ಸಿಗಲಿದೆ. ಸಾಮಾಜಿಕವಾಗಿ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇರುತ್ತದೆ. ದೂರ ಸಂಚಾರವನ್ನು ಮುಂದೂಡ ಬೇಕಾದ ಸಂದರ್ಭ ಬರಲಿದೆ. ಸಾಡೇ ಸಾತ್ ಶನಿಯ ಪ್ರಭಾವದಿಂದ ಹಣದ ವಿಷಯದಲ್ಲಿ ಎಚ್ಚರ ವಹಿಸುವುದು ಅವಶ್ಯವಾಗಿದೆ. ವಿವಾಹ ಅಪೇಕ್ಷಿತರು ಸ್ವಲ್ಪ ಸಮಯ ಕಾಯುವ ಅನಿವಾರ್ಯತೆ ಇರುತ್ತದೆ. ಪಾರ್ವತೀ ಸ್ವಯಂವರ ಮಂತ್ರ ಪಾರಾಯಣ ಮಾಡಿರಿ.
ವೃಷಭ : ನಿಮ್ಮ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಪ್ರಕಟಿಸಿಕೊಂಡರೆ, ಖಂಡಿತವಾಗಿಯೂ ಪರಿಹಾರ ಸಿಗಲಿದೆ. ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕಾಗುತ್ತದೆ. ನಿಮ್ಮ ವಿಷಯಗಳಲ್ಲಿ ನೀವೇ ಕಾರ್ಯೋನ್ಮುಖರಾಗುವುದು ಅಗತ್ಯವಿದೆ. ಶನಿ ಅನೇಕ ಮೂಲಗಳಿಂದ ಆದಾಯವನ್ನು ತೋರಿಸಲಿದ್ದಾನೆ. ನಿಮ್ಮ ವಯಕ್ತಿಕ ವಿಷಯಗಳಲ್ಲಿ ಬೇರೆಯವರನ್ನು ಪ್ರವೇಶಿಸಲು ಬಿಡಬೇಡಿರಿ. ಕಲೆಯ ವಿಷಯದಲ್ಲಿ ಆಸಕ್ತಿ ಇರುವವರಿಗೆ ಶುಕ್ರ ಒಳ್ಳೆಯ ವೇದಿಕೆಯನ್ನು ಒದಗಿಸಲಿದ್ದಾನೆ.
ಮಿಥುನ : ವ್ಯಯದಲ್ಲಿ ಇರುವ ಶುಕ್ರ ಸಂತಾನದ ಬಗ್ಗೆ /ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಯನ್ನು ತರಲಿದ್ದಾನೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅನಿರೀಕ್ಷಿತ ಪರಿಹಾರ ಒದಗಿ ಬರಲಿದೆ. ಆಂತರಿಕ ವೈಮನಸ್ಸು ಸಾಂಸಾರಿಕ ನೆಮ್ಮದಿಯನ್ನು ಹಾಳು ಮಾಡ ಬಹುದು. ಧನಾಗಮನದ ಏರುಪೇರು ಸಾಲದ ಮರುಪಾವತಿಗೆ ಸಮಸ್ಯೆಯನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಸಮಯ ,ಉನ್ನತ ವ್ಯಾಸಂಗ ಮಾಡುವವರಿಗೆ ರವಿ ಮತ್ತು ಬುಧ ಹೆಚ್ಚಿನ ಪ್ರತ್ಸಾಹ ಕೊಡಲಿದ್ದಾನೆ.
ಕರ್ಕಾಟಕ : ಶುಕ್ರ ಭಾಧಕ ಕ್ಷೇತ್ರದಲ್ಲಿ ಇರುವುದರಿಂದ ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಿದೆ. ನಮ್ಮಲ್ಲಿ ಹಣ ಎಷ್ಟೇ ಇದ್ದರೂ ಆದರಲ್ಲಿ ನೆಮ್ಮದಿ ಇರಬೇಕು. ನೀವಾಡುವ ಮಾತಿನಲ್ಲಿ ಸಂಯಮವಿರಲಿ. ಅಷ್ಟಮದಲ್ಲಿ ಇರುವ ರಾಹು ಹುಸಿ ಅಪವಾದವನ್ನು ಕೇಳುವಂತೆ ಮಾಡಲಿದ್ದಾನೆ. ದೈವಾನುಗ್ರಹಕ್ಕೆ ಒಕ್ಟೋಬರ್ ತನಕ ಕಾಯಬೇಕಾಗುತ್ತದೆ. ಶನಿಯ ಭಾಗ್ಯ ಸ್ಥಾನದ ಪ್ರಭಾವದಿಂದ ತಂದೆ ತಾಯಿಯವರ ಆರೋಗ್ಯದ ಕಡೆಗೆ ಗಮನ ಕೊಡಬೇಕಾಗುತ್ತದೆ.
