ಮಾತೃ ವಾತ್ಸಲ್ಯ
ಮಾತೆಯ ಮಮತೆಯ! ಗಾತೆಯ ನೀನು ಮರೆತೆಯಾ!
ನೀತಿಯ ಪಾಠವಿದು! ಅರಿತರೆ ಒಳಿತು!ಮೂತಿಯ ತಿರುಗಿಸಿ ಓಡುವೆಯಾ!! ಪಲ್ಲವಿ!!
ಕತ್ತ ಬಾಗಿಸು ಕಂದ ! ಹೆತ್ತ ಒಡಲಿಗೆ ಎಂದೂ !
ನಿತ್ಯ ಮರೆಯದೆ ! ಮಾತೆಯನು ಸ್ಮರಿಸು!
ತುತ್ತು ನೀಡಿದವಳಿವಳು! ಜೀವನದಲಿ ನಿನಗಂದು!
ಹೆತ್ತಬ್ಬೆಯನ್ನು ಬಯಸಿ ! ಭಜಿಸಿ ಪೂಜಿಸು!!೧!!
ಪ್ರಥಮ ಹೆಜ್ಜೆಗೆ ನಿನ್ನ! ಸಹಕರಿಸಿದವಳನ್ನ!
ಕೊನೆಯ ಹೆಜ್ಜೆಗೆ ನೀನು! ಸಹಕರಿಸಲೇ ಬೇಕು!
ಮತಿಹೀನನಾಗದೆ ಪ್ರತಿಕ್ಷಣವ ನೆನೆಸು!
ಚ್ಯುತಿತಾರದಾ ಬದುಕು! ನೀಡುವನು ಪಡುತಿರುಪತೀಶನು! ನಿನಗೆಂದೆಂದೂ!!೨!!































