ನಟನೆ ಕೇವಲ ಆಟವಲ್ಲ ಅದು ಅಭಿವ್ಯಕ್ತಿಯ ಶಕ್ತಿ

Picture of RB NEWS

RB NEWS

Bureau Report


ಶಿರ್ತಾಡಿ (ಮೂಡುಬಿದಿರೆ) : ನಟನೆ ಕೇವಲ ಆಟವಲ್ಲ ಅದು ಅಭಿವ್ಯಕ್ತಿಯ ಶಕ್ತಿ ಎಂಬಂತೆ ಜು. 12 ರಂದು ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ವೈಭವೋಪೇತವಾಗಿ ವೇಷಧಾರಣಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ವಿವಿಧ ಪಾತ್ರಗಳನ್ನು ಒಳಗೊಂಡ ವಿಭಿನ್ನ ಆಕರ್ಷಕ ವೇಷಭೂಷಣಗಳಲ್ಲಿ ತೊಡಗಿಕೊಂಡಿದ್ದರು. ಮಕ್ಕಳ ಆತ್ಮವಿಶ್ವಾಸ ಭಾವನಾತ್ಮಕ ಪ್ರಸ್ತುತಿಕೆ ಮತ್ತು ವಿನೂತನತೆ ಎಲ್ಲರ ಮನಸ್ಸು ಗೆದ್ದಿತು.

ತೀರ್ಪುಗಾರರಾಗಿ ಸಹನ ಹಾಗೂ ಜೈಸನ್ ಪಿರೇರ ಆಗಮಿಸಿದ್ದರು.

ಕಾರ್ಯಕ್ರಮದ ಪ್ರೇರಕಶಕ್ತಿಯಾದ ಶಾಲಾ ಮುಖ್ಯೋಪಾಧ್ಯಾಯಿನಿ ಬಿಂದು ಮ್ಯಾಕ್ಸಿo ಡಿಸೋಜ ರವರು , ಸಹ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಿನಿ ಡಿ ಸೋಜಾ ನಿರೂಪಿಸಿದರು. ಸೌಮ್ಯ ಶೆಟ್ಟಿ ಧನ್ಯವಾದವಿತ್ತರು .

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top