ಸಿಂಹ : ದೇವರು ಒಂದು ಕೈಯಲ್ಲಿ ಕೊಡುತ್ತರಂತೆ ,ಇನ್ನೊಂದು ಕೈಯಿಂದ ತೆಗೆದುಕೊಳ್ಳುತ್ತಾರಂತೆ. ಇದೆ ರೀತಿ ಗುರು ರವಿ ಬುಧ ಮಾಡಲಿದ್ದಾರೆ. ದೃಢತೆ ಮತ್ತು ದೂರ ದೃಷ್ಟಿಯುಳ್ಳ ಯೋಜನೆಗಳತ್ತ ನಿಮ್ಮ ಹುಡುಕಾಟ ಮುಂದುವರಿಯಲಿ. ಯಶಸ್ಸು ನಿಮ್ಮದಾಗಲಿದೆ. ಸಂಸಾರವನ್ನು ಒಡೆಯುವ ಕೆಲಸ ನಿಮ್ಮಿಂದ ಆಗದಿರಲಿ. ವಯಕ್ತಿಕ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಹಣಕಾಸಿನ ವಿಷಯದಲ್ಲಿ ಶುಭ ಸುದ್ಧಿ ಒದಗಿ ಬರಲಿದೆ. ಅವಿವಾಹಿತರಿಗೆ ಸಂಬಂಧ ಕೂಡಿಬರಲು ಹೋರಾಟ ಮಾಡುವ ಅಗತ್ಯವಿದೆ.
ಕನ್ಯಾ : ಸಪ್ತಮದ ವಕ್ರಿ ಶನಿಯ ಕಾರಣದಿಂದ ಕೌಟುಂಬಿಕ ಒತ್ತಡ ಉಂಟಾಗಲಿದೆ. ಆದರೂ ನಿಮ್ಮ ಕರ್ತವ್ಯ ಪ್ರಜ್ನೆ ನಿಮ್ಮನ್ನು ಜಾಗೃತಗೊಳಿಸಲಿದೆ. ನಿಮ್ಮ ಪ್ರಯತ್ನ ಬಲ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರಲಿ. ಕುಜ ಮತ್ತು ಕೇತು ವ್ಯಯದಲ್ಲಿ ಇರುವುದರಿಂದ ತಾಳ್ಮೆ ಅಗತ್ಯವಿದೆ.ಹಣ ಕಾಸಿನ ವಿಷಯದಲ್ಲಿ ಎಚ್ಚರವಿರಲಿ. ನಿಮ್ಮವರೇ ನಿಮಗೆ ಶತ್ರುಗಳಾದಾಗ, ನಿಮ್ಮ ಕುಲ ದೇವರನ್ನು ರಕ್ಷಣೆಗಾಗಿ ಪ್ರಾರ್ಥಿಸಿರಿ.ಭಾವನಾತ್ಮಕ ಹಳೆಯ ವಿಚಾರಗಳನ್ನು ಮರೆತು ಬಿಡುವುದೇ ಲೇಸು.
ತುಲಾ : ಭಾಗ್ಯದ ಗುರು ನಿಮ್ಮ ವ್ಯವಹಾರದಲ್ಲಿ ನೀವು ಎಣಿಸಿದಂತೆ ನಡೆಸಿಕೊಡಲಿದ್ದಾನೆ. ಕರ್ಮದಲ್ಲಿರುವ ರವಿ ಬುಧ ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ಕೊಡಲಿದ್ದಾನೆ. ರಾಜಕೀಯ ಗಣ್ಯರಿಗೆ ಉತ್ತಮ ಸ್ಥಾನ ಮಾನ ಸಿಗುವಂತೆ ಮಾಡಲಿದ್ದಾನೆ. ಭೂಮಿ ವ್ಯವಹಾರ ಮಾಡುವವರಿಗೆ ಒಳ್ಳೆಯ ಅವಕಾಶ ಲಭಿಸಲಿದೆ. ಮಕ್ಕಳ ವಿಷಯದಲ್ಲಿ ಮನಸ್ಸಿಗೆ ಬೇಸರ ಬರಲಿದೆ. ಹೊಂದಾಣಿಕೆಯಿಂದ ಮುನ್ನೆಡೆಯಿರಿ. ಅಷ್ಟಮದಲ್ಲಿ ಚಂದ್ರ ಶುಕ್ರ ಇರುವುದರಿಂದ ಮನಸ್ಸಿನ ಒತ್ತಡವನ್ನು ನೀವೇ ಪರಿಹರಿಸಿಕೊಳ್ಳಿರಿ.
ವೃಶ್ಚಿಕ : ಹಿರಿಯರನ್ನು ಕಳೆದುಕೊಳ್ಳುವ ಸಮಯ. ಅವರಿಂದ ದೂರವಾಗುವ ಸಮಯ.ಭಾಗ್ಯದಲ್ಲಿ ರವಿ ಬುಧ ಭಾಧಕ ಸ್ಥಾನದಲ್ಲಿ ಇದ್ದಾರೆ. ಉದ್ಯೋಗದಲ್ಲಿಇರುವವರು ಬಹಳ ತಾಳ್ಮೆಯಿಂದಿದ್ದು ಮೇಲಧಿಕಾರಿಗಳೊಂದಿಗೆ ಹೊಂದಿಕೊಂಡು ಹೋಗುವುದು ಅಗತ್ಯವಿದೆ. ಕಲಹ ಮಾಡಿಕೊಂಡಲ್ಲಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಉತ್ತಮವಾಗಿ ಪರಿಶ್ರಮ ಪಟ್ಟಲ್ಲಿ ಮಾತ್ರಾ ಯಶಸ್ವಿಯಾಗಬಹುದು. ಗುರು ಅಷ್ಟಮದಲ್ಲಿ ಇದ್ದಾನೆ.ಮಕ್ಕಳ ಬಗ್ಗೆ ಎಚ್ಚರವಿರಲಿ.
ಧನು : ಸುಖ ಸ್ಥಾನದ ಶನಿ ,ಅಷ್ಟಮದ ಬುಧ ಮತ್ತು ರವಿ ನಿಮಗೆ ಜೀವನದಲ್ಲಿ ನಿರಾಶೆಯನ್ನು ಮೂಡಿಸುವವರಾಗಿದ್ದಾರೆ. ಗುರು ಸಪ್ತಮದಲ್ಲಿ ಇದ್ದುಕೊಂಡು ಮನಸ್ಸಿಗೆ ಧೈರ್ಯವನ್ನು ಕೊಡುವವನಾಗಿದ್ದಾನೆ. ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿರಿ. ಮುನ್ನೆಡೆಯ ದಿನಗಳು ಬಹಳ ಹತ್ತಿರದಲ್ಲಿಯೇ ಇವೆ. ನಿಮ್ಮ ಕ್ರಿಯಾ ಶೀಲತೆ ,ಅದ್ಭುತ ಚಿಂತನೆ ವೃತ್ತಿರಂಗದಲ್ಲಿ ಮುನ್ನೆಡೆಗೆ ಸಹಕಾರಿಯಾಗಲಿದೆ. ವೈವಾಹಿಕ ಜೀವನದಲ್ಲಿ ಆಗೊಮ್ಮೆ ಈಗೊಮ್ಮೆ ಕಿರಿ ಕಿರಿ ಇರುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ.
ಮಕರ : ಸಂಘಟಿತ ಪ್ರಯತ್ನದಿಂದ ಮನೆಯ ಸಮಸ್ಯೆಗಳು ಹಂತ ಹಂತವಾಗಿ ಉಪಶಮನ ಗೊಳ್ಳಲಿವೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ತುಂಬಾ ಎಚ್ಚರದಿಂದ ಇರಬೇಕು ಇದು ವಕ್ರಿ ಶನಿಯ ಸೂಚನೆಯಾಗಿದೆ. ಅವಿವಾಹಿತರ ನೆಂಟಸ್ತಿಕೆಯ ವಿಚಾರವಾಗಿ ,ದೈವಾನುಗ್ರಹದ ಕೊರತೆಯ ಕಾರಣದಿಂದ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ವಾಹನ ಚಾಲನೆಯಲ್ಲಿ ,ತಾಯಿಯವರ ಆರೋಗ್ಯದ ವಿಷಯದಲ್ಲಿ ನಿಮ್ಮ ಆರೋಗ್ಯದ ವಿಷಯದಲ್ಲಿ ಎಚ್ಚರವಾಗಿರಬೇಕು ಇದು ಕುಜ ಕೇತು ಇವರ ಸೂಚನೆಯಾಗಿದೆ. ಮೂಲವ್ಯಾಧಿ ಸಮಸ್ಯೆ ಜೋರಾಗಲಿದೆ.
ಕುಂಭ : ಜನ್ಮರಾಶಿಯಲ್ಲಿ ಇರುವ ರಾಹು ಅವನಿಗೆ ವಕ್ರಿ ಶನಿಯ ದೃಷ್ಟಿ ಇರುವುದರಿಂದ ಮಿಶ್ರ ಫಲವನ್ನು ನೀಡಲಿದ್ದಾರೆ. ಪಂಚಮದಲ್ಲಿ ಗುರು ಇದ್ದರೂ ನಿರಾಶಾ ಭಾವನೆ ನಿಮ್ಮನ್ನು ಕಾಡಲಿದೆ. ಮುಖ್ಯವಾಗಿ ನಿಮ್ಮ ಕರ್ತವ್ಯ ,ಹೊಣೆಗಾರಿಕೆಯನ್ನು ಮರೆಯದಿರಿ. ಧನಾಗಮನಕ್ಕೆ ಯಾವುದೇ ಕೊರತೆ ಇರುವುದಿಲ್ಲ. ವಾಹನ ಖರೀದಿ ,ಹಾಗೂ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಕೆಲಸ ಕಾರ್ಯಗಳಲ್ಲಿ ವಿಘ್ನಗಳೇ ತೋರಿಬಂದರೂ ಧೈರ್ಯದಿಂದ ನಿಭಾಯಿಸಿರಿ.
ಮೀನ : ವಕ್ರಿ ಶನಿ ಅವನ ದೃಷ್ಟಿ ರಾಹುವಿನ ಮೇಲೆ ಇರುವುದನ್ನುಗಮನಿಸಿರಿ. ಪಂಚಮದಲ್ಲಿ ರವಿ ಬುಧ ಇರುವುದು ಕೂಡಾ ಶುಭ ಸೂಚನೆಯಲ್ಲ. ಬೇರೆಯವರ ಮೇಲೆ ತಪ್ಪು ಅಭಿಪ್ರಾಯ ಪಡುವುದಕ್ಕೆ ಅರ್ಥವೇ ಇಲ್ಲ.ಈ ವಾರವನ್ನು ತಣ್ಣನೆಯ ಮನಸ್ಸಿನಿಂದ ಆರಂಭಿಸಿರಿ. ರಾಜೀ ಮನೋಭಾವವಿರಲಿ. ಸಾಂಸಾರಿಕ ಒತ್ತಡಗಳು ತಲೆ ತಿನ್ನಲಿವೆ. ಆರ್ಥಿಕವಾಗಿ ಮಿಶ್ರ ಫಲವಿರುತ್ತದೆ. ಅವಿವಾಹಿತರು ಬರುವ ಅಕ್ಟೋಬರ್ ತಿಂಗಳ ವರೆಗೆ ಕಾಯುವ ಅಗತ್ಯವಿದೆ. ಹಿರಿಯರ ಆರೋಗ್ಯದ ಕಡೆಗೆ ಗಮನ ಅಗತ್ಯವಿದೆ.ಇದು ಕುಜ ಕೇತುವಿನ ಸೂಚನೆಯಾಗಿದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು.ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.






